ನಗರದ ಸಂತ ಅಲೋಶಿಯಸ್ ಕಾಲೇಜಿಗೆ ಯುಜಿಸಿ ಪ್ರತಿಷ್ಟಿತ ಸಂಶೋಧನಾ ಅನುದಾನ

Spread the love

ನಗರದ ಸಂತ ಅಲೋಶಿಯಸ್ ಕಾಲೇಜಿಗೆ ಯುಜಿಸಿ ಪ್ರತಿಷ್ಟಿತ ಸಂಶೋಧನಾ ಅನುದಾನ

ಯುಜಿಸಿ ನೂತನವಾಗಿ ಪ್ರಾರಂಭಿಸಿರುವ ಯುಜಿಸಿ-ಸ್ಟ್ರೈಡ್ ಸಂಶೋಧನಾ ಸ್ಕೀಮ್‍ನಡಿಯಲ್ಲಿ ಸ್ವಾಯತ್ತ ಸಂತ ಅಲೋಶಿಯಸ್ ಕಾಲೇಜನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರದ ಅಭಿವೃದ್ಧಿ ಕೇಂದ್ರೀಕೃತ ಈ ಯೋಜನೆಯಲ್ಲಿ ಸಂಶೋಧನಾ ಸಾಮಥ್ರ್ಯವನ್ನು ವೃದ್ಧಿಸುವುದು ಹಾಗೂ ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಪಡಿಸುವ ಮೂಲ ಆಶಯಗಳನ್ನು ಹೊಂದಲಾಗಿದೆ.

ಇಡೀ ದೇಶದಲ್ಲಿ ಕೇವಲ 34 ಶಿಕ್ಷಣ ಸಂಸ್ಥೆಗಳಿಗೆ (ವಿಶ್ವವಿದ್ಯಾಲಯಗಳೂ ಸೇರಿದಂತೆ) ಮಾತ್ರ ತಲಾ ಒಂದು ಕೋಟಿ ರೂಪಾಯಿಗಳ ಈ ಯೋಜನಾ ಅನುದಾನ ಮಂಜೂರಾಗಿದ್ದು ಕರ್ನಾಟಕ ರಾಜ್ಯದ ಮೂರು ಶಿಕ್ಷಣ ಕೇಂದ್ರಗಳಲ್ಲಿ ಸಂತ ಅಲೋಶಿಯಸ್ ಕಾಲೇಜೂ ಒಂದು ಎನ್ನುವುದು ಹೆಮ್ಮೆಯ ವಿಷಯ. ಈ ಯೋಜನೆ 3 ವರ್ಷಗಳ ಅವಧಿ ಹೊಂದಿದೆ.

ಸಂತ ಅಲೋಶಿಯಸ್ ಕಾಲೇಜು ಈ ಯೋಜನೆಗೆ ಪೂರಕವಾಗಿ ಕರಾವಳಿ ಕರ್ನಾಟಕದ ಸಾಂಸ್ಕøತಿಕ ಅಧ್ಯಯನವನ್ನು ಆಯ್ಕೆ ಮಾಡಿಕೊಂಡಿದ್ದು ಈ ಪ್ರದೇಶದ ಸಾಂಸ್ಕøತಿಕ ವೈವಿಧ್ಯಗಳನ್ನು ಗುರುತಿಸಿ, ಪ್ರೋತ್ಸಾಹಿಸಿ, ದಾಖಲಿಸಿ ಜನಪ್ರಿಯಗೊಳಿಸುವುದಲ್ಲದೆ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕøತಿಕ ಜೀವನದ ಮೇಲೆ ಆಗಿರುವ ಪರಿಣಾಮಗಳನ್ನು ಕ್ರಿಯಾತ್ಮಕ ಸಂಶೋಧನೆ ಮೂಲಕ ಅಧ್ಯಯನ ಮಾಡುವ ಉದ್ದೇಶ ಹಮ್ಮಿಕೊಂಡಿದೆ.

ಈ ಕ್ರಿಯಾಸಂಶೋಧನಾ ಯೋಜನೆ ಮೂಲಕ ಅಧ್ಯಾಪಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಹಾಗೂ ಅವರ ಸಂಶೋಧನಾ ಸಾಮಥ್ರ್ಯವನ್ನು ವೃದ್ಧಿಸುವ ಚಟುವಟಿಕೆಗಳನ್ನು ನಡೆಸಲಾಗುವುದು. ಕಾಲೇಜಿನ ಭಾಷಾ ವಿಭಾಗಗಳು, ಮಾನವಿಕ ವಿಭಾಗಗಳು, ಸಾಮಾಜಿಕ ವಿಜ್ಞಾನ ವಿಭಾಗಗಳು ಹಾಗೂ ಜೈವಿಕ ವಿಜ್ಞಾನ ವಿಭಾಗಗಳು ಜಂಟಿಯಾಗಿ ಸಂಶೋಧನಾ ಕಾರ್ಯಗಳನ್ನು ನಡೆಸಲಿವೆ.

ಕಾಲೇಜಿನ ಪ್ರಾಂಶುಪಾಲ ರೆ.ಡಾ.ಪ್ರವೀಣ್ ಮಾರ್ಟಿಸ್ ಹಾಗೂ ಯೋಜನೆಯ ಸಂಯೋಜಕರಾಗಿರುವ ಡಾ.ಆಲ್ವಿನ್ ಡೇಸಾ ಅವರ ನೇತೃತ್ವದಲ್ಲಿ ಸಂಘಟನಾತ್ಮಕ, ಸರ್ವತೋಮುಖ ಬೆಳವಣಿಗೆ ಹಾಗೂ ಸುಸ್ಥಿರ ಅಭಿವೃದ್ಧಿಯ ನಿಟ್ಟಿನಲ್ಲಿ ಸಂಬಂಧಪಟ್ಟ ಸಮೂಹಗಳನ್ನು ಒಟ್ಟುಗೂಡಿಸಿ ಅವರನ್ನೂ ಈ ಸಂಶೋಧನಾ ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಂಡು ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ಸಂಶೋಧನಾ ಸಾಮಥ್ರ್ಯವನ್ನು ಹೆಚ್ಚಿಸುವ ಗುರಿ ಹೊಂದಿದೆ.


Spread the love