ನಾಡದೋಣಿ ಮೀನುಗಾರರಿಗೆ ಪರಿಹಾರಧನ ನೀಡುವಂತೆ ಮೀನುಗಾರ ಕಾಂಗ್ರೆಸ್ ಮನವಿ
ಉಡುಪಿ: ಪ್ರಾಕೃತಿಕ ವೈಪರಿತ್ಯದಿಂದಾಗಿ ಈ ಬಾರಿ ನಾಡದೋಣಿ ಮೀನುಗಾರರಿಗೆ ಮಳೆಗಾಲದ ಆರಂಭದ ದಿನದಿಂದಲೂ ಮೀನುಗಾರಿಕೆ ನಡೆಸಲು ಅಸಾಧ್ಯವಾಗಿದ್ದು, ಆರ್ಥಿಕ ತೊಂದರೆಯನ್ನು ಅನುಭವಿಸುತ್ತಿದ್ದು, ಅವರಿಗೆ ಪರಿಹಾರ ಧನವನ್ನು ನೀಡಬೇಕು ಎಂದು ಉಡುಪಿ ಜಿಲ್ಲಾ ಮೀನುಗಾರ ಕಾಂಗ್ರೆಸ್ ಸಮಸ್ತ ಮೀನುಗಾರರ ಪರವಾಗಿ ಬೆಂಗಳೂರಿಗೆ ತೆರಳಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದೆ.
ಬಡಮೀನುಗಾರರು ಸಾಲ ಮಾಡಿ ಮೀನುಗಾರಿಕೆಗೆ ಎಲ್ಲಾ ಸಿದ್ದತೆಯನ್ನು ಮಾಡಿಕೊಂಡಿದ್ದು ಈ ಬಾರಿ ಮಳೆಗಾಲದಲ್ಲಿ ಪ್ರತಿಕೂಲ ಹವಾಮಾನದ ಪರಿಸ್ಥಿತಿಯಿಂದಾಗಿ ಕಡಲಿಗೆ ಇಳಿಯದಂತೆ ಮಾಡಿದೆ. ಕಡಲನ್ನೆ ನಂಬಿ ಬದುಕುವ ನಾಡದೋಣಿ ಮೀನುಗಾರರು ಸಂಕಷ್ಠವನ್ನು ಎದುರಿಸುತ್ತಿದ್ದಾರೆ. ಕೂಡಲೇ ಅವರಿಗೆ ಪರಿಹಾರವನ್ನು ಘೋಷಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿಲಾಗಿದೆ.
ನಿಯೋಗದಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿ, ರಾಷ್ಟ್ರೀಯ ಮೀನುಗಾರ ಕಾಂಗ್ರೆಸ್ ಕಾರ್ಯಾಧ್ಯಕ್ಷ ಯು.ಆರ್.ಸಭಾಪತಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಪೀರು ಸಾಹೇಬ್, ಕಾರ್ಯದರ್ಶಿ ಕಿರಣ್ ಕುಮಾರ್ ಉದ್ಯಾವರ, ಜಿಲ್ಲಾ ಮೀನುಗಾರ ಕಾಂಗ್ರೆಸಿನ ಜಿಲ್ಲಾಧ್ಯಕ್ಷ ಮನೋಜ್ ಎಸ್ ಕರ್ಕೇರ, ಪ್ರಧಾನ ಕಾರ್ಯದರ್ಶಿ ರಮೇಶ್ ಎಸ್ ತಿಂಗಳಾಯ ಬೆಂಗ್ರೆ, ಉಪಾಧ್ಯಕ್ಷ ಗಣೇಶ್ ಕೆ. ಕುಂದರ್, ಹಸನ್ ಬಾಪುತೋಟ, ಉಪೇಂದ್ರ ಮೇಂಡನ್, ಮಧುಕರ್ ಬಾಪುತೋಟ, ಸತೀಶ್ ಆಚಾರಿ, ವಿಲ್ಸನ್ ಸಿಸಿ, ಉದಯ ಉಗ್ಗೆಲ್ ಬೆಟ್ಟು ಉಪಸ್ಥಿತರಿದ್ದರು.