ನಿರಂಜನರ ಕೃತಿಗಳಲ್ಲಿರುವ ಎಡಪಂಥೀಯ ನೆಲೆಯಲ್ಲೂ ಜೀವನ ದೃಷ್ಟಿ– ವಿಜಯಶಂಕರ್ ಇಂದಿರಾ ನಾಡಿಗ್

Spread the love

ನಿರಂಜನರ ಕೃತಿಗಳಲ್ಲಿರುವ ಎಡಪಂಥೀಯ ನೆಲೆಯಲ್ಲೂ ಜೀವನ ದೃಷ್ಟಿ– ವಿಜಯಶಂಕರ್
ಇಂದಿರಾ ನಾಡಿಗ್

ನಿರಂಜನರ ಬರವಣಿಗೆ ಬಹಳ ವಿಶಿಷ್ಟವಾದದ್ದು ಅವರ ಕೃತಿಗಳು ಎಡಪಂಧೀಯ ನೆಲೆಯಲ್ಲೂಜೀವನದೃಷ್ಟಿ ಮತ್ತು ಮಾನವೀಯದೃಷ್ಟಿಯನ್ನುಕಾಣಬಹುದುಎಂದುಖ್ಯಾತ ವಿಮರ್ಶಕರಾದಎಸ್.ಆರ್. ವಿಜಯಶಂಕರ್‍ಅವರು ತಿಳಿಸಿದರು.

ಅವರು ಬೆಂಗಳೂರಿನಕನ್ನಡ ಭವನದಲ್ಲಿ 1 ನೇ ಆಗಸ್ಟ್, 2018 ರಂದುದೆಹಲಿ ಕರ್ನಾಟಕ ಸಂಘದ ವತಿಯಿಂದ ಏರ್ಪಡಿಸಿದ್ದ ನಿರಂಜನ ನೀಲಾಂಜನ, ಕೃತಿ ಸ್ಮøತಿ ಪುಸ್ತಕ ಬಿಡುಗಡೆಕಾರ್ಯಕ್ರಮದಲ್ಲಿಕೃತಿಯನ್ನುಕುರಿತು ಮಾತನಾಡುತ್ತಾ, ನಿರಂಜನರ ಬರಹಗಳಲ್ಲಿ ಬದ್ಧತೆಯ ಪರಿಕಲ್ಪನೆ, ಚಾರಿತ್ರಿಕ ವಿವರಗಳ ಗ್ರಹಿಕೆಯಲ್ಲಿಎಡಪಂಥೀಯ ನಿಲುವಿನಿಂದ ಮೊದಲುಕಾಣುತ್ತದೆ. ತಾ.ರಾ.ಸು, ಅ.ನ.ಕೃ ಅವರಚಾರಿತ್ರಿಕ ಅಂಶಗಳನ್ನು ನೋಡಿದಾಗಇಂತಹವಿವರಗಳು ಕಾಣ ಸಿಗುವುದಿಲ್ಲ ಎಂದಅವರು ನಿರಂಜನಅವರಅಪರಂಪಾರಮತ್ತುಕಲ್ಯಾಣ ಸ್ವಾಮಿ ಕೃತಿಗಳ ಬಗ್ಗೆ ವಿವರಿಸುತ್ತಾಅವು ಅಮರದಂಗೆಗೆ ಸಂಬಂಧಿದ್ದು,ಬ್ರಿಟೀಷರು ಬಂದಂತಸಮಯದಲ್ಲಿ ಬ್ರಿಟೀಷರಿಗೆಟಿಪ್ಪುವನ್ನುಎದುರಿಸುವುದೇ ಬಹಳ ಮುಖ್ಯ ಸಮಸ್ಯೆಯಾಗಿತ್ತು. ಕರಾವಳಿಯ ಚರಿತ್ರೆಯಲ್ಲಿಅಲ್ಲಿನತುಂಡರಸರು ಬ್ರಿಟೀಷರಿಗೆಕಪ್ಪಕೊಡಬೇಕೋ, ಟಿಪ್ಪುವಿಗೆಕೊಡಬೇಕೋ ಎಂಬ ಗೊಂದಲದಲ್ಲಿದ್ದಂತಕಾಲದಲ್ಲಿ, ವಸ್ತುಗಳ ರೂಪದಲ್ಲಿಕೊಡುತ್ತಿದ್ದಕಪ್ಪವನ್ನು ಬ್ರಿಟೀಷರು ಹಣದರೂಪದಲ್ಲಿಕೊಡಬೇಕೆಂದಾಗ, ಕಪ್ಪವನ್ನುಕೊಡದೆ ಕುಂಬಳೆ ಅರಸರುದೇವಸ್ಥಾನದಲ್ಲಿತಮ್ಮ ಸಂಪತ್ತನ್ನು ಮುಚ್ಚಿಡುತ್ತಾರೆ. ವಿಠಲದದೊಂಬರಸರು ಸುಮಾರು 380 ಸೈನಿಕರೊಂದಿಗೆ ಹೋಗಿ ಸಂಪತ್ತನ್ನೆಲ್ಲಾದೋಚುತ್ತಾರೆ. ಹೀಗೆ ಬ್ರಿಟೀಷರು ಮತ್ತುಟಿಪ್ಪುವಿನ ಕಾಲದಲ್ಲಿತೆರಿಗೆಯದೇದೊಡ್ಡ ಸಮಸ್ಯೆಯಾಗಿ,ತೆರಿಗೆಕಾರಣಕ್ಕಾಗೆ ಬ್ರಿಟೀಷರು 110 ಹಳ್ಳಿಗಳನ್ನು ಕೊಡಗಿಗೆ ಸೇರ್ಪಡೆ ಮಾಡಿ, ಪುನಃತೆಗೆಯುತ್ತಾರೆ. ಹೀಗೆ ತೆರಿಗೆ ಸಂಗ್ರಹದಕ್ರಮ ಬದಲಾಗುತ್ತದೆ.ತೆರಿಗೆಕೊಡುವಜನ ಬದಲಾಗುತ್ತಾರೆ. ಇಂತಹಾಆರ್ಥಿಕತೆಯ ಸುತ್ತ ನಡೆದಚಾರಿತ್ರಿಕ ವಿವರಗಳನ್ನು, ಚರಿತ್ರೆಯ ಎಷ್ಟೋ ಮಹತ್ತರ ಬೆಳವಣಿಗೆಗಳನ್ನು,ಸೂಕ್ಷ್ಮತೆಯನ್ನುಅರಿತುಗ್ರಹಿಸುವ ಮೂಲಕನಿರಂಜನರುತಮ್ಮ ಕೃತಿಗಳಲ್ಲಿ ನೀಡಿರುವಕೊಡುಗೆಯಾಗಿದೆಎಂದರು.

ಇವತ್ತು ನಮಗೆ ನಿರಂಜನರು ಬಹಳ ಮುಖ್ಯಯವಾಗುವುದು, ನಿರಂಜನರ ಕೃತಿಗಳಾದ, ಕೊನೆ ಗಿರಾಗಿ, ಚಿರಸ್ಮರಣೆ, ಅಪರಂಪರ ಹೀಗೆ ಅವರಯಾವುದೇ ಕೃತಿಗಳಲ್ಲಿ ಎಡಪಂಥೀಯ ನೆಲೆಯಲ್ಲೂ ಸಮೃದ್ಧಜೀವನಇದೆ, ಅಲ್ಲಿಯೂಒಂದುಜೀವನದೃಷ್ಟಿಇದೆ, ಜೀವಕಾರುಣ್ಯಇದೆ, ಜೀವಪರಧೋರಣೆಇದೆಎಂಬುದನ್ನುಅವರ ಕಾದಂಬರಿಗಳು, ಕೃತಿಗಳು, ಕಥೆಗಳು ತೋರಿಸಿಕೊಡುತ್ತವೆ. ಅಷ್ಟೇ ಏಕೆ ರಂಗಮ್ಮನ ವಠಾರದಂತಹಾ ಬರಹದಲ್ಲಿಅಲ್ಲಿರುವಂತಹಾ 18 ಕುಟುಂಬಗಳ ಆರ್ಥಿಕ ನೆಲೆ, ಅದರ ಮೇಲಿರುವಂತಹಾಜನರು, ಅವರು ಪಡುವ ಸಂಕಷ್ಟಗಳು, ಅವುಗಳಿಂದುಂಟಾಗುವ ಹೊಸ ಜೀವನ ದೃಷ್ಟಿಗಳು ಮತ್ತು ಮಾನವೀಯತೆ ಮಿಡಿಯುವಕ್ರಮ ನಮಗೆ ಕಾಣಸಿಗುತ್ತದೆ ಎಂದರು.
ನಿರಂಜನರ ಬಗ್ಗೆ ವಿಚಾರ ಸಂಕಿರಣವನ್ನು ಏರ್ಪಡಿಸಿ, ಅನೇಕರಿಂದ ಲೇಖನಗಳನ್ನು ಬರೆಸಿ, ಸಂಗ್ರಹಿಸಿ ಮರು ಓದಿಗೆ ಚಾಲನೆಯನ್ನು ನೀಡುವಂತಹಾ ಮಹತ್‍ಕಾರ್ಯಕ್ಕೆ ಹೊರನಾಡಿನದೆಹಲಿ ಕರ್ನಾಟಕ ಸಂಘ ಚಾಲನೆ ನೀಡಿದೆ.ಇದುಇಲ್ಲಿಗೇ ನಿಲ್ಲದೆಕರ್ನಾಟಕದ ಒಳಗಿರುವ ನಾವು ಒಳನಾಡಿನವರು ಅದನ್ನು ಮುಂದುವರಿಸುವಅಗತ್ಯವಿದೆ.ಅದು ಇಂದಿನ ಸಾಂಸ್ಕøತಿಕಅಗತ್ಯವುಆಗಿದೆಎಂದರು.


Spread the love