ಮಂಗಳೂರು: 19ನೇ ಫೆಡರೇಷನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ 2015 ಕ್ರೀಡಾಕೂಟದ ಎರಡನೇಯ ದಿನ ನಡೆದ ಮಹಿಳೆಯರ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಕರ್ನಾಟಕದ ದೀಪಾಮಲೆ ದೇವಿ ಚಿನ್ನ ಗೆದ್ದಿದ್ದಾರೆ.
ದೀಪಾಮಲೆ ದೇವಿ ನಡಿಗೆ ಸ್ಪರ್ಧೆಯನ್ನು 1:44:29 ಸಮಯದಲ್ಲಿ ಪೂರ್ಣಗೊಳಿಸಿ ವಿಜೇತರಾದರು. ನಂತರ ಸ್ಥಾನವನ್ನು ಪಂಜಾಬಿನ ಸಂದೀಪ್ ಕೌರ್ (ಬೆಳ್ಳಿ) ಹಾಗೂ ಪ್ರೀಯಾಂಕ ( ಕಂಚು ) ಪದಕ ಪಡೆದಿದ್ದಾರೆ.
ಈ ಸಂದರ್ಭ ಭಾರತೀಯ ಕೀಡಾ ಪ್ರಾಧೀಕಾರದ ಅಂತಾರಾಷ್ಟ್ರೀಯ ತರಬೇತುದಾರ ಡಾ.ಆರ್.ಗಾಂಧಿ ಮಾತನಾಡಿ, ನಡಿಗೆ ಸ್ಪರ್ಧೆಯಲ್ಲಿ ವಿಜೇತರಾಗಿರುವ ಮೂವರು ಕ್ರೀಡಾಪಟುಗಳೂ ರಿಯೋ ಓಲಿಂಪಿಕ್ಸ್ ಗೆ ಅರ್ಹತೆ ಗಳಿಸಿರುವುದಾಗಿ ತಿಳಿಸಿದರು.