ನಾಪತ್ತೆಯಾಗಿದ್ದ ಮೂಡಬಿದ್ರೆಯ ಪ್ರಿಯಾಂಕ ಮುಂಬೈನಲ್ಲಿ ಪತ್ತೆ

Spread the love

ನಾಪತ್ತೆಯಾಗಿದ್ದ ಮೂಡಬಿದ್ರೆಯ ಪ್ರಿಯಾಂಕ ಮುಂಬೈನಲ್ಲಿ ಪತ್ತೆ

ಮಂಗಳೂರು: ಮೂಡಬಿದ್ರೆಯಿಂದ ನಾಪತ್ತೆಯಾಗಿದ್ದ ಯುವತಿ ಪ್ರಿಯಾಂಕ (25) ಪೋಲಿಸರು ಮುಂಬೈನಲ್ಲಿ ಪತ್ತೆ ಹಚ್ಚಿದ್ದಾರೆ.

ಡಿಸೆಂಬರ್ 11 ರಂದು ಪ್ರಿಯಾಂಕಳ ಮದುವೆ ನಿಶ್ಚಯವಾಗಿದ್ದು, ಡಿಸೆಂಬರ್ 9 ರಂದು ಮೆಹಂದಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ಡಿಸೆಂಬರ್ 8 ರಂದು ರಾತ್ರಿ ಊಟದ ಬಳಿಕ ಮನೆಯವರೆಲ್ಲರೂ ನಿದ್ದೆಗೆ ಹೋದ ಬಳಿಕ ಪ್ರಿಯಾಂಕ ಮನೆಯಿಂದ ನಾಪತ್ತೆಯಾಗಿದ್ದರು.

ಮಾಹಿತಿಗಳ ಪ್ರಕಾರ ಪ್ರಿಯಾಂಕ ಹೈದರ್ ಎಂಬ ಯುವಕನ ಜೊತೆ ಪ್ರೀತಿಯಾಗಿತ್ತು ಎನ್ನಲಾಗಿದೆ. ಇದೇ ವೇಳೆ ಪ್ರಿಯಾಂಕಳ ಮನೆಯವರು ಬೇರೊಬ್ಬ ಯುವಕನೊಂದಿ ಮದುವೆ ನಿಶ್ಚಯಮಾಡಿದ್ದು ಡಿಸೆಂರಬ್ 11 ರಂದು ಮದುವೆ ದಿನಾಂಕ ಕೂಡ ನಿಶ್ಚಯವಾಗಿತ್ತು. ಮೆಹಂದಿ ಮುನ್ನಾ ದಿನ ಪ್ರಿಯಾಂಕ ನಾಪತ್ತೆಯಾಗಿದ್ದು, ಮನೆಯಿಂದ ಹೊರಗಡೆ ಹೋಗುವಾಗ ಪ್ರಿಯಾಂಕ ಚಿನ್ನ, ಆಧಾರ್ ಕಾರ್ಡ್ ಮತ್ತು ಇನ್ನಿತರ ವಸ್ತುಗಳನ್ನು ಕೊಂಡೊಯ್ದಿದ್ದರು.

ಮೂಡಬಿದ್ರೆ ಹಾಗೂ ಪಣಂಬೂರು ಪೋಲಿಸರು ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ್ದು ವಿವಿಧ ಸಂಘಟನೆಗಳು ಕೂಡ ಪ್ರತಿಭಟನೆ ನಡೆಸಿದ್ದರು. ಪ್ರಿಯಾಂಕ ಪತ್ತೆಗಾಗಿ ಪೋಲಿಸರು ವಿಶೇಷ ತಂಡವನ್ನು ರಚಿಸಿದ್ದು ಕೊನೆಗೂ ಪೋಲಿಸರು ಪ್ರಿಯಾಂಕಳನ್ನು ಮುಂಬೈನಲ್ಲಿ ಪತ್ತೆ ಹಚ್ಚಿದ್ದಾರೆ.


Spread the love