ಮಂಗಳೂರು: ಮರೋಳಿ ವಾರ್ಡ್ ನಲ್ಲಿ ಅನೇಕ ಕಡೆ ಏರು ತಗ್ಗು ಪ್ರದೇಶಗಳಿರುತ್ತದೆ. ಹಂತಹಂತವಾಗಿ ಈ ಪ್ರದೇಶದಲ್ಲಿ ಕಾಮಗಾರಿಗಳು ನಡೆಯುತ್ತದೆ. ಎಲ್ಲಾ ಕಾಮಗಾರಿಗಳಿಗೆ ಸಾರ್ವಜನಿಕರ ಸಹಕಾರ ಅತೀ ಮುಖ್ಯ. ಈ ಪ್ರದೇಶವು ನಗರ ವಿಸ್ತ್ರತ ಭಾಗವಾಗಿರುವುದರಿಂದ ಹೆಚ್ಚಿನ ಅನುದಾನವನ್ನು ನೀಡಲು ಬಯಸಿದ್ದೇವೆ. ಕೆಲವು ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಆಗಿದೆ. ಅತೀ ಶೀಘ್ರದಲ್ಲಿಯೇ ಅದರ ಸಂಪರ್ಕ ಕೊಡಲಾಗುವುದು ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶ್ರೀ ಜೆ.ಆರ್. ಲೋಬೊ ಹೇಳಿದರು.
ಅವರು ಮರೋಳಿ ವಾರ್ಡ್‍ನಲ್ಲಿ ಸುಮಾರು 22 ಲಕ್ಷರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆ ಕಾಮಗಾರಿಯ ಉದ್ಘಾಟನೆ ಹಾಗೂ ಸುಮಾರು 4 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು. ಶಾಸಕರ ನಿಧಿ, ಎಸ್.ಎಫ್.ಸಿ. ನಿಧಿ ಹಾಗೂ ಕಾರ್ಪೋರೇಟರ್‍ರ ಬಜೆಟ್ ಅನುದಾನದ ನಿಧಿಯನ್ನು ಈ ಕಾಮಗಾರಿಗೆ ಬಳಸಲಾಗಿದೆ.
ಸಭೆಯಲ್ಲಿ ಸ್ಥಳೀಯ ಕಾರ್ಪೋರೇಟರ್ ಕೇಶವ ಮರೋಳಿ, ಬ್ಲಾಕ್ ಅಧ್ಯಕ್ಷ ವಿಶ್ವಾಸ್ ದಾಸ್, ವಾರ್ಡ್ ಅಧ್ಯಕ್ಷ ಗಂಗಾಧರ್, ಕೆ.ಎಸ್.ಆರ್.ಟಿ.ಸಿ. ನಿರ್ದೇಶಕ ಟಿ.ಕೆ. ಸುಧೀರ್, ಕಾಂಗ್ರೆಸ್ ಮುಖಂಡ ಶಶಿರಾಜ್ ಅಂಬಟ್, ರಮಾನಂದ ಪೂಜಾರಿ, ದೇವಣ್ಣ, ವಿಲ್ಫಿ, ನೆಲ್ಸನ್ ಮೊಂತೆರೊ ಮೊದಲಾದವರು ಉಪಸ್ಥಿತರಿದ್ದರು.