Home Mangalorean News Kannada News ನಮ್ಮ ಯೋಗ್ಯತೆಯನ್ನು ಪ್ರಶ್ನಿಸುವ ಯಶಪಾಲ್  ಸುವರ್ಣ  ಅವರ ಯೋಗ್ಯತೆ ಮೊದಲು ತಿಳಿದುಕೊಳ್ಳಲಿ – ಕಾಂಗ್ರೆಸ್

ನಮ್ಮ ಯೋಗ್ಯತೆಯನ್ನು ಪ್ರಶ್ನಿಸುವ ಯಶಪಾಲ್  ಸುವರ್ಣ  ಅವರ ಯೋಗ್ಯತೆ ಮೊದಲು ತಿಳಿದುಕೊಳ್ಳಲಿ – ಕಾಂಗ್ರೆಸ್

Spread the love

ನಮ್ಮ ಯೋಗ್ಯತೆಯನ್ನು ಪ್ರಶ್ನಿಸುವ ಯಶಪಾಲ್  ಸುವರ್ಣ  ಅವರ ಯೋಗ್ಯತೆ ಮೊದಲು ತಿಳಿದುಕೊಳ್ಳಲಿ – ಕಾಂಗ್ರೆಸ್

ಉಡುಪಿ: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ   ಸಿದ್ಧರಾಮಯ್ಯನವರು ಪ್ರತಿಜ್ಞಾ ವಿಧಿ ಸ್ವೀಕರಿಸಿದ ಅರ್ಧ ಗಂಟೆಯಲ್ಲಿಯೇ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೊಳಿಸಿ ಯು.ಪಿ.ಎ ಸರಕಾರ  ಜಾರಿಗೆ ತಂದ ಆಹಾರ ಹಕ್ಕು ಮಸೂದೆಗೆ ಬದ್ಧವಾಗಿ ಈಗ ಕಾನೂನಾಗಿದ್ದು, ಅದರಂತೆ ಒಂದು ಯೂನಿಟಿಗೆ ಏಳು ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಇದರಿಂದ ರಾಜ್ಯದ ನಾಲ್ಕೂ ಕೋಟಿಗೂ ಮಿಕ್ಕಿ ಜನರಿಗೆ ಉಪಯೋಗವಾಗಿದೆ.

ಕಳೆದ  ಒಂದು  ತಿಂಗಳಿನಿಂದ  ಮುಖ್ಯಮಂತ್ರಿಗಳು  ತಮ್ಮ  ಸರ್ಕಾರದ ನಾಲ್ಕೂವರೆ  ವರ್ಷಗಳ  ಸಾಧನೆಯನ್ನು  ಪರಾಮರ್ಶಿಸಲು ಹಾಗೂ ಜನರ ಅಹವಾಲು ಆಲಿಸಿ, ಪರಿಹರಿಸಲು 90 ವಿಧಾನ ಕ್ಷೇತ್ರಗಳಲ್ಲಿ  ಸಾಧನಾ ಸಮಾವೇಶ ಹಮ್ಮಿಕೊಂಡಿದ್ದಾರೆ. ಇದು ಸರಕಾರಿ ಕಾರ್ಯಕ್ರಮ.  ಯಾವುದೇ   ರಾಜಕೀಯ ಪಕ್ಷದ  ಕಾರ್ಯಕ್ರಮವಲ್ಲ.  ಕಾರ್ಯಕ್ರಮದಲ್ಲಿ, ಹಲವು ಜನರಿಗೆ ಸರಕಾರದ ವಿವಿಧ ಸವಲತ್ತುಗಳನ್ನು ಹಾಗೂ 94 ಸಿ, 94 ಸಿ ಸಿ  ಅಡಿಯಲ್ಲಿ  ಸರಕಾರಿ ಸ್ಥಳದಲ್ಲಿ ಅಕ್ರಮವಾಗಿ  ಮನೆ  ಕಟ್ಟಿದವರಿಗೆ  ಹಕ್ಕುಪತ್ರ ನೀಡಿದ್ದಾರೆ.

 ಕಲ್ಲಡ್ಕ  ಹಾಗೂ ಪೂಣಚ್ಛ  ಬಿಸಿಯೂಟದ ಬಗ್ಗೆ ಯಾವುದೇ ಮುಜರಾಯಿ  ಇಲಾಖೆಯ  ದೇವಾಲಯಗಳಿಂದ ಶಾಲೆಗಳಿಗೆ ಅನ್ನ ಪ್ರಸಾದ  ನೀಡಬೇಕಾದಲ್ಲಿ, ಆ ಶಾಲೆಯು ಆಸುಪಾಸಿನ ಗ್ರಾಮದಲ್ಲಿದ್ದರೆ ಊಟವನ್ನು ಸರಬರಾಜು ಮಾಡಬೇಕೆಂದು ನಿಯಮವಿದೆ. ಆದರೆ ಕಲ್ಲಡ್ಕದಿಂದ ಕೊಲ್ಲೂರಿಗೆ ಅನ್ನ ಸರಬರಾಜು ಮಾಡುವುದು ಕಷ್ಟಕರವಾದುದರಿಂದ ಶಾಲೆಯ ಆಡಳಿತ ಮಂಡಳಿಗೆ  ಚೆಕ್ ರೂಪದಲ್ಲಿ ಹಣವನ್ನು ಬಿಸಿಯೂಟಕ್ಕೆ  ನೀಡಲಾಗುತ್ತಿತ್ತು. ನಿಯಮದಲ್ಲಿ ಹಣ ನೀಡುವ ಅವಕಾಶ ಇಲ್ಲ್ಲದುದುರಿಂದ  ಅನುದಾನವನ್ನು ನಿಲ್ಲಿಸಲಾಗಿದೆ ಎಂದು ಎಂದು ಜಿಲ್ಲಾ ಕಾಂಗ್ರೆಸ್  ಪ್ರಧಾನ ಕಾರ್ಯದರ್ಶಿ ಬಿ.ನರಸಿಂಹ ಮೂರ್ತಿ, ಉಡುಪಿ ಬ್ಲಾಕ್ ಅಧ್ಯಕ್ಷರಾದ ಬ್ಕಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಜನಾರ್ಧನ ಭಂಡಾರ್ಕಾರ್ ಹಾಗೂ ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


Spread the love

Exit mobile version