Home Mangalorean News Kannada News ನಾಗರ ಪಂಚಮಿಗೂ ತಟ್ಟಿದ ಕೊರೋನಾ ಎಫೆಕ್ಟ್ – ಕುಡುಪು ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧ

ನಾಗರ ಪಂಚಮಿಗೂ ತಟ್ಟಿದ ಕೊರೋನಾ ಎಫೆಕ್ಟ್ – ಕುಡುಪು ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧ

Spread the love

ನಾಗರ ಪಂಚಮಿಗೂ ತಟ್ಟಿದ ಕೊರೋನಾ ಎಫೆಕ್ಟ್ – ಕುಡುಪು ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧ

ಮಂಗಳೂರು: ದಿನೇ ದಿನೇ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಮಂಗಳೂರಿನ ಇತಿಹಾಸ ಪ್ರಸಿದ್ದ ಕುಡುಪು ದೇಗುಲಕ್ಕೆ ನಾಗರಪಂಚಮಿಯ ದಿನದಂದು ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.

ತುಳುನಾಡಿನಲ್ಲಿ ಜು.25ರ ಶನಿವಾರ ನಾಗರಪಂಚಮಿ ಆಚರಿಸಲಾಗುತ್ತಿದ್ದು ಕೊರೋನಾ ಹಿನ್ನಲೆಯಲ್ಲಿ ದೇವಸ್ಥಾನಕ್ಕೆ ಭಕ್ತರ ಪ್ರವೇಶ ಸಂಪೂರ್ಣ ಬಂದ್ ಮಾಡಲಾಗಿದೆ. ಮಂಗಳೂರಿನ ಕುಡುಪು

ಶ್ರೀ ಅನಂತ ಪದ್ಮನಾಭ ದೇವಸ್ಥಾನಕ್ಕೆ ಪ್ರತೀ ವರ್ಷ ನಾಗರಪಂಚಮಿ ಹಿನ್ನೆಲೆ ಲಕ್ಷಾಂತರ ಭಕ್ತರಿಂದ ಪೂಜೆ ಸಲ್ಲಿಕೆಯಾಗುತ್ತಿದ್ದು ಈ ನಾಗರ ಪಂಚಮಿಯ ದಿನ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ. ಕೊರೋನಾ ನಿರ್ಬಂಧ ಹಿನ್ನೆಲೆ ಕ್ಷೇತ್ರದ ಆವರಣಕ್ಕೆ ಭಕ್ತಾದಿಗಳು ಬರುವಂತಿಲ್ಲ ಅಲ್ಲದೆ ನಾಗರ ಪಂಚಮಿಯ ದಿನದಂದು ಸೇವೆಗಳು, ಸೇವಾಪ್ರಸಾದ, ತೀರ್ಥ ಪ್ರಸಾದ ಮತ್ತು ಅನ್ನ ಸಂತರ್ಪಣೆಗಳು ಇರುವುದಿಲ್ಲ. ನಾಗರ ಪಂಚಮಿಯ ಪ್ರಯುಕ್ತ ನಾಗ ತಂಬಿಲ, ಪಂಚಾಮೃತ, ಆಶ್ಲೇಷ ಬಲಿ ಮೊದಲಾದ ಯಾವುದೇ ಸೇವೆಗಳು ಇಲ್ಲ ಎಂದು ಕುಡುಪು ಶ್ರೀ ಅನಂತ ಪದ್ಮನಾಭ ದೇವಳದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ


Spread the love

Exit mobile version