Home Mangalorean News Kannada News ನವರಾತ್ರಿ ಪ್ರಯುಕ್ತ ಕೆ.ಎಸ್.ಆರ್.ಟಿ.ಸಿಯಿಂದ ‘ ಉಡುಪಿ ದಸರಾ ದರ್ಶನಿ-2024’ ವಿಶೇಷ ಪ್ಯಾಕೇಜ್

ನವರಾತ್ರಿ ಪ್ರಯುಕ್ತ ಕೆ.ಎಸ್.ಆರ್.ಟಿ.ಸಿಯಿಂದ ‘ ಉಡುಪಿ ದಸರಾ ದರ್ಶನಿ-2024’ ವಿಶೇಷ ಪ್ಯಾಕೇಜ್

Spread the love

ನವರಾತ್ರಿ ಪ್ರಯುಕ್ತ ಕೆ.ಎಸ್.ಆರ್.ಟಿ.ಸಿಯಿಂದ ‘ ಉಡುಪಿ ದಸರಾ ದರ್ಶನಿ-2024’ ವಿಶೇಷ ಪ್ಯಾಕೇಜ್

ಉಡುಪಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಉಡುಪಿ ಘಟಕದದಿಂದ ಜಿಲ್ಲೆಯ ಸುತ್ತ ಮುತ್ತಲಿನ ಪ್ರದೇಶಗಳಿಗೆ “ದಸರಾ ದರ್ಶನಿ-2024” ಎಂಬ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಅಕ್ಟೋಬರ್ 3 ರಿಂದ ಅಕ್ಟೋಬರ್ 12 ರವರೆಗೆ ಕಾರ್ಯಾಚರಿಸಲಾಗುತ್ತಿದೆ.

ಪ್ಯಾಕೇಜ್ 1. ಪಂಚದುರ್ಗ ದರ್ಶನ: ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ಬೆಳಗ್ಗೆ 7.30 ಬಸ್ ಹೊರಟು, ಸೌಕೂರು ಶ್ರೀ ದುರ್ಗಾ ಪರಮೇಶ್ವರೀ ದೇವಾಸ್ಥಾನಕ್ಕೆ ಬೆಳಗ್ಗೆ 09 ಕ್ಕೆ ತಲುಪಿ, 9.15 ಕ್ಕೆ ಹೊರಟು, ಕೊಲ್ಲೂರು ಮೂಕಾಂಬಿಕ ದೇವಾಸ್ಥಾನಕ್ಕೆ ಬೆಳಗ್ಗೆ 10.30 ಕ್ಕೆ ತಲುಪಿ, 11.00 ಕ್ಕೆ ಹೊರಟು, ನಂತರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಬೆಳಗ್ಗೆ 11.30 ಕ್ಕೆ ತಲುಪಿ, ಮಧ್ಯಾಹ್ನ 12 ಕ್ಕೆ ಹೊರಟು, ಕಮಲಶಿಲೆ ಬ್ರಾಹ್ಮಿದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮಧ್ಯಾಹ್ನ 1.30 ಕ್ಕೆ ತಲುಪಿ, ಮಧ್ಯಾಹ್ನ ಊಟದ ನಂತರ, ಮಧ್ಯಾಹ್ನ 3 ಕ್ಕೆ ಹೊರಟು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸಂಜೆ 4.30 ಕ್ಕೆ ತಲುಪಿ, ಸಂಜೆ 4.45 ಕ್ಕೆ ಹೊರಟು, ನೀಲಾವರ ಶ್ರೀ ಮಹಿಷ ಮರ್ದಿನಿ ದೇವಸ್ಥಾನಕ್ಕೆ ಬಸ್ ಸಂಜೆ 5.15 ಕ್ಕೆ ತಲುಪಿ, ಸಂಜೆ 5.30 ಕ್ಕೆ ಹೊರಟು, ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಸಂಜೆ 6.15 ಹಾಗೂ ಉಡುಪಿ ಘಟಕ್ಕೆ ಸಂಜೆ 6.30 ಗಂಟೆಗೆ ಬಸ್ ತಲುಪಲಿದೆ.

ಒಟ್ಟು 223 ಕಿ.ಮೀ ಇದ್ದು, ಪ್ರಪೋಸಲ್ ದರ ವಯಸ್ಕರಿಗೆ 400 ರೂ ಹಾಗೂ ಮಕ್ಕಳಿಗೆ 350 ರೂ ನಿಗಧಿಪಡಿಸಲಾಗಿದೆ.

ಪ್ಯಾಕೇಜ್ 2. ಕ್ಷೇತ್ರ ದರ್ಶನ: ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ಬೆಳಗ್ಗೆ 8.30 ಕ್ಕೆ ಬಸ್ ಹೊರಟು, ಪುತ್ತೂರು ಭಗವತೀ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಬೆಳಗ್ಗೆ 8.45 ಕ್ಕೆ ತಲುಪಿ, ಬೆಳಗ್ಗೆ 9.25 ಕ್ಕೆ ಹೊರಟು, ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಬೆಳಗ್ಗೆ 9.45 ಕ್ಕೆ ತಲುಪಿ, ಬೆಳಗ್ಗೆ 10.15 ಕ್ಕೆ ಹೊರಟು, ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಬೆಳಗ್ಗೆ 10.25 ಕ್ಕೆ ತಲುಪಿ, ಬೆಳಗ್ಗೆ 10.45 ಕ್ಕೆ ಹೊರಟು, ಮರವಂತೆಗೆ ಬೆಳಗ್ಗೆ 11.15 ಕ್ಕೆ ತಲುಪಿ, ಬೆಳಗ್ಗೆ 11.45 ಕ್ಕೆ ಅಲ್ಲಿಂದ ಹೊರಟು, ಮುಡೇಶ್ವರ ವನ್ನು ಮಧ್ಯಾಹ್ನ 1 ಗಂಟೆಗೆ ತಲುಪಿ, ಮಧ್ಯಾಹ್ನದ ಊಟದ ನಂತರ 2.30 ಕ್ಕೆ ಬಸ್ ಹೊರಟು, ಇಡಗುಂಜಿಗೆ ಮಧ್ಯಾಹ್ನ 3 ಕ್ಕೆ ತಲುಪಿ, ಮಧ್ಯಾಹ್ನ 3.30 ಕ್ಕೆ ಹೊರಟು, ಅಪ್ಸರಕೊಂಡಕ್ಕೆ ಬಸ್ ಸಂಜೆ 3.50 ಕ್ಕೆ ತಲುಪಿ, ಅಲ್ಲಿಂದ ಸಂಜೆ 4.30 ಕ್ಕೆ ಹೊರಟು, ಕಾಸರಕೋಡ್ ಇಕೋಬೀಚ್ಗೆ sಸಂಜೆ 4.45 ಕ್ಕೆ ತಲುಪಿ, ಅಲ್ಲಿಂದ ಸಂಜೆ 5.45 ಕ್ಕೆ ಹೊರಟು, ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಬಸ್ ತಲುಪುವ ರಾತ್ರಿ 8.30 ಹಾಗೂ ಉಡುಪಿ ಘಟಕಕ್ಕೆ ರಾತ್ರಿ 8.45 ಕ್ಕೆ ಬಸ್ ತಲುಪಲಿದೆ.

ಒಟ್ಟು 281 ಕಿ.ಮೀ ಗೆ ಪ್ರಪೋಸಲ್ ದರ ವಯಸ್ಕರಿಗೆ 500 ರೂ ಹಾಗೂ ಮಕ್ಕಳಿಗೆ 400 ರೂ. ನಿಗಧಿಪಡಿಸಲಾಗಿದೆ.

ಆನ್ ಲೈನ್ ಬುಕ್ಕಿಂಗ್ಗಾಗಿ www.ksrtc.in ಮತ್ತು ಮುಂಗಡ ಬುಕ್ಕಿಂಗ್ಗಾಗಿ ಡಾ.ವಿ.ಎಸ್ ಆಚಾರ್ಯ ಬಸ್ ನಿಲ್ದಾಣ, ಉಡುಪಿ ಮೊ.ನಂ: 9663266400 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕ.ರಾ.ರ.ಸಾ.ನಿಗಮದ ಉಡುಪಿ ಘಟಕ ವ್ಯವಸ್ಥಾಪಕರ ಕಚೇರಿ ಪ್ರಕಟಣೆ ತಿಳಿಸಿದೆ.


Spread the love

Exit mobile version