Spread the love
ನಿಜಾಮುದ್ದೀನ್ ಮರ್ಕಜ್ ಮಸೀದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಮಾಹಿತಿ ನೀಡಿ
ಮಂಗಳೂರು: ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಯಾರಾದರೂ ಪಾಲ್ಗೊಂಡಿದ್ದರೆ ಕೂಡಲೇ ಮಾಹಿತಿಯನ್ನು ನೀಡುವಂತೆ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಹೇಳಿದ್ದಾರೆ.
ದೆಹಲಿಯಲ್ಲಿ ಮಾರ್ಚ್ 8 ರಿಂದ 20ರ ವರೆಗೆ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ ತಬ್ಲೀಝ್ ನಡೆದಿದ್ದು ಯಾರಾದರೂ ಕೋರೊನಾ ಸೋಂಕಿಗೆ ಒಳಗಾಗಿರಬಹುದು ಆದ್ದರಿಂದ ಭಾಗವಹಿಸಿದವರು ತಮ್ಮ ವಿವರವನ್ನು ಕೂಡಲೇ 1077 ಸಹಾಯವಾಣಿಗೆ ಅಥವಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.
Spread the love