ನಗರದಲ್ಲಿ ಬಸ್ ಗಳ ಆರ್ಭಟ, ಉಗ್ರ ಹೋರಾಟದ ಅನಿವಾರ್ಯತೆ ಇದೆ – ಯೊಗೀಶ್ ಶೆಟ್ಟಿ ಜಪ್ಪು.

Spread the love

ಮಂಗಳೂರು: ನಗರದಲ್ಲಿ ಬಸ್ ಗಳ ಅನಿಯಮಿತ ವೇಗದ ಚಾಲನೆ, ಕರ್ಕಶ ಹಾರ್ನ್ ಅಡ್ಡಾದಿಡ್ಡಿ ಚಾಲನೆ ಒಟ್ಟಿನಲ್ಲಿ ಸಾರಿಗೆ ನಿಯಮಗಳ ಉಲ್ಲಂಘನೆ , ಸಾರಿಗೆ ಇಲಾಖೆ ಮಾತ್ರ ಜಾಣ ಕುರುಡು.ಈಗಾಗಲೇ ಹಲವಾರು ಕಡೆ ಬಸು ಚಾಲಕರ ಅಜಾಗರೂಕತೆಯ ಚಾಲನೆಯಿಂದಾಗಿ ಹಲವಾರು ಜೀವಗಳನ್ನು ಬಲಿ ಪಡೆದು ಕೊಂಡಿದೆ, ಬಸ್ಸು ಗಳ ಮಾಲಕರು ಬಸ್ಸಿನ ಸಂಪೂರ್ಣ ನಿರ್ವಹಣೆಯನ್ನು ಚಾಲಕರಿಗೆ ಅಥವಾ ನಿರ್ವಾಹಕರಿಗೆ ಬಿಟ್ಟು ಕೊಡುತ್ತಾರೆ , ಇವರು ಹೆಚ್ಚಿನ ಲಾಭಕ್ಕಾಗಿ ಪ್ರಯಾಣಿಕರನ್ನು ಹತ್ತಿಸುವ ಭರದಲ್ಲಿ ಅಥವಾ ಇನ್ನೊಂದು ಬಸ್ಸಿಗೆ ಪೈಪೋಟಿ ನೀಡುವ ಭರದಲ್ಲಿ ಅಜಾಗರೂಕತೆಯಿಂದ ವೇಗವಾಗಿ ಚಲಾಯಿಸುತ್ತಾರೆ, ಇಂದು ಸಹಃ ನನ್ನ ಕಣ್ಣೆದುರಲ್ಲೇ ಖಾಸಗಿ ಬಸ್ಸೊಂದು ಕಾಲೇಜು ಉಪಾನ್ಯಾಸಕಿಯ ಜೀವ ಬಲಿ ಪಡೆದು ಕೊಂಡಿದೆ, ಇದು ನಿಜಕ್ಕೂ ಹೃದಯ ವಿದ್ರಾವಕ ಘಟನೆಯಾಗಿದೆ, ಕೂಡಲೇ ಇಂತಹ ಬಸ್ಸುಗಳ ಪರವಾನಗಿ ಯನ್ನು ರದ್ದು ಮಾಡಬೇಕು ಈ ಮೂಲಕ ಎಲ್ಲಾ ಬಸ್ಸು ಚಾಲಕರಿಗೂ ಎಚ್ಚರಿಕೆಯನ್ನು ನೀಡಬೇಕು ಎಂದು ಸಾರಿಗೆ ಇಲಾಖೆಯನ್ನು ಒತ್ತಾಯಿಸುತ್ತಿದ್ದೇನೆ ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ಎಚ್ಚರಿಸಿದ್ದಾರೆ. ಈ ಹಿಂದೆಯೂ ತು.ರ.ವೇ ಕರ್ಕಶ ಹಾರ್ನ್‍ಗಳ ಬಗ್ಗೆ ಇಲಾಖೆಯ ಗಮನಕ್ಕೆ ತರುವ ನಿಟ್ಟಿನಲ್ಲಿ ಜನಜಾಗೃತಿ ಸಭೆ ಹಮ್ಮಿಕೊಂಡಿತ್ತು.

ಮಂಗಳೂರು ಹಬ್ಬದ ಗುತ್ತಿಗೆಯನ್ನು ತುಳುನಾಡಿನ ಸಂಸ್ಕತಿಯ ಬಗ್ಗೆ ಪರಿಚಯವಿಲ್ಲದ ಹೊರಗಿನವರಿಗೆ ಜಿಲ್ಲಾಡಳಿತದ ವಿರುಧ್ದ ಉಗ್ರ ಹೋರಾಟದ ಎಚ್ಚರಿಕೆ
ತುಳುನಾಡಿನ ಸಂಸ್ಕತಿ, ಸಂಪ್ರದಾಯ, ಆಹಾರ ಪದ್ದತಿ, ಇತ್ಯಾದಿಗಳನ್ನು ಪರಿಚಯಿಸುವ ಮಂಗಳೂರು ಹಬ್ಬ ಆಚರಣೆ ಸ್ವಾಗತಾರ್ಹ ಆದರೆ ಇದೀಗ ತುಳುನಾಡಿನ ಮಂಗಳೂರು ಹಬ್ಬ ಕಾರ್ಯಕ್ರಮ ಸಂಯೋಜನೆಗೆ ಬೆಂಗಳೂರಿನ ಕಂಪೆನಿಗೆ ಗುತ್ತಿಗೆ ನೀಡಿರುವುದು ಹಾಸ್ಯಾಸ್ಪದ ಹಾಗೂ ಖಂಡನೀಯ, ಮಂಗಳೂರು ಹಬ್ಬ ಆಚರಣೆ ಕಾರ್ಯಕ್ರಮ ಸಂಯೋಜನೆ, ಮಾಡುವ ಸಾಮಥ್ರ್ಯ, ಪ್ರತಿಭೆ ಮಂಗಳೂರಿನ ಸಂಘ ಸಂಸ್ಥೆಗಳಿಗೆ ಇದೆ ,ನಾವು ಬೆಂಗಳೂರಿನ ಕಂಪೆನಿಗೆ ಲಕ್ಷಾಂತರ ರೂಪಾಯಿ ನೀಡಿ ಮತ್ತು ಅವರು ಬಂದು ನಮ್ಮ ಹಬ್ಬ ಆಚರಣೆ ಸಂಘಟಿಸಲು ನಮ್ಮ ವಿರೋಧವಿದೆ, ತುಳುನಾಡಿನ ಆಹಾರ ಪದ್ದತಿಯ ಬಗ್ಗೆ ಗಂಧ ಗಾಳಿ ಗೊತ್ತಿಲ್ಲದ ಸಂಸ್ಥೆಗೆ ನೀಡುವುದಕ್ಕಿಂತ ಸ್ಥಳೀಯ ಸಂಸ್ಥೆ/ ಸಂಘ/ ವ್ಯಕ್ತಿಗಳಿಗೆ ಗುತ್ತಿಗೆ ನೀಡಬೇಕು , ಬೆಂಗಳೂರು ಹಾಗೂ ಹೊರ ಪ್ರದೇಶದ ಜನರಿಗೆ ಗುತ್ತಿಗೆ ನೀಡುವುದರ ಹಿಂದೆ ನಮಗೆ ಅನೇಕ ಸಂಶಯವಿದೆ ಜಿಲ್ಲಾಡಳಿತ ತಕ್ಷಣ ಬೆಂಗಳೂರು ಫೇಸ್ ಒನ್ ಸಂಸ್ಥೆಯಿಂದ ಗುತ್ತಗೆಯನ್ನು ಹಿಂದೆ ಪಡೆದು , ತುಳುನಾಡಿನ ಸಂಘ ಸಂಸ್ಥೆಗಳಿಗೆ ಗುತ್ತಿಗೆ ನೀಡದಿದ್ದರೆ ನಾವು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ. ಎಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ಎಚ್ಚರಿಸಿದ್ದಾರೆ.


Spread the love