ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮ – ಉಡುಪಿ ಟ್ರಾಫಿಕ್ ಪಿ.ಎಸ್.ಐ ಅಬ್ದುಲ್ ಖಾದರ್ ಎಚ್ಚರಿಕೆ
ಉಡುಪಿ: ನಗರದಲ್ಲಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸುವುದು ಉತ್ತಮ ಅದನ್ನು ತಪ್ಪಿ ನಿಯಮವನ್ನು ಉಲ್ಲಂಘನೆ ಮಾಡಿದಲ್ಲಿ ಅಂತವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಗರ ಟ್ರಾಫಿಕ್ ಪಿ ಎಸ್ ಐ ಅಬ್ದುಲ್ ಖಾದರ್ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಅವರು ಗುರುವಾರ ಉಡುಪಿಯ ಜಗನ್ನಾಥ ಸಭಾಭವನದಲ್ಲಿ ಸಂಚಾರಿ ನಿಯಮಗಳ ಪಾಲನೆ ಕುರಿತು ಸಮಾಲೋಚನಾ ಸಭೆಯಲ್ಲಿ ಮಾತನಾಡಿ ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿದ್ದು ಅವುಗಳನ್ನು ಖಡಿವಾಣ ಹಾಕಲು ಮುಂದಾಗಿದ್ದೆವೆ. ನಗರದಲ್ಲಿ ನಿಗದಿ ಮಾಡಿದಂತಹ ಪಾರ್ಕಿಂಗ್ ಸ್ಥಳದಲ್ಲಿಯೆ ವಾಹನ ಸವಾರರು ವಾಹನವನ್ನು ಪಾರ್ಕಿಂಗ್ ಮಾಡಬೇಕು ಅಡ್ಡಾದಿಡ್ದಿಯಾಗಿ ನಿಲ್ಲಿಸಿ ಹೋಗುವವರ ವಿರುದ್ಧ ಪ್ರಕರಣವನ್ನು ದಾಖಲು ಮಾಡಲಾಗುವುದು. ಅಂಗಡಿಗೆ ತೆರಳಿ ಶಾಪಿಂಗ್ ಹೋಗುವ ಸವಾರರು ಸೂಕ್ತ ಪಾರ್ಕಿಂಗ್ ಸ್ಥಳದಲ್ಲಿಯೇ ಪಾರ್ಕಿಂಗ್ ಮಾಡಬೇಕು ಎಂದರು.
ಈಗಾಗಲೆ ಬೈಕ್, ಕಾರು,ಇತರ ವಾಹನಗಳಲ್ಲಿ ಅಳವಡಿಕೆ ಮಾದಿರುವ ಅನಧಿಕೃತ ಲೈಟ್ ಗಳನ್ನು ನಂಬರ್ ಪ್ಲೆಟ್ ಗಳ ಜೊಡಣೆ ಇವೆಲ್ಲವನ್ನು ತೆಗೆಯುತ್ತಿದ್ದು ಮಾತ್ರವಲ್ಲದೆ ಕಾರ್ಯಚರಣೆಯನ್ನು ನಗರದಲ್ಲಿ ಮಾಡಿದ್ದು ಅವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಕರ್ಕಶ ಹಾರ್ನ್ ಅಳವಡಿಕೆ ಬುಲೇಟ್ ನಂತಹ ಬೈಕ್ ಗಳ ಸೈಲೆನ್ಸರ್ ಹೆಚ್ಚುವರಿ ಮಾಡಿದಂತಹ ಸವಾರರ ವಿರುದ್ಧ ಅಗತ್ಯ ಕ್ರಮಗಳನ್ನು ಈಗಾಗಲೇ ತೆಗೆದುಕೊಂಡಿದ್ದು ಅದನ್ನು ತೆಗೆದು ಹಾಕಲಾಗಿದೆ.
ಅಂತಹ ಅಳವಡಿಕೆ ಮಾಡುವ ಕಂಪೆನಿ ಹಾಗೂ ಅಂಗಡಿಯವರಿಗೆ ಎಚ್ಚರಿಕೆಯನ್ನು ನೀಡಿದ್ದು, ಒಮ್ಮೆ ಅಳವಡಿಕೆ ಮಾಡಿರುವ ಸೈಲೆನ್ಸರ್ ನ್ನು ಮಾತ್ರ ಉಪಯೋಗಿಸಿಕೊಳ್ಳಬೇಕು ಹೆಚ್ಚುವರಿಯಾಗಿ ಕರ್ಕಶವಿರುವ ಸೈಲೆನ್ಸರ್ ಅಳವಡಿಕೆ ಮಾಡಬಾರದೆಂದು ಸೂಚನೆಯನ್ನು ನೀಡಲಾಗಿದೆ. ಒಂದು ವೇಳೆ ಅಳವಡಿಕೆ ಮಾಡಿ ಪರಿಸರಕ್ಕೆ ತೊಂದರೆ ನೀಡಿದವರ ವಿರುದ್ಧ ಪ್ರಕರಣವನ್ನು ದಾಖಲಾಗಿಸುವುದು. ಮತ್ತು ವಾಹನದಲ್ಲಿ ಅಳವಡಿಕೆ ಮಾಡಿರುವ ಟಿಂಟ್ ಗ್ಲಾಸ್ ಕರ್ಕಶ ಹಾರ್ನ್, ಹೆಚ್ಚುವರಿ ದೀಪ ಅಳವಡಿಕೆ ಮಾಡಿರುವ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಿ ದಂಡವನ್ನು ಹಾಕಿದ್ದು ಅದನ್ನು ಮುಂದುವರೆಸಲಾಗುವುದು ಎಂದರು.
ವಾಹನ ಸವಾರರು ಸಂಚಾರ ವೇಳೆಯಲ್ಲಿ ಮೊಬೈಲ್ ಬಳಕೆ ಕುಡಿದು ಚಲಾವಣೆ, ಲೈಸೆನ್ಸ್ ರಹಿತ ಡ್ರೈವಿಂಗ್ ಇನ್ಶುರೆನ್ಸ್,, ಹೊಗೆ ತಪಾಸಣೆ, ಇತರ ದಾಖಲೆಗಳನ್ನು ಹೊಂದಿರದೆ ವಾಹನ ಚಲಾವಣೆಯನ್ನು ಮಾಡಿದಲ್ಲಿ ಅಂತವರ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಪ್ರಕರಣವನ್ನು ದಾಖಲಿಸಲಾಗುವುದು. ಟ್ಯಾಕ್ಷಿ, ರಿಕ್ಷಾ ಚಾಲಕರು ಅವರಿಗೆ ಇರುವ ಸೂಕ್ತ ಸಮವಸ್ತ್ರ ವನ್ನು ಧರಿಸಿಕೊಂಡು ವಾಹನ ಚಲಾಯಿಸಬೇಕು. ಯಾರಾದರೂ ನಿಯಮವನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದಲ್ಲಿ ಅವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಪ್ರಕರಣವನ್ನು ದಾಖಲಿಸುತ್ತೆವೆ ಎಂದರು
ಕಾರ್ಯಕ್ರಮದಲ್ಲಿ ನಗರ ಠಾಣಾಧಿಕಾರಿ ಸಕ್ತಿವೇಲು ಮಾತನಾಡಿ ನಗರದಲ್ಲಿ ಅಟೋ ಚಾಲಕರು, ಬಸ್ ಚಾಲಕರು ರಸ್ತೆ ಮಧ್ಯೆಯೇ ಜನರನ್ನು ಹತ್ತಿಸಿಕೊಂಡು ಹೋಗದೆ ಸೂಕ್ತ ನಿಲ್ದಾಣಗಳಲ್ಲಿಯೇ ಪ್ರಯಾಣಿಕರನ್ನು ತಮ್ಮ ವಾಹನಗಳಿಗೆ ಹತ್ತಿಸಿಕೊಂಡು ಹೋಗಬೇಕು. ರಸ್ತೆ ಮಧ್ಯೆ ಏಕಾಏಕಿ ನಿಲ್ಲಿಸಿದರೆ ಇದರಿಂದ ಹಿಂದಿನ ಸವಾರರಿಗೆ ತೊಂದರೆಯಾಗಿ ಅಪಘಾತ ಸಂಭವಿಸುವು ಸಾಧ್ಯತೆಗಳು ಹೆಚ್ಚು ಆದ್ದರಿಂದ ವಾಹನ ಚಾಲಕರು ಇದನ್ನು ಗಮನದಲ್ಲಿರಿಸಬೇಕು ಎಂದರು.
ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಯಮವನ್ನು ಪಾಲಿಸಿಬೇಕು.ಯಾರು ಪಾಲಿಸುವುದಿಲ್ಲ ಅಂತವರ ವಿರುದ್ಧ ಪ್ರಕರಣವನ್ನು ದಾಖಲು ಮಾಡಲಾಗುತ್ತದೆ. ಬೈಕ್ ಸವಾರರು ರಿಕ್ಷಾಚಾಲಕರು ತಮ್ಮ ತಮ್ಮ ವಾಹನಗಳಲ್ಲಿ ಅಳವಡಿಕೆ ಮಾಡಿರುವ ಹೆಚ್ಚುವರಿ ಕರ್ಕಶ ಹಾರ್ನ್, ದೀಪಗಳನ್ನು ತೆಗೆಯಬೇಕು ಇದರಿಂದ ಪರಿಸರ ಉತ್ತಮವಾಗಿರುತ್ತದೆ ಮಾತ್ರವಲ್ಲದೆ ಜನರಿಗೂ ಯಾವುದೇ ತೊಂದರೆಯಾಗುವುದಿಲ್ಲ ಎಂದರು
ಸಭೆಯಲ್ಲಿ ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಅಧ್ಯಕ್ಷರು, ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರು, ರಿಕ್ಷಾ ಚಾಲಕರು, ವಾಹನ ಸವಾರರು, ಸಂಚಾರಿ ಪೋಲಿಸ್ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು