Home Mangalorean News Kannada News ನಾನು ರಾಮಭಕ್ತ… ನನ್ನನ್ನೂ ಬಂಧಿಸಿ: ರಾಜ್ಯ ಸರ್ಕಾರಕ್ಕೆ ಹಿಂಜಾವೇ ಮನವಿ

ನಾನು ರಾಮಭಕ್ತ… ನನ್ನನ್ನೂ ಬಂಧಿಸಿ: ರಾಜ್ಯ ಸರ್ಕಾರಕ್ಕೆ ಹಿಂಜಾವೇ ಮನವಿ

Spread the love

ನಾನು ರಾಮಭಕ್ತ… ನನ್ನನ್ನೂ ಬಂಧಿಸಿ: ರಾಜ್ಯ ಸರ್ಕಾರಕ್ಕೆ ಹಿಂಜಾವೇ ಮನವಿ

ಕುಂದಾಪುರ: 1992ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ಕಾರಣವನ್ನು ಒಡ್ಡಿ ರಾಮಭಕ್ತ ಶ್ರೀಕಾಂತ್ ಪೂಜಾರಿಯವರನ್ನು ಬಂಧಿಸಿರುವುದು ಖಂಡನೀಯ. ರಾಮಭಕ್ತರೆಂಬ ಕಾರಣದಿಂದ ಹಿಂದೂ ಕಾರ್ಯಕರ್ತರನ್ನು ಬಂಧಿಸುವುದಾದರೆ ನಾವೂ ರಾಮಭಕ್ತರೆ, ನಮ್ಮನ್ನು ಬಂಧಿಸಿ ಎಂದು ಹಿಂದೂ ಜಾಗರಣ ವೇದಿಕೆ ಕುಂದಾಪುರ ತಾಲೂಕು ಘಟಕ ಮುಖ್ಯಮಂತ್ರಿ ಸೊದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದೆ.


ಕುಂದಾಪುರ ಡಿವೈಎಸ್ಪಿ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಮೂಲಕ ಸಿಎಂ‌ಗೆ ಮನವಿ ಸಲ್ಲಿಸಿರುವ ಹಿಂಜಾವೇ, 31 ವರ್ಷದ ಬಳಿಕ ರಾಮಮಂದಿರದ ಶುಭಾರಂಭದ ಈ ಪರ್ವಕಾಲದಲ್ಲಿ ಶ್ರೀಕಾಂತ್ ಅವರನ್ನು ಬಂಧಿಸಿದೆ. ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಬಂದ ನಂತರ ನಿರಂತರವಾಗಿ ಹಿಂದೂಗಳ ಮೇಲೆ ದೌರ್ಜನ್ಯಗಳನ್ನು ನಡೆಸುತ್ತಿದೆ. ಅಲ್ಪಸಂಖ್ಯಾತರ ತುಷ್ಠೀಕರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ವಿನಾಕಾರಣ ಹಿಂದೂ ಕಾರ್ಯಕರ್ತರ ಮೇಲೆ ಕೇಸುಗಳನ್ನು ದಾಖಲಿಸುತ್ತದೆ. ಇದರಿಂದ ಹೆದರಿ ಹಿಂದೆ ಸರಿಯುವವರು ನಾವಲ್ಲ.. ಅಂತ ಸಾವಿರಾರು ಕೇಸು ಕೋರ್ಟುಗಳನ್ನು ಸವಾಲಾಗಿ ಸ್ವೀಕರಿಸಿ ಸಾಮಾಜಿಕ ಕಾರ್ಯಕರ್ತರಾಗಿ ಇಂದು ಕೆಲಸ ಮಾಡುತ್ತಿದ್ದೇವೆ ಮುಂದೆಯೂ ಮಾಡುತ್ತೇವೆ.

ಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿಯವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಉಡುಪಿ ಜಿಲ್ಲೆಯ ಸಾವಿರಾರು ಕಾರ್ಯಕರ್ತರು ರಾಮಭಕ್ತಿಯ ಕಾರಣದಿಂದ ಜೈಲುವಾಸ ಅನುಭವಿಸಲು ಸಿದ್ಧರಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಹಿಂದೂ ಜಾಗರಣ ವೇದಿಕೆ ವತಿಯಿಂದ ಜೈಲ್ ಭರೋ ಹೋರಾಟ ಕೈಗೆತ್ತಿಕೊಳ್ಳಲಿದೆ. ಮುಂದಾಗಬಹುದಾದ ಎಲ್ಲಾ ರೀತಿಯ ಸಮಸ್ಯೆಗಳಿಗೆ ರಾಜ್ಯಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದೆ.

ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಶಂಕರ ಕೋಟ, ಪ್ರಮುಖರಾದ ಯಶವಂತ್ ಗಂಗೊಳ್ಳಿ, ನವೀನ್ ಗಂಗೊಳ್ಳಿ, ರಾಘು ಮೊದಲಾದವರು ಇದ್ದರು.


Spread the love

Exit mobile version