ನವೆಂಬರ್ 11ಕ್ಕೆ ದುಬೈಯಲ್ಲಿ ಕನ್ನಡ ರಾಜ್ಯೋತ್ಸವ
ಕನ್ನಡಿಗರ ಕನ್ನಡ ಕೂಟ ದುಬೈ ಕನ್ನಡ ಸಂಘದ ವತಿಯಿಂದ ಕಳೆದ ….ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಕನ್ನಡ ರಾಜ್ಯೋತ್ಸವವು ಇದೇ ನವೆಂಬರ್ ತಿಂಗಳ 11ರಂದು ಅಲ್ ಕ್ವಾಸಿಸ್ ನಲ್ಲಿರುವ ಕ್ರೆಸೆಂಟ್ ಇಂಗ್ಲಿಷ್ ಶಾಲಾ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿದ್ದು ಸರ್ವ ತಯಾರಿ ನಡೆಯುತ್ತಿದೆ ಎಂದು ಸಂಘಟಕ ಸಮಿತಿಯವರು ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮತ್ತು ಅಂತಾರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ ಸ್ವೀಕರಿಸಲು ನಿವೃತ ಕಾಪ್ಟನ್ ಮತ್ತು ಏರ್ ಡೆಕ್ಕನ್ ಸಂಸ್ಥಾಪಕರಾದ ಕ್ಯಾಪ್ಟನ್ ಗೋಪಿನಾಥ್, ಖ್ಯಾತ ಹಾಸ್ಯ ಭಾಷಣಕಾರರಾದ ಶ್ರೀಯುತ ಗಂಗಾವತಿ ಪ್ರಾಣೇಶ್, ಝಯಿನ್ ಗ್ರೂಪ್ ಆಫ್ ಹೋಟೆಲ್ಸ್ ಮಾಲಿಕರಾದ ಶ್ರೀಯುತ ಝಫರುಲ್ಲಾ ಖಾನ್ ಮಂಡ್ಯ, ಮತ್ತು ಅನಿವಾಸಿ ಯುಎಇ ಪರೋಪಕಾರಿ ಉದ್ಯಮಿ ಶ್ರೀಯುತ ರೊನಾಲ್ಡ್ ಕೊಲಾಸೋ ಅವರು ಆಗಮಿಸಲಿದ್ದಾರೆ, ಹಾಗೆ ಹಾಸ್ಯ ಚಟಾಕಿ ಕಾರ್ಯಕ್ರಮ ನೀಡಲು ಶ್ರೀಯುತ ಗಂಗಾವತಿ ಪ್ರಾಣೇಶ್ ಮತ್ತು ಬಸವರಾಜ್ ಮಹಾಮನಿ ಅವರು ಆಗಮಿಸಲಿದ್ದಾರೆ, ಕಾರ್ಯಕ್ರಮದ ನಿರೂಪಣೆಯನ್ನು ಖ್ಯಾತ ನಿರೂಪಕಿ ಸವಿ ಪ್ರಕಾಶ್ ಅವರು ಮಾಡಲಿದ್ದಾರೆ.
ಕಾರ್ಯಕ್ರಮಕ್ಕೆ ಸಂಗೀತ ಸಂಜೆಯ ಬೆರಗು ನೀಡಲು ಪಾರ್ವತಿ ನ್ರತ್ಯ ವಿಹಂಗಮ ಬೆಂಗಳೂರು ತಂಡದಿಂದ ಡಾನ್ಸ್ ಮತ್ತು ಸ್ಥಳೀಯ ಕಲಾವಿದರಿಂದ ನ್ರತ್ಯ ಹಾಡುಗಾರಿಕೆ ಮುಂತಾದ ಹಲವು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮದ ಕುರಿತು ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀಯುತ ಸದನ್ ದಾಸ್ ಅವರು ತಿಳಿಸಿದ್ದಾರೆ.
ಇದೇ ವೇಳೆಯಲ್ಲಿ ಸಂಘಟಕ ಸಮಿತಿ ಸದಸ್ಯರು ಮತ್ತು ಕಾರ್ಯಕ್ರಮದ ಸ್ವಯಂ ಸೇವಕರ ಸಭಾ ಕಾರ್ಯಕರ್ಮದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಗೊಳಸಲಾಯಿತು