ನಿಜ ಸಂಭ್ರಮದಿಂದ ನೆರವೇರಿದ ಮಸ್ಕತ್ ಕರ್ನಾಟಕ ಸಂಘದ ‘ಯುಗಾದಿ ಸಂಭ್ರಮ’
ಮಸ್ಕತ್ ಕರ್ನಾಟಕ ಸಂಘ ೨೮/೦೪/೨೦೧೭ ರ ಶುಕ್ರವಾರ ಅಲ್ ಮಾಸಾ ಸಭಾಂಗಣದಲ್ಲಿ ಏರ್ಪಡಿಸಿದ್ದ “ಯುಗಾದಿ ಸಂಭ್ರಮ” ಸಡಗರದೊಂದಿಗೆ ಯಶಸ್ವಿಯಾಗಿ ನೆರವೇರಿತು. ನಿಗದಿತ ೧೦.೦೦ ಗಂಟೆಗೆ ಸರಿಯಾಗಿ ಆರಂಭವಾದ ಕಾರ್ಯಕ್ರಮ ಕ್ಕೆ ಭಾರತೀಯ ಸಾಮಾಜಿಕ ವೇದಿಕೆಯ ಅಧ್ಯಕ್ಷರಾದ ಡಾ. ಸತೀಶ್ ನಂಬಿಯಾರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಮಸ್ಕತ್ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಕರುಣಾಕರ್ ರಾವ್ ಅವರ ಸ್ವಾಗತ ಭಾಷಣದ ನಂತರ ಸಂಘದ ಇತರ ಪದಾಧಿಕಾರಿಗಳಾದ ಶ್ರೀ ರಮೇಶ್ ಕುಮಾರ್(ಉಪಾಧ್ಯಕ್ಷರು) ಭೀಮ್ ನೀಲಕಂಠರಾವ್ ಹಂಗರ್ಗೆ (ಖಜಾಂಚಿ) ಕಾರ್ಯಕಾರೀ ಸಮಿತಿಯ ಸದಸ್ಯರುಗಳಾದ ಶ್ರೀರಾಮಚಂದ್ರರಾವ್, ಶ್ರೀಮತಿ ಭಾರತಿಬಾಲಗುರ್ಗಿ,ಶ್ರಿಮತಿ ಸುಧಾ ಶಶಿಕಾಂತ್ , ಶ್ರೀಮತಿ ಜಯಲಕ್ಷ್ಮಿ ಶೆಣೈ, ಶ್ರೀ ಹಿತೇಶ್ ಮಂಗಳೂರು, ಶ್ರೀ ಕೆ.ಎಸ್.ರಾಜು ಮುಂತಾದವರನ್ನು ಸಂಘದ ಸದಸ್ಯರಿಗೆ ಪರಿಚಯಿಸಲಾಯಿತು.ಅತಿಥಿಗಳಾಗಿ ಆಗಮಿಸಿದ ಶ್ರೀ ಸತೀಶ್ ನಂಬಿಯಾರ್, ಶ್ರೀಶಶಿಧರ್ ಶೆಟ್ಟಿ , ಶ್ರೀ ರವಿಕುಮಾರ್ ರಾವ್, ಶ್ರೀಗೋವಿಂದ ಕುಲಕರ್ಣಿ -ಎಲ್ಲರೂ ದೀಪಬೆಳಗುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ಇತ್ತರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು:
ಪ್ರಾರ್ಥನಾ ಗೀತೆ – ಪುಟಾಣಿಗಳಾದ ಅರ್ಪಿತಾ,ಅಮೋಘ,ಹಂಸಿಕಾ, ನಿಸರ್ಗ, ಪ್ರವೀತ್ ಮತ್ತು ವಿಭಾ ಸುಶ್ರಾವ್ಯವಾಗಿ “ಸಂಗೀತ ದೇವತೆಗೆ ಸಾಷ್ಟಾಂಗ ವಂದನೆ” ಬೆರಗುಗೊಳಿಸುವಂತೆ ಹಾಡಿ ಮುಂಬರಲಿರುವ ಉತ್ತಮ ಕಾರ್ಯಕ್ರಮಗಳಿಗೆ ಪೀಠಿಕೆ ಹಾಕಿದರು. ಇವರ ತಂಡಕ್ಕೆ ನವೀನ ಆಚಾರ್ (ತಬ್ಲಾ) ಮತ್ತು ಪ್ರೀತಿ ಕೊಡಂಚ (ಪಿಟೀಲು) ಪಕ್ಕವಾದ್ಯ ಸಹಕಾರ ನೀಡಿದರು. ಸಂಜನಾ ಕುಲಕರ್ಣಿಯವರು ಮಕ್ಕಳ ತಂಡಕ್ಕೆ ತರಬೇತಿನೀಡಿದ್ದರು.
ನಂತರ ವೇದಿಕೆಗೆ ಬಂದ ಶ್ರೀಮತಿ ಸುಮನಾ ಶಶಿಧರ್, ಶ್ರೀ ಇಬ್ರಾಹಿಂ ಕಡಲೂರ್, ಶ್ರೀಮತಿ ಗೀತಾ ಭಟ್, ಶ್ರೀಮತಿ ನಿರ್ಮಲಾ ಅಮರೇಶ್, ಶ್ರೀಮತಿ ನಿರ್ಮಲಾ ಶಿವಣ್ಣ,ಶ್ರೀಮತಿ ಸುನೀತ ತೆವರಿ,
ಡಾ. ಮಾಲತಿ, ಶ್ರೀ ಕಿಶನ್ ಶೆಟ್ಟಿ, ಶ್ರೀಶೈಲ್ ಹಂಗರ್ಗೆ ಮತ್ತು ಶ್ರೀ ರಂಜೀತ್ ರಾವ್ ಅವರನ್ನೊಳಗೊಂಡ ತಂಡವು ನಾಡಗೀತೆ “ಜಯ ಭಾರತ ಜನನಿಯ ತನುಜಾತೆ” ಯನ್ನು ಉತ್ಸಾಹಪೂರ್ವಕವಾಗಿ ಹಾಡಿ ಸಭಿಕರಲ್ಲಿ ಕರ್ನಾಟಕದ ಅಭಿಮಾನವನ್ನು ಜಾಗೃತಗೊಳಿಸಿದರು.
ಕುಮಾರಿ ಶರಣ್ಯ ಮತ್ತು ಕುಮಾರಿ ಶರ್ವಾಣಿಯರಿಂದ ಪ್ರದರ್ಶಿತಗೊಂಡ ಯಕ್ಷಗಾನವು ಕರ್ನಾಟಕದ ಕರಾವಳಿ ಮಣ್ಣಿನ ಒಂದು ಬಗೆಯ ವಿಶಿಷ್ಟ ಕಂಪನ್ನು ಜ್ಞಾಪಿಸಿತು . ಶ್ರೀ ಅರುಣ್ ಹೊಳ್ಳ ಅವರಿಂದ ತರಬೇತುಗೊಂಡ ಮಕ್ಕಳ ಈ ಪ್ರದಶನಕ್ಕೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಗೊಳಿಸಿದರು.
ಶ್ರೀಮತಿ ಸಂಜನಾ ಕುಲಕರ್ಣಿಯವರು ತರಬೇತಿ ನೀಡಿದ ಮಕ್ಕಳ ಜಾನಪದನೃತ್ಯ-ಅದಿತಿ, ಅಮೋಘ, ರಕ್ಷಿತಾ, ಶೋಣಿತ, ಶಿವಾನಿ, ಯಶಸ್ವಿ ಮುಂತಾದ ಪುಟಾಣಿಗಳನ್ನೊಳಗೊಂಡು ಸುಂದರವಾಗಿ ಮೂಡಿಬಂತು.
ಶ್ರೀಮತಿ ಪ್ರಮೀಳಾ ರಮೇಶ್ ನಿರ್ದೇಶನದೊಂದಿಗೆ ಮಹಿಳೆಯರ ತಂಡ ಪ್ರದರ್ಶಿಸಿದ ಸದಭಿರುಚಿಯ “ಚೆನ್ನಪ್ಪಚನ್ನೇಗೌಡ”
ನೃತ್ಯಕ್ಕೆ ಶ್ರೀಮತಿ ರಾಜಶ್ರೀ, ಶ್ರೀಮತಿ ಸಂಜನಾ, ಶ್ರೀಮತಿ ಶಾಲಿನಿ, ಶ್ರೀಮತಿ ಶ್ರುತಿ ಬಲ್ಲಾಳ್, ಶ್ರೀಮತಿಉಷಾ, ಶ್ರೀಮತಿ ವೀಣಾ ಮುಂತಾಗಿ ಅಪೂರ್ವವಾಗಿ ನರ್ತಿಸಿದರು.
ಪ್ರಪ್ರಥಮ ಬಾರಿಗೆ ನಿರ್ದೇಶನ ಕೈಗೊಂಡ ಶ್ರೀ ಸುಬ್ರಮಣ್ಯ ರಾಜುರವರ ನೇತೃತ್ವದ ದಂಪತಿಗಳ ತಂಡ – ರಾಜು-ಸುಮಾ, ಮಂಜುನಾಥ್-ಆಶಾ, ಧನಂಜಯ್-ರೂಪ, ಪ್ರದೀಪ್-ಶಾಂತಲಾ “ಶ್ರಾವಣ ಬಂತು ಶ್ರಾವಣ ” ಎಂಬ ನೃತ್ಯ ಗುಚ್ಛದೊಂದಿಗೆ ಎಗ್ಗಿಲ್ಲದೆ ಹಾಡಿ ಕುಣಿದರು.
ರವೀಂದ್ರ ಅಚಾರ್ಯರ ನಿರ್ದೇಶನದ ತಂಡ ಎರಡು ಹೆಜ್ಜೆ ಮುಂದಕ್ಕೆಹೋಗಿ ಕಿರು ನಾಟಕ ‘ಸೀತಾ ಸ್ವಯಂವರ’ ವನ್ನು ತಮ್ಮ ತಂಡದ ಸದಸ್ಯರಾದ ಶ್ರೀ ರವೀಂದ್ರ ಕಳತ್ತೂರ್, ಶ್ರೀ ಸುದೇಶ್ ಕಿನ್ನಿಗೋಳಿ ,ಶ್ರೀ ಹಿತೇಶ್ ಮಂಗಳೂರು, ಶ್ರೀಮತಿ ರೇಷ್ಮಾ ಹಿತೇಶ್, ಶ್ರೀ ಜಯರಾಮ್ ಕಾರ್ಕಳ ,ಶ್ರೀ ಹರೀಶ್ ಆಚಾರ್ಯ, ಶ್ರೀ ಸಂತೋಷ್ನೆಲ್ಲಿತೀರ್ಥ, ಬಾಲಕರಾದ ಸಮ್ರಿತ್ ಸುದೇಶ್, ರಿಷಭ್ ಕರುಣಾಕರ ರಾವ್, ರಾಹುಲ್ರತ್ನಾಕರ್, ಪ್ರತೀಕ್ ಪದ್ಮನಾಭ, ಅನುರಾಗ್ ಅಮೃತ್, ಬಾಲಕಿಯರಾದ ಧೃತಿರತ್ನಾಕರ್, ವರ್ಷಿಣಿ ಜಯರಾಮ್, ಅನುಶಿಕ ಅಮೃತ್, ಸಮೀಕ್ಷಾ ಸುದೇಶ್, ಚಾರ್ವಿಹಿತೇಶ್ ಹಾಗೂ ನೃತ್ಯನಿರೂಪಕಿ ಮಲ್ಲಿಕಾ ರವಿ ಇವರೆಲ್ಲರ ಸಹಕಾರದೊಂದಿಗೆ ಪ್ರದರ್ಶಸಿ ಎಲ್ಲರ ಮನ ಗೆದ್ದರು.
ಶ್ರೀಮತಿ ವಾಣಿ ವೇಕಟೇಶ್ ಸಾಂಪ್ರದಾಯಿಕ ನೃತ್ಯಕಲೆ ಭರತನಾಟ್ಯದಲ್ಲಿ ತರಬೇತಿಗೊಳಿಸಿದ ಮಕ್ಕಳು “ಬೃಂದಾವನಕೆ ಹಾಲನು ಮಾರಲು” ತುಂಬಾ ಮಾರ್ಮಿಕವಾಗಿ ಪ್ರದರ್ಶಿಸಿದರು. ಬಾಲಕಿಯರಾದ ಸುಧೀಕ್ಷಾ, ಶ್ರಾವ್ಯ, ಪಾವನಾ,
ಈಶಾಶ್ರೀ, ಭೂಮಿ, ಹಾಗೂ ಬಾಲಕ ಧ್ರುವ ಈ ನೃತ್ಯದ ಮೂಲಕ ನೋಡುಗರ ಮನರಂಜಿಸಿದರು. ಪ್ರತಿಯೊಂದೂ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿದ್ದು ಒಟ್ಟಾರೆ ಕಾರ್ಯಕ್ರಮಕ್ಕೆ ಅಲಂಕಾರಪ್ರಾಯವಾಗಿ ಮೂಡಿಬಂದು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ಪ್ರತಿಭಾ ಪುರಸ್ಕಾರ:
ಕಾರ್ಯಕ್ರಮದಲ್ಲಿ ಕನ್ನಡ ತರಗತಿಗಳಲ್ಲಿ ಉತ್ತಮ ನಿರ್ವಹಣೆ ನೀಡಿದಮಕ್ಕಳನ್ನು ಪ್ರತಿಭಾ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು. ಬಾಲಕಿಯರಾದ- ಸುಧೀಕ್ಷಾ ಶೆಣೈ, ರಕ್ಷಿತಾ ಕಾಮತ್, ವೈದೇಹಿ ಶೆಟ್ಟಿ,ಮತ್ತು ಅಮೂಲ್ಯ ಮೋಹನ್ ಇಚಗೇರಿ ಹಾಗೂ ಬಾಲಕ ತನೀಶ್ ಶೆಟ್ಟಿಗಾರ್-ಕನ್ನಡಕಲಿಕೆಯಲ್ಲಿ ತಮ್ಮ ತಮ್ಮ ಪ್ರತಿಭೆಯನ್ನು ತೋರಿದ್ದರು. ಇದಲ್ಲದೆ ಸ್ವಯಂಪ್ರೇರಿತರಾಗಿ ಮಕ್ಕಳಿಗೆ ಕನ್ನಡ ಕಲಿಸುವ ಹೊಣೆಹೊತ್ತ ಕನ್ನಡ ಶಿಕ್ಷಕರಾದ ಶ್ರೀಮತಿ ಸುಧಾ ಶಶಿಕಾಂತ್, ಶ್ರೀಮತಿ ಸುಜಾತಾ ರಾವ್ ,ಶ್ರೀಮತಿ ಜಯಾ ಛಬ್ಬಿ,ಶ್ರೀಮತಿ ಮಮತಾ ರಾವ್ ,ಶ್ರೀ ಕಿರಣ್ ಮಂಜುನಾಥ್ ಹಾಗೂ ಶ್ರೀ ಶಿವಣ್ಣ ಬರಗೂರ್ ಇವರನ್ನು ನೆನಪಿನ ಕಾಣಿಕೆಗಳೊಂದಿಗೆ ಸನ್ಮಾನಿಸಲಾಯಿತು. ಬ್ಯಾಂಕ್ ಮಸ್ಕತ್ತಿನ ಅನಿವಾಸಿಗಳ ವಿಭಾಗದ ಮುಖ್ಯಸ್ಥ ಶ್ರೀ.ಜಿ.ವಿ.ರಾಮಕೃಷ್ಣ ಅವರು ಮಸ್ಕತ್ ನಲ್ಲಿ ಕನ್ನಡದ ಏಳಿಗೆಯ ಉದ್ದೇಶದಿಂದ ಪ್ರತಿಭಾವಂತ ಮಕ್ಕಳಿಗೆ ಹಾಗೂ ಅವರನ್ನು ಈ ಮಟ್ಟಕ್ಕೆ ತಂದ ಶಿಕ್ಷಕರಿಗೆ ಈ ಹಿಂದೆ ಘೋಷಿಸಿದ್ದ ಬಹುಮಾನಗಳನ್ನು ತಮ್ಮ ಕೈಯಾರ ಸನ್ಮಾನಿತರಿಗೆ ವಿತರಿಸಿದರು. ಕರ್ನಾಟಕ ಸಂಘದ ಆಡಳಿತ ಮಂಡಳಿಯ ಮಹಿಳಾ ಸದಸ್ಯೆಯರಾದ ಶ್ರೀಮತಿ ಭಾರತಿ ಬಾಳಗುರಗಿ , ಶ್ರೀಮತಿ ಜಯಲಕ್ಷ್ಮಿ ಶೆಣೈ ಮತ್ತು ಶ್ರೀಮತಿ ಸುಧಾ ಶಶಿಕಾಂತ್ ಅವರು ಈ ಎಲ್ಲಾ ಕಾರ್ಯಕ್ರಮಗಳ ನಡು-ನಡುವೆ ಸದಸ್ಯರೊಂದಿಗೆ ಸಲ್ಲಾಪವನ್ನು ನಡೆಸಿ ಸಭಿಕರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ಮಾಡಿ ಕೊಟ್ಟರು. ಶ್ರೀಮತಿ ಜಯ ಛಬ್ಬಿ ಮತ್ತು ಶ್ರೀಮತಿ ಶುಭಾ ಚಂದ್ರಮೋಹನ್ ಅವರು ಕಾರ್ಯಕ್ರಮದ ರೂವಾರಿಗಳಾಗಿ ಉತ್ತಮ ನಿರೂಪಣೆಯೊಂದಿಗೆ ಎಲ್ಲರನ್ನು ರಂಜಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಉಪಾಧ್ಯಕ್ಷರಾದ ರಮೇಶ್ ಕುಮಾರ್ ಅವರ ವಂದನಾರ್ಪಣೆಯೊಂದಿಗೆ ಸಭಾ ಕಾರ್ಯಕ್ರಮ ಮುಗಿಯಿತು.
ಸಂಘದ ಸದಸ್ಯ ರಾದ ಶ್ರೀ ವಿಠ್ಠಲ್ ಪೂಜಾರಿ,ಶ್ರೀ ರಾಮಾನಂದ ಕುಂದರ್,ಶ್ರೀ ಕಾರ್ತಿಕ್ ಕುಂದರ್, ಶ್ರೀಮತಿ ಸುನೀತಾ ತೆವರೇ, ಶ್ರೀ ರಮೇಶ್ ಕಾಮತ್, ಶ್ರೀ ದಿವಾಕರ್ ಪ್ರಭು ,ಶ್ರೀಮತಿ ವಾರಿಜಾ ಆಚಾರ್,ಶ್ರೀಮತಿ ವಿನುತ ಅಮೃತ್ ,ಶ್ರೀಮತಿ ರೇಷ್ಮಾ ಹಿತೇಶ್, ಶ್ರೀ ಕುಮಾರೇಶ್, ಶ್ರೀ ರಾಜೇಶ್ ಕಾಮತ್ ಮುಂತಾದವರು ಸ್ವಯಂಸೇವಕರಾಗಿ ದುಡಿದು ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾದರು. ಕರ್ನಾಟಕ ಸಂಘ ಎಲ್ಲಾ ಸ್ವಯಂಸೇವಕರಿಗೆ ಆಭಾರಿಯಾಗಿರುತ್ತದೆ ಎಂದು ಶ್ರೀ ರಮೇಶಕುಮಾರ್ ಇವರು ಅವರೆಲ್ಲರ ಸೇವೆಯನ್ನು ಶ್ಲಾಘಿಸಿದರು ಓಯಸಿಸ್ ವಾಟರ್ ನ ಶ್ರೀ ಸುನಿಲ್ ಕುಮಾರ್ ನೀರಿನ ವ್ಯವಸ್ಥೆಯನ್ನು ಮಾಡಿದ್ದರು.
ಕಾರ್ಯಕ್ರಮದ ನಿಜವಾದ ಆಕರ್ಷಣೆಯೆಂದರೆ ಸಭಾ ಕಾರ್ಯಕ್ರಮ ಮುಗಿದೊಡನೆ ಏರ್ಪಡಿಸಿದ್ದ ಬಾಳೆ ಎಲೆಯಲ್ಲಿ ಬಡಿಸಿದ ಹಬ್ಬದ ಸಾಂಪ್ರದಾಯಿಕ ಔತಣ. ಚಂದದ ಕಾರ್ಯಕ್ರಮಕ್ಕೆ ಅಂದದ ಮುಕ್ತಾಯ ಹೋಳಿಗೆ ಊಟದೊಂದಿಗೆ ಆಯಿತು. ಉಡುಪಿ ಹೋಂ ನ ಮಾಲೀಕರಾದ ಸುರೇಶ ರಾವ್ ಅವರು ಸವಿಯಾದ ಭೋಜನ ಒದಗಿಸಿದ್ದರು.
ಮಸ್ಕತ್ ಕರ್ನಾಟಕ ಸಂಘವು ಈ ಕಾರ್ಯಕ್ರಮದಲ್ಲಿ ಅನೇಕ ಪ್ರಥಮಗಳನ್ನ ಸಾಧಿಸಿತು. ವಿನೂತನ ಪ್ರಯೋಗವಾಗಿ ಶುಕ್ರವಾರ ಬೆಳಗ್ಗೆ “ಯುಗಾದಿ ಸಂಭ್ರಮ” ನಡೆದುದು ಹಾಗೂ ಬಾಳೆ ಎಲೆಯಲ್ಲಿ ಮೃಷ್ಟಾನ್ನ ಭೋಜನ ವ್ಯವಸ್ಥೆ ಮಾಡಿದುದು ಸದಸ್ಯರೆಲ್ಲರ ಮನಗೆಲ್ಲುವಲ್ಲಿ ಸಂಪೂರ್ಣ ಸಫಲವಾಯಿತು
ವರದಿ – ಕರುಣಾಕರ್ ರಾವ್ ಹಾಗೂ ಸುಧಾ ಶಶಿಕಾಂತ್
All Karnataka Sangha members of Muscat have sent greetings to all of you M.com.
Thanks a lot MANGALOREAN.COM for the publication of article in a flash!
.