ನವೀಕೃತ ಸಿದ್ಧಿಕ್-ಎ-ಅಕ್ಬರ್ ಜಾಮಿಯಾ ಮಸೀದಿಗೆ ಪ್ರಮೋದ್, ಸೊರಕೆ ಭೇಟಿ
ಉದ್ಯಾವರ: ನವೀಕೃತಗೊಂಡು ಉದ್ಘಾಟನೆಗೊಂಡ ಉದ್ಯಾವರದ ಜಾಮಿಯಾ ಮಸೀದಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾರ್ಯಕ್ರಮದ ಒತ್ತಡದಿಂದ ಹಾಜರಾಗಲು ಸಾಧ್ಯವಾಗದ ಕಾರಣ ನಂತರ ಮೀನುಗಾರಿಕಾ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್ ಮತ್ತು ಕಾಪು ಶಾಸಕರಾದ ಶ್ರೀ ವಿನಯಕುಮಾರ್ ಸೊರಕೆಯವರು ಮಸೀದಿಗೆ ಭೇಟಿ ಕೊಟ್ಟರು.
ಈ ಸಂದರ್ಭದಲ್ಲಿ ಮಸೀದಿಯ ಗೌರವಾಧ್ಯಕ್ಷರಾದ ಶ್ರೀ ಅಬ್ದುಲ್ ಜಲೀಲ್ ಸಾಹೇಬ್, ಸಮಿತಿ ಸದಸ್ಯರುಗಳಾದ ಸಮೀರ್ ಷರೀಪ್ ಪಾಂದೆ, ಅಬಿದ್ ಆಲಿ, ಅನ್ಸರ್ ನಡುಕೇರಿ, ನಬಿಲ್ ನಿಸ್ಸರ್, ಪಂಚಾಯತ್ ಉಪಾಧ್ಯಕ್ಷರಾದ ರಿಯಾಝ್ ಪಳ್ಳಿ, ಸತ್ತಾರ್ ಸಾಹೇಬ್, ಮೊಹಮ್ಮದ್ ಸಾಹಿಲ್, ಮೊಹಮ್ಮದ್ ಮುನೀರ್, ಮಸೀದಿಯ ಧರ್ಮಗುರುಗಳು, ಉದ್ಯಾವರ ನಾಗೇಶ್ ಕುಮಾರ್, ಗಿರೀಶ್ ಕುಮಾರ್, ಕಿರಣ್ ಕುಮಾರ್, ಶರತ್ ಕುಮಾರ್, ರಮೇಶ್ ಕುಮಾರ್ ಉಪಸ್ಥಿತರಿದ್ದರು