ನವೆಂಬರ್ 18ರಂದು ಶಾರ್ಜಾ ಕರ್ನಾಟಕ ಸಂಘದ 14ನೇ ವಾರ್ಷಿಕೋತ್ಸವ ಹಾಗೂ ಮಯೂರ ಪ್ರಶಸ್ತಿ ಪ್ರದಾನ ಸಮಾರಂಭ
ಶಾರ್ಜಾ ಕರ್ನಾಟಕ ಸಂಘದ 14ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರದಾನ ಸಮಾರಂಭ 2016 ನವೆಂಬರ್ 18ನೇ ತಾರೀಕು ಶುಕ್ರವಾರ ಸಂಜೆ 4.00 ಗಂಟೆಯಿಂದ ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಬೃಹತ್ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಕನ್ನಡಿಗವಲ್ರ್ಡ್ ಅರ್ಪಿಸುವ ಮಯೂರ ರಾಜ, ಮಯೂರ ರಾಣಿ, ಮಯೂರ ಕುಮಾರ, ಮಯೂರ ಕುಮಾರಿ ಯು.ಎ.ಇ ಮಟ್ಟದ ಗಾಯನ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿರುವ ಗಾಯಕರ ಸ್ಪರ್ಧೆ ನಡೆದು ಕಿರೀಟವನ್ನು ಮುಡಿಗೇರಿಸಿಕೊಳ್ಳಲಿದ್ದಾರೆ.
ಸಮಾರಂಭದ ಮುಖ್ಯ ಅತಿಥಿಯಾಗಿ ಕರ್ನಾಟಕ ಸರ್ಕಾರದ ಶಾಸಕರಾದ ಮಾನ್ಯ ಶ್ರೀ ಜೆ. ಆರ್. ಲೋಬೊ ಆಗಮಿಸಲಿದ್ದಾರೆ. ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಅಧ್ಯಕ್ಷರಾದ ಅಡ್ವೊಕೇಟ್ ಶ್ರೀ ವೈ. ಎ. ರಹಿಂ ರವರು ಗೌರವ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
2016ನೇ ಸಾಲಿನ “ಮಯೂರ ಪ್ರಶಸ್ತಿ” ಶ್ರೀ ಜೋಸೆಫ್ ಮಥಿಯಸ್ ರವರ ಮಡಿಲಿಗೆ
ಯು.ಎ.ಇ. ಯಲ್ಲಿ ಪ್ರಖ್ಯಾತ ಉದ್ಯಮಿ, ಸಮಾಜ ಸೇವಕರಾಗಿ, ಗಾಯಕರಾಗಿ, ಕರ್ನಾಟಕ ಭಾಷೆ, ಕಲೆ ಸಂಸ್ಕೃತಿಯ ವೈಭವಕ್ಕೆ ಸದಾ ನೆರವು ನೀಡುವ ಪೋಷಕರಾಗಿರುವ ಶ್ರೀ ಜೋಸೆಫ್ ಮಥಿಯಸ್ ರವರ ಎರಡು ದಶಕಗಳ ಸಾಧನೆಗೆ ಶಾರ್ಜಾ ಕರ್ನಾಟಕ ಸಂಘ ನೀಡುತಿರುವ ಪ್ರತಿಷ್ಠಿತ “ಮಯೂರ ಪ್ರಶಸ್ತಿ”ಯನ್ನು ಪ್ರದಾನಿಸಲಾಗುವುದು.
ಕನ್ನಡಿಗವಲ್ರ್ಡ್ ಅರ್ಪಿಸುವ ಮಯೂರ ರಾಜ, ಮಯೂರ ರಾಣಿ, ಮಯೂರ ಕುಮಾರ, ಮಯೂರ ಕುಮಾರಿ ಯು.ಎ.ಇ ಮಟ್ಟದ ಗಾಯನ ಸ್ಪರ್ಧೆ
ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ವಿವಿಧ ವಯೋಮಿತಿಯ ಪ್ರತಿಭಾನ್ವಿತ ಗಾಯಕ ಗಾಯಕಿಯರಿಗೆ ಯು.ಎ.ಇ. ಮಟ್ಟದ ಕನ್ನಡ ಚಲನಚಿತ್ರ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಅಂತಿಮ ಸುತ್ತಿಗೆ ಮೂರು ವಿಭಾಗದಿಂದ ಸ್ಪರ್ಧಿಗಳನ್ನು ಆಯ್ಕೆಸುತ್ತಿನಲ್ಲಿ ಜಯಗಳಿದ ಸ್ಪರ್ಧಿಗಳು ಮಯೂರ ರಾಜ, ಮಯೂರ ರಾಣಿ, ಮಯೂರ ಕುಮಾರ, ಮಯೂರ ಕುಮಾರಿ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಳ್ಳಲು ಪೈಪೋಟಿ ನಡೆಸಲಿದ್ದಾರೆ. ಊರಿನಿಂದ ಆಗಮಿಸುವ ಪ್ರಸಿದ್ಧ ರಸಮಂಜರಿ ತಂಡದ ವಾಧ್ಯವೃಂದ ಈ ಪ್ರತಿಭೆಗಳ ಕಂಠಸಿರಿಗೆ ಸಂಗೀತ ಸಂಯೋಜನೆಯ ಸಾಥ್ ನೀಡಲಿದ್ದಾರೆ. ಈ ಆಕರ್ಷಕ ಗಾಯನ ಸ್ಪರ್ಧೆಯನ್ನು ಅತ್ಯಂತ ವಿಶೇಷವಾಗಿ ಆಯೋಜಿಸಲಾಗಿದ್ದು “ಕನ್ನಡಿಗವಲ್ರ್ಡ್.ಕಾಮ್” ಅರ್ಪಿಸಲಿದ್ದಾರೆ.
ಪ್ರಖ್ಯಾತ ಗಾಯಕ ಗಾಯಕಿಯರ ಮನಸೆಳೆಯಲಿರುವ ಸಂಗೀತ ರಸಮಂಜರಿ
ಈ ಬಾರಿಯ ವಿಶೇಷ ಕಾರ್ಯಕ್ರಮ ಪ್ರಖ್ಯಾತ ಗಾಯಕ ಗಾಯಕಿಯರ ಮನಸೆಳೆಯಲಿರುವ ಸಂಗೀತ ರಸಮಂಜರಿ ನಡೆಯಲಿದೆ. ಮಂಗಳೂರಿನ ಪ್ರಖ್ಯಾತ ಗಾಯಕಿ ಅನಿತಾ ಡಿಸೋಜಾ, ಮಾನಸ ಹೊಳ್ಳ, ಹರೀಶ್ ಶೇರಿಗಾರ್ ಹಾಗೂ ರಾಜ್ ಗೋಪಾಲ್ ಮತ್ತು ತಂಡದ ವಾಧ್ಯಗೋಷ್ಠಿಯಂದಿಗೆ ಕನ್ನಡ ಗೀತೆಗಳು ಮರಳುನಾಡಿನಲ್ಲಿ ಪ್ರತಿಧ್ವನಿಸಲಿದೆ.
ಮತ್ತೊರ್ವ ಪ್ರಸಿದ್ದ ಕಲಾವಿದ ರವಿ ಸಂತೋಷ್ರವರಿಂದ ಮಿಮಿಕ್ರಿ ಹಾಗೂ ಕಾರ್ಯಕ್ರಮ ನಿರೂಪಣೆ ನಡೆಯಲಿದೆ.
ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಕನ್ನಡಿಗರು ಆಗಮಿಸಿ ಕನ್ನಡ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರ ಪರವಾಗಿ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸುಗಂಧರಾಜ್ ಬೇಕಲ್ ರವರು ಮಾಧ್ಯಮದ ಮೂಲಕ ಆಹ್ವಾನಿಸಿದ್ದಾರೆ.