ನಿಟ್ಟೂರು ಸ್ಟೇಟ್ ಹೋಮಿನಿಂದ ತಾಯಿ ಮಗು ನಾಪತ್ತೆ
ಉಡುಪಿ : ರಾಜ್ಯ ಮಹಿಳಾ ನಿಲಯದ ಅಧೀಕ್ಷಕರ ಸಂಸ್ಥೆಗೆ ಕೊಲ್ಲೂರು ಪೊಲೀಸ್ ಠಾಣೆಯ ಮುಖಾಂತರ ದಾಖಲಾಗಿದ್ದ 30 ವರ್ಷ ಪ್ರಾಯದ ರೂಪಾಲಿ ಗಂಡ: ಶಿವಾಜಿ ಗುಲಾಬ್ ರಾವ್ ಘನವಟ್, (ವಿಳಾಸ: ರಾಜ್ ಪುರ್, ಹೈಸ್ಕೂಲ್ ಖಟಾವ್ ತಾಲೂಕು, ಸತರಾ ಜಿಲ್ಲೆ, ಮಹಾರಾಷ್ಟ್ರ) ಎಂಬವರು ಹಾಗೂ ಸಾಂತ್ವಾನ ಸಹಾಯವಾಣಿ ಉಡುಪಿ ಇವರ ಮುಖಾಂತರ ದಾಖಲಾಗಿದ್ದ 34 ವರ್ಷ ಪ್ರಾಯದ ಸುಶೀಲ(ಮೂಗಿ) ಹಾಗೂ ಆಕೆಯ ಗಂಡು ಮಗು 1 ವರ್ಷ ಪ್ರಾಯದ ರಾಜೇಶ್, (ವಿಳಾಸ: ತೆರೆಸಾ ಸೆಲ್ದಾನ ನಿಯರ್ ಅಚ್ಚಡ ಶಾಲೆ ಸರಕಾರಿ ಗುಡ್ಡೆ ಕಟಪಾಡಿ) ಎಂಬವರು ಜೂನ್ 25ರಂದು ರಾತ್ರಿ 12.30 ಗಂಟೆಗೆ ಸಂಸ್ಥೆಯ ಅಡುಗೆ ಕೋಣೆಯ ಬೀಗವನ್ನು ಒಡೆದು ಅಲ್ಲಿಂದ ತಪ್ಪಿಸಿಕೊಂಡು ಹೋದವರು ಈವರೆಗೆ ವಾಪಾಸು ಬಾರದೆ ಕಾಣೆಯಾಗಿದ್ದು, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ರೂಪಾಲಿಯ ಕುತ್ತಿಗೆಯಲ್ಲಿ ಕಪ್ಪು ಮಚ್ಚೆ ಇದ್ದು, ಗೋಧಿ ಮೈಬಣ್ಣ ಹೊಂದಿರುತ್ತಾರೆ. ಗುಲಾಬಿ ಬಣ್ಣದ ಸೀರೆ, ಕಾಫಿ ಕಲರ್ ಸ್ವೆಟ್ಟರ್ ಧರಿಸಿರುತ್ತಾರೆ. ಮರಾಠಿ ಹಾಗೂ ಹಿಂದಿ ಭಾಷೆ ಬಲ್ಲವರಾಗಿರುತ್ತಾರೆ.
ಸುಶೀಲ ಅವರ ಮುಖದ ಬಲಭಾಗದಲ್ಲಿ ಕಪ್ಪು ಮಚ್ಚೆ ಇದ್ದು, ಎಣ್ಣೆ ಕಪ್ಪು ಬಣ್ಣ ಮೈಬಣ್ಣ ಹೊಂದಿರುತ್ತಾರೆ. ಕಪ್ಪುಬಣ್ಣದ ನೀಲಿ ಹೂವಿನ ಸೀರೆ, ನೀಲಿ ರವಕೆ ಧರಿಸಿರುತ್ತಾರೆ. ತೆಲುಗು ಬಾಷೆ ಬರೆಯಬಲ್ಲವರಾಗಿರುತ್ತಾರೆ. ಮಗು ರಾಜೇಶ್ ಕಂದು ಬಣ್ಣದ ಟೀಶರ್ಟ್ ಧರಿಸಿರುತ್ತಾರೆ.
ಸದರಿ ಚಹರೆಯುಳ್ಳ ಹೆಂಗಸರು ಹಾಗೂ ಮಗುವಿನ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.