Home Mangalorean News Kannada News ನಾಯಕನ ಹೆಸರಲ್ಲಿ ಮತ ಪಡೆದವರಿಂದ ಕ್ಷೇತ್ರದ ಅಭಿವೃದ್ಧಿ ಅಸಾಧ್ಯ – ಜೆಪಿ ಹೆಗ್ಡೆ

ನಾಯಕನ ಹೆಸರಲ್ಲಿ ಮತ ಪಡೆದವರಿಂದ ಕ್ಷೇತ್ರದ ಅಭಿವೃದ್ಧಿ ಅಸಾಧ್ಯ – ಜೆಪಿ ಹೆಗ್ಡೆ

Spread the love

ನಾಯಕನ ಹೆಸರಲ್ಲಿ ಮತ ಪಡೆದವರಿಂದ ಕ್ಷೇತ್ರದ ಅಭಿವೃದ್ಧಿ ಅಸಾಧ್ಯ – ಜೆಪಿ ಹೆಗ್ಡೆ

ಕಾಪು: ಶಾಸಕನಾಗಿ, ಸಚಿವನಾಗಿ, ಸಂಸದನಾಗಿ ಹಲವಾರು ಹುದ್ದೆಗಳನ್ನು ನಿಭಾಯಿಸಿ ಕೆಲಸ ಮಾಡಿದ್ದು ಕ್ಷೇತ್ರದ ಸಮಸ್ಯೆಗಳಿಗೂ ಸ್ಪಂದಿಸಿ, ಹೋರಾಡಿ ಪ್ರಾಮಾಣಿಕವಾಗಿ ಶ್ರಮಿಸಿದ್ದು ಈ ಬಾರಿ ನನ್ನ ಜನಪರ ಕೆಲಸ ಮತದಾನ ಮಾಡುವಂತೆ ಜನರಲ್ಲಿ ಕಾರ್ಯಕರ್ತರು ಮನವಿ ಮಾಡುವುದರ ಮೂಲಕ ಮತ್ತೊಮ್ಮೆ ಉಡುಪಿ –ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬಾವುಟ ಹಾರಲು ಒಗ್ಗಟ್ಟಿನಿಂದ ಪ್ರಯತ್ನಿಸಬೇಕಾಗಿದೆ ಎಂದು ಕಾಂಗ್ರೆಸ್ ಅಭ್ಯಕರ್ಥಿ ಕೆ ಜಯಪ್ರಕಾಶ್ ಹೆಗ್ಡೆ ಮನವಿ ಮಾಡಿದರು.

ಅವರು ಗುರುವಾರ ಕಾಪು ಕ್ಷೇತ್ರ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಲೋಕಸಭಾ ಚುನಾವಣೆಯ ಪ್ರಯುಕ್ತ ಕಾರ್ಯಕರ್ತರ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು.

ಸಂಸದರಾಗಿ ಏನೂ ಕೆಲಸವನ್ನು ಮಾಡದೆ ಕೇವಲ ನಾಯಕನ ಹೆಸರಲ್ಲಿ ಮತವನ್ನು ಕೇಳಿದರೆ ಅವರು ಮತ್ತು ಬರುವುದು 5 ವರ್ಷಗಳ ಬಳಿಕ ಆದ್ದರಿಂದ ಅವರು ಕೆಲಸ ಮಾಡುವ ಅಗತ್ಯವಿಲ್ಲ. ಮತದಾರ ನನಗೆ ಮತವನ್ನು ನೀಡಿದರೆ ನಾನು ಕೆಲಸ ಮಾಡಲೇ ಬೇಕಾಗುತ್ತದೆ. ನಾಯಕನಿಗೆ ಮತವನ್ನು ನೀಡಿದರೆ ಸಂಸದರಾದವರು ಆರಾಮವಾಗಿ ದೆಹಲಿಯಲ್ಲಿ ಕುಳಿತು ಕಾಲಕಳೆಯುತ್ತಾರೆ. ಇದರ ಬಗ್ಗೆ ಚರ್ಚೆಯಾಗಬೇಕಾದ ಅಗತ್ಯತೆ ಇದೆ ಇಲ್ಲವಾದಲ್ಲಿ ಪ್ರಜಾಪ್ರಭುತ್ವಕ್ಕೆ ಅರ್ಥವೇ ಬರುವುದಿಲ್ಲ. ನಾವು ಮತವನ್ನು ನೀಡುವುದು ಪ್ರಧಾನ ಮಂತ್ರಿಗಲ್ಲ ಬದಲಾಗಿ ಇಲ್ಲಿ ಕೆಲಸಮಾಡಲು ಅಗತ್ಯವಿರುವ ಅಭ್ಯರ್ಥಿಗೆ ಎನ್ನುವುದು ಮತದಾರರು ಅರಿಯಬೇಕು ಎಂದರು.
ಒಂದು ಒಳ್ಳೆಯ ಸರಕಾರ ಬೇಕು ಅದರೊಂದಿಗೆ ಪ್ರಬಲವಾದ ಪ್ರತಿಪಕ್ಷವೂ ಬೇಕಾಗುತ್ತದೆ.ಅದಕ್ಕಾಗಿ ಒಳ್ಳೆಯ ಪ್ರತಿನಿಧಿಯನ್ನು ಆರಿಸಿ ಕಳುಹಿಸಬೇಕಾದ ಅಗತ್ಯವಿದೆ. ಜನರಿಗೆ ಯಾವುದೇ ಸೌಲಭ್ಯಗಳು ಹತ್ತಿರದ್ಲಲೇ ಸಿಗಬೇಕು ಎನ್ನುವ ಉದ್ದೇಶದಿಂದ ನಾನು ಮಂತ್ರಿಯಾಗಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿಯನ್ನು ಪ್ರತ್ಯೇಕಿಸಿ ಜಿಲ್ಲೆಯನ್ನು ಮಾಡಲಾಗಿತ್ತು. ಇದರಿಂದಾಗಿ ಉಡುಪಿ ಜಿಲ್ಲೆ ಇಷ್ಟೊಂದು ಅಭಿವೃದ್ಧಿ ಹೊಂದಲು ಸಾಧ್ಯವಾಯಿತು ಎಂದರು.

ತಮಗೆ ಅವಕಾಶ ನೀಡಿದರೇ ಕರಾವಳಿಯ ಮೀನುಗಾರರ ಸಮಸ್ಯೆ, ಹೆದ್ದಾರಿ ಸಮಸ್ಯೆ, ಮಲೆನಾಡು –ಬಯಲು ಸೀಮೆಯ ಅಡಿಕೆ – ಕಾಫಿ ಬೆಳೆಗಾರರ ಸಮಸ್ಯೆಗೆ ಪರಿಹಾರದಂತಹ ಕೆಲಸ ಕಾರ್ಯ ಮಾಡಲು ಸಹಕಾರಿಯಾಗಲಿದೆ. ಪ್ರವಾಸೋದ್ಯಮ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಎಂಜಿನಿಯರಿಂಗ್, ಮೆಡಿಕಲ್ ಕಾಲೇಜು ಸ್ಥಾಪನೆ ಸಾಧ್ಯವಾಗಲಿದೆ ಎಂದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಪುಸ್ತಕದಲ್ಲಿ ಇಟ್ಟ ನವಿಲು ಗರಿ ಎಂದು ಲೇವಡಿ ಮಾಡಿದ್ದರು ಆದರೆ ಈಗ ನವಿಲು ಗರಿ ಮರಿಹಾಕಿದ್ದಾ ಅಥವಾ ನವಿಲು ಮೊಟ್ಟೆ ಇಟ್ಟು ಮರಿ ಹಾಕಿದ್ದಾ ಎನ್ನುವುದಕ್ಕೆ ಅವರೇ ಉತ್ತರ ನೀಡಬೇಕಾಗಿದೆ. ಕಾಂಗ್ರೆಸ್ ಸರಕಾರ ಆಡಿತ ಮಾತನ್ನು ಉಳಿಸಿಕೊಳ್ಳುವ ಕೆಲಸ ಮಾಡಿದೆ ಆದ್ದರಿಂದ ಅವರು ಹೇಳಿದ ಮಾತು ಸತ್ಯಕ್ಕೆ ದೂರವಾದದ್ದು ಎನ್ನುವುದು ಸಾಬೀತಾಗಿದೆ. ಈ ಚುನಾವಣೆಯಲ್ಲಿ ಗೆಲ್ಲುವುದು ಕೇವಲ ಜಯಪ್ರಕಾಶ್ ಹೆಗ್ಡೆಯಲ್ಲ ಬದಲಾಗಿ ಕಾಂಗ್ರೆಸ್ ಕಾರ್ಯಕರ್ತರು ಎನ್ನುವುದನ್ನು ಅರಿತು ಒಟ್ಟಾಗಿ ಕೆಲಸ ಮಾಡೋಣ ಎಂದರು.

ತಾನು ಸಂಸದನಾಗಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಗಳಿಗೆ ಅನುಮೋದನೆಯಾಗಿದ್ದರೂ ಅದರ ಬಳಿಕ 10 ವರ್ಷಗಳು ಕಳೆದರೂ ಕಾಮಗಾರಿ ಪೂರ್ಣಗೊಳ್ಳದೆ ಜನರಿಗೆ ಯಾವುದೇ ಪ್ರಯೋಜನಗಳಾಗಿಲ್ಲ. ರೈತರ ಸಮಸ್ಯೆಗಳು ಹಾಗೆಯೇ ಉಳಿದಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಹೀಗೆ ಅನೇಕ ಸಮಸ್ಯೆಗಳು ಜನರನ್ನು ಕಾಡುತ್ತಿದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಅದರ ಪರಿಹಾರಕ್ಕಾಗಿ ಹೋರಾಡುವುದು ಅನಿವಾರ್ಯವಾಗಿದೆ ಈ ನಿಟ್ಟಿನಲ್ಲಿ ನನಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಮಾತನಾಡಿ ರಾಜ್ಯ ಸರ್ಕಾರ ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದೆ. ಕೇಂದ್ರ ಸರ್ಕಾರಿಂದ ರಾಜ್ಯಕ್ಕೆ ಅನುದಾನ ತರುವಲ್ಲಿ ಬಿಜೆಪಿಯ ಸಂಸದರು ಸಂಪೂರ್ಣವಾಗಿ ವಿಫಲರಾಗಿದ್ದು ಕೇಂದ್ರ ರಾಜ್ಯದ ವಿರುದ್ದ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕೆಂದ್ರ ಸರ್ಕಾರದ ಜನವಿರೋಧಿ ನೀತಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಬೆಲೆ ಏರಿಕೆ, ಸುಳ್ಳು ಭರವಸೆಗಳು, ಚುನಾವಣಾ ಬಾಂಡ್ ನಂತಹ ಭ್ರಷ್ಠಾಚಾರ ಕೇಂದ್ರದ ಸಾಧನೆಗಳಾಗಿವೆ. ಇಲ್ಲಿಯ ಬಿಜೆಪಿ ಅಭ್ಯ್ರ್ಥಿ ಸಚಿವರಾಗಿದ್ದ ವೇಳೆ ಕರಾವಳಿಗರಿಗೆ ಕುಚ್ಚಲಕ್ಕಿ ನೀಡುವುದಾಗಿ ಹೇಳಿ ಮೋಸ ಮಾಡಿದ್ದಾರೆ. ನಾರಾಯಣಗುರುಗಳ ಸ್ತಬ್ದ ಚಿತ್ರವನ್ನು ಕೇಂದ್ರ ನಿರಾಕರಿಸಿದಾಗ, ಪಠ್ಯಪುಸ್ತಕದಲ್ಲಿ ನಾರಾಯಣಗುರುಗಳ ವಿಚಾರವನ್ನು ತೆಗೆದು ಹಾಕಿದಾಗ ಕೂಡ ಒರ್ವ ಬಿಲ್ಲವ ಮುಖಂಡರಾಗಿ ಮಾತನಾಡದೇ ಮೌನವಾಗಿದ್ದರು. ಕೇವಲ ಸುಳ್ಳು ಹೇಳಿಕೊಂಡು ಜನರನ್ನು ಮರುಳು ಮಾಡುವ ಬಿಜೆಪಿಯನ್ನು ಜನರು ತಿರಸ್ಕರಿಸಿ ಸಜ್ಜನ ಹಾಗೂ ಸಂಸತ್ತಿನಲ್ಲಿ ಕ್ಷೇತ್ರಕ್ಕೆ ಉತ್ತಮ ದನಿಯಾಗಬಲ್ಲ ಜಯಪ್ರಕಾಶ್ ಹೆಗ್ಡೆಯವರನ್ನು ಗೆಲ್ಲಿಸಬೇಕಾಗಿದೆ ಎಂದರು.

ಕಾಪು ವಿಧಾನಸಭಾಕ್ಷೇತ್ರದ ಹೆಜಮಾಡಿ, ಪಡುಬಿದ್ರೆ, ಪಲಿಮಾರು, ಏರ್ಮಾಳ್, ಉಚ್ಚಿಲ, ಎಲ್ಲೂರು, ಮುದರಂಗಡಿ, ಶಿರ್ವ, ಕಳತ್ತೂರು, ಕುತ್ಯಾರು, ಮಜೂರಿನಲ್ಲಿ ಜಯಪ್ರಕಾಶ್ ಹೆಗ್ಡೆ ಕಾರ್ಯಕರ್ತರ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು

ಈ ವೇಳೆ ನಾಯಕರಾದ ಎಮ್ ಎ ಗಫೂರ್, ಅಡ್ವೆ ನವೀನ್ ಚಂದ್ರ ಸುವರ್ಣ, ಯಶ್ವಂತ್ ಕುಕ್ಯಾನ್, ಸುನೀಲ್ ಬಂಗೇರಾ, ಸುಕುಮಾರ್ ಪಡುಬಿದ್ರಿ, ನವೀನ್ ಚಂದ್ರ ಶೆಟ್ಟಿ, ಕರುಣಾಕರ ಪೂಜಾರಿ, ದಿವಾಕರ್ ಶೆಟ್ಟಿ, ರಮೀಝ್ ಹುಸೈನ್, ಸುಧೀರ್ ಕರ್ಕೇರಾ, ಪ್ರಶಾಂತ್ ಜತ್ತನ್ನ, ಮೆಲ್ವಿನ್ ಡಿಸೋಜಾ, ಜಿತೇಂದ್ರ ಫುರ್ಟಾಡೊ, ವಿಲ್ಸನ್ ರೊಡ್ರಿಗಸ್ ಗುಲಾಮ್ ಮೊಹಮ್ಮದ್, ಅಝೀಜ್ ಹಾಗೂ ಪಕ್ಷದ ವಿವಿಧ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥೀತರಿದ್ದರ.


Spread the love

Exit mobile version