ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 74 ಕೋಟಿ ಅನುದಾನ- ಪ್ರಮೋದ್ ಮಧ್ವರಾಜ್
ಉಡುಪಿ: ಉಡುಪಿ ವಿಧಾನಸಭಾ ವ್ಯಾಪ್ತಿಯಲ್ಲಿ ನಮ್ಮ ಗ್ರಾಮ ನಮ್ಮರಸ್ತೆ ಯೋಜನೆಯಡಿಯಲ್ಲಿ 74 ಕೋಟಿ ರೂ ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ರಾಜ್ಯದ ಮೀನುಗಾರಿಕೆ, ಯುವ ಸಬಲೀಕರಣ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಅವರು ಸೋಮವಾರ, ಚಾಂತಾರು ನಲ್ಲಿ 305.30 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ, ಎನ್ ಹೆಚ್ 16 ರಿಂದ ಕೃಷಿಕೇಂದ್ರ ರಸ್ತೆ ಅಭಿವೃದ್ದಿ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದರು.
ನಗರಪ್ರದೇಶದ ರಸ್ತೆಗಳು ಅಭಿವೃದ್ದಿ ಹೊಂದದರೆ ಸಾಲದು, ಗ್ರಾಮೀಣ ಭಾಗದ ರಸ್ತೆಗಳೂ ಅಭಿವೃದ್ದಿ ಹೊಂದಬೇಕು , ಗ್ರಾಮೀಣ ಪ್ರದೇಶದ ಜನತೆಗೆ ಉತ್ತಮ ಗುಣಮಟ್ಟದ ರಸ್ತೆಭಾಗ್ಯ ಸಿಗಬೇಕು ಎನ್ನುವುದು ಮಾನ್ಯಮುಖ್ಯಮಂತ್ರಿಗಳ ಆಶಯ, ಅದಕ್ಕಾಗಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ಉಡುಪಿ ವಿಧಾನಸಭ ಕ್ಷೇತ್ರದಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 45 ಕಾಮಗಾರಿಗಳಿಗೆ 74 ಕೋಟಿ ರೂ ಬಿಡುಗಡೆಯಾಗಿದ್ದು, ಈಗಾಗಲೇ 54 ಕೋಟಿ ವೆಚ್ಚದಲ್ಲಿ 33 ಕಾಮಾಗಾರಿಗಳು ಮುಕ್ತಾಯಗೊಂಡಿದ್ದು, ಉಳಿದ ಕಾಮಗಾರಿಗಳು ಪ್ರಗತಿಯ ಹಂತದಲ್ಲಿದ್ದು, ಶೀಘ್ರದಲ್ಲಿ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿವೆ , ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ರಾಜಪಥಗಳಾಗಿ ಮಾರ್ಪಡಲಿವೆ ಎಂದು ಸಚಿವರು ಹೇಳಿದರು.
ಜನರ ಆಶೋತ್ತರಗಳಿಗೆ ಪ್ರಾಮಾಣಿಕವಾಗಿ, ಸೇವಕನಂತೆ ಕೆಲಸ ನಿರ್ವಹಿಸುತ್ತಿದ್ದು, ಜನಸೇವೆ ಸದಾ ಬದ್ದವಾಗಿದ್ದು, ಜನರಿಗೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಸಚಿವರು ಹೇಳಿದರು.
ಸೋಮವಾರ ಒಟ್ಟು 21 ಕೋಟಿ ರೂ ಮೊತ್ತದ 6 ರಸ್ತೆ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ಮತ್ತು 7 ಕೋಟಿ ಮೊತ್ತದ 2 ಸೇತುವೆ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸವನ್ನು ಸಚಿವರು ನೆರವೇರಿಸಿದರು.
ಅಮ್ಮುಂಜೆ ಪ.ಜಾತಿ ಕಾಲೋನಿ ರಸ್ತೆ ಶಂಕುಸ್ಥಾಪನೆ 40 ಲಕ್ಷ ರೂ, ಕೆಮ್ಮಣ್ಣು ಜ್ಯೋತಿನಗರದಿಂದ ನೇಜಾರ್ ರಸ್ತೆ ಅಭಿವೃಧ್ದಿ ಉದ್ಘಾಟನೆ 167.10 ಲಕ್ಷ ರೂ, ನೇಜಾರು ಜಂಗಮರ ಬೆಟ್ಟುವಿನಿಂದ ನಿಡಂಬಳ್ಳಿ – ಕೆಮ್ಮಣ್ಣು ರಸ್ತೆ ಅಭಿವೃದ್ದಿ ಉದ್ಘಾಟನೆ 226.10 ಲಕ್ಷ ರೂ, ಕುಕ್ಕುಡೆ ವೈದ್ಯ ನಾಥೇಶ್ವರ ಬೊಬ್ಬುಸ್ವಾಮಿ ದೈವಸ್ಥಾನದ ಎದುರಿನ ಪ.ಜಾತಿ ಕಾಲನಿ ರಸ್ತೆ ಅಭಿವೃಧ್ದಿ ಶಂಕುಸ್ಥಾಪನೆ 40 ಲಕ್ಷ ರೂ, ಎನ್ ಹೆಚ್ 16 ರಿಂದ ಕೃಷಿಕೇಂದ್ರ ರಸ್ತೆ ಅಭಿವೃದ್ದಿ ಉದ್ಘಾಟನೆ 305.30 ಲಕ್ಷ, ಹೆಚ್.ಸಿ ಯಿಂದ ಟಿ-15 ರಸ್ತೆ ಅಭಿವೃದ್ದಿ ಉದ್ಘಾಟನೆ 263.30 ಲಕ್ಷ, ಬೆಳ್ಮಾರು ಪ.ಪಂಗಡ ಕಾಲೋನಿ ರಸ್ತೆ ಶಂಕುಸ್ಥಾಪನೆ 30 ಲಕ್ಷ ರೂ, ಬಾಯರಬೆಟ್ಟುವಿನಿಂದ ಗೋದನಕಟ್ಟೆ ವಯಾ ಕಕ್ಕುಂಜೆ-ಗೋರಪಳ್ಳಿ ಸೇತುವೆ ಶಂಕುಸ್ಥಾಪನೆ 299.30 ಲಕ್ಷ, ಕರ್ಜೆ- ಹಲುವಳ್ಳಿಯಿಂದ ಇಂಕ್ಲಾಡಿ ರಸ್ತೆ ಅಭಿವೃಧ್ದಿ ಉದ್ಘಾಟನೆ 131.20 ಲಕ್ಷ ರೂ, ಕರ್ಜೆ- ಹಲುವಳ್ಳಿಯಿಂದ ಇಂಕ್ಲಾಡಿ ಸೇತುವೆ ಶಂಕುಸ್ಥಾಪನೆ 375.80 ಲಕ್ಷ, ಬಾಳೆಬೆಟ್ಟುವಿನಿಂದ ಕೆಳಬೆಟ್ಟು ಪ.ಜಾತಿ ಕಾಲೋನಿ ಸಂಪರ್ಕ ರಸ್ತೆ ಅಭಿವೃದ್ಧಿ ಶಂಕುಸ್ಥಾಪನೆ 50 ಲಕ್ಷ ರೂ, ಕೆಂಜೂರು-ನಾಲ್ಕೂರುನಿಂದ ಹೊರಲಾಳಿ 5 ಸೆಂಟ್ಸ್ ಚಪ್ಪರಮಟ ಮೂಡಬೆಟ್ಟು ರಸ್ತೆ ಅಭಿವೃದ್ದಿ ಉದ್ಘಾಟನೆ 172.70 ಲಕ್ಷ, ನಾಲ್ಕೂರು ಅಮರಕಲ್ಲು ಹೆಸ್ಕುಂದ ಪ.ಪಂಗಡ ಕಾಲೋನಿ ರಸ್ತೆ ಅಭಿವೃದ್ದಿ ಶಂಕುಸ್ಥಾಪನೆ 40 ಲಕ್ಷ ರೂ ಕಾಮಗಾರಿಗಳನ್ನು ಸಚಿವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಜಿ.ಪಂ. ಸದಸ್ಯ ಜನಾರ್ಧನ ತೋನ್ಸೆ, ಮೈರ್ಮಾಡಿ ಸುಧಾಕರ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ಗೋಪಿ ನಾಯ್ಕ್, ಸುನೀತಾ ಶೆಟ್ಟಿ, ದಿನಕರ ಪೂಜಾರಿ, ಚಾಂತಾರು ಗ್ರಾ.ಪಂ ಅಧ್ಯಕ್ಷೆ ಸರಸ್ವತಿ, ಕರ್ಜೆ ಗ್ರಾ.ಪಂ ಅಧ್ಯಕ್ಷೆ ನಾಗರತ್ನಾ , ಇಂಜಿನಿಯರ್ ಗಳಾದ ಸತೀಶ್, ವಿಜಯೇಂದ್ರ, ತ್ರಿಣೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.