Home Mangalorean News Kannada News ನಾಗರಿಕ ಸಮಿತಿಯಿಂದ ‘ಪಾನೀಯ ದಿನಾಚರಣೆ’ ಆಚರಣೆ.

ನಾಗರಿಕ ಸಮಿತಿಯಿಂದ ‘ಪಾನೀಯ ದಿನಾಚರಣೆ’ ಆಚರಣೆ.

Spread the love

ನಾಗರಿಕ ಸಮಿತಿಯಿಂದ ‘ಪಾನೀಯ ದಿನಾಚರಣೆ’ ಆಚರಣೆ.

ಉಡುಪಿ: ಮಕ್ಕಳ ರಕ್ಷಣಾ ಘಟಕ ಇವರ ಆಶ್ರಯದಲ್ಲಿ ನಂದಿನಿ ಹಾಲು ಒಕ್ಕೂಟ, ಇವರ ಸಹಕಾರದೊಂದಿಗೆ, ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಸಂಯೋಜನೆ ಮಾಡಿದ “ಸ್ವದೇಶಿ ಪಾನೀಯ ಸೇವಿಸಿ…ದೇಶಿಯ ಉದ್ಯಮಗಳ ಬೆಳೆಸಿ” ಎಂಬ ಘೋಷವಾಕ್ಯದ ಅಡಿಯಲ್ಲಿ ಪಾನೀಯ ದಿನಾಚರಣೆ ವಿನೂತನ ಪರಿಕಲ್ಪನೆಯ ಕಾರ್ಯಯಕ್ರಮ ನಿಟ್ಟೂರು ಬಾಲಕಿಯರ ಬಾಲ ಮಂದಿರದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಹಾಲು ಉತ್ಪಾದಕರ ಒಕ್ಕೂಟದ ಉಪ ವ್ಯವಸ್ಥಾಪಕರಾದ ಟಿ. ಲಕ್ಕಪ್ಪ ಅವರು ಬಾಲಕಿಯರ ಬಾಲ ಮಂದಿರದ ವಿದ್ಯಾರ್ಥಿಗಳಿಗೆ ಹಾಗೂ ರಾಜ್ಯ ಮಹಿಳಾ ನಿಲಯದ ಮಹಿಳೆಯರಿಗೆ ನಂದಿನಿ ಮ್ಯಾಂಗೋ ಸಿಹಿ ಲಸ್ಸಿ ವಿತರಿಸಿದರು.

ಮಕ್ಕಳ ಕಲ್ಯಾಣ ಸಮಿತಿಯ ಅದ್ಯಕ್ಷರಾದ ಬಿ.ಕೆ. ನಾರಾಯಣ್ ಸ್ವದೇಶಿ ಪಾನೀಯ ಶ್ರೇಷ್ಠತೆ ಮತ್ತು ದೇಶದಲ್ಲಿ ಉದ್ಯಮಗಳ ಬೆಳವಣಿಗೆ ರೈತರು ಸಬಲರಾಗುವ ಕುರಿತು ವಿವರಿಸಿದರು. ಸಾಮಾಜಿಕ ಕಾರ್ಯಕರ್ತ ತಾರಾನಾಥ್ ಮೇಸ್ತ ಶಿರೂರು ಅವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಪಾನೀಯ ದಿನಾಚರಣೆಯ ಸಂಯೋಜನೆಯ ಉದ್ದೇಶದ ಕುರಿತು ವಿಷಯ ಮಂಡಿಸಿದರು. ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ರಕ್ಷಣಾ ಘಟಕದ ಸಿಬ್ಭಂದಿಗಳು ಉಪಸ್ಥಿತರಿದ್ದರು.


Spread the love

Exit mobile version