ನಿರಂಜನರ ವಿಚಾರಧಾರೆಗಳನ್ನು ಹೊಸಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕಾಗಿದೆ
ದೆಹಲಿ: ಕುಳಕುಂದ ಶಿವರಾಯ ಯಾನೆ ನಿರಂಜನರವರ ವ್ಯಕ್ತಿ-ವಿಚಾರ-ಬದುಕು-ಸಾಹಿತ್ಯ ಮತ್ತು ಚಳುವಳಿ ಕುರಿತಂತೆ ದೆಹಲಿ ಕರ್ನಾಟಕ ಸಂಘದಲ್ಲಿ ಕನ್ನಡಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರ ಸಹಯೋಗದಲ್ಲಿ ರಾಷ್ಟ್ರಮಟ್ಟದ ವಿಚಾರಗೋಷ್ಠಿಯನ್ನುಏರ್ಪಡಿಸಲಾಗಿತ್ತು.
ಕನ್ನಡಖ್ಯಾತ ಸೃಜನಶೀಲ ಕಥೆಗಾರ ಮತ್ತು ಸಾಹಿತಿಡಾ.ಕಾಳೇಗೌಡ ನಾಗವಾರಅವರು ಈ ವಿಚಾರಸಂಕಿರಣವನ್ನು ಉದ್ಘಾಟಿಸಿದರು.ಜೆ.ಎನ್.ಯು.ಕನ್ನಡಅಧ್ಯಯನ ಪೀಠದ ಪ್ರಾಧ್ಯಾಪಕರಾದಡಾ.ಪುರುಷೊತ್ತಮ ಬಿಳಿಮಲೆಅವರುಅಧ್ಯಕ್ಷತೆ ವಹಿಸಿದ್ದರು.ಖ್ಯಾತ ನ್ಯಾಯವಾದಿ ಶ್ರೀ ಬಾಲಸುಬ್ರಹ್ಮಣ್ಯಕಂಜರ್ಪಣೆ, ನಿವೃತ್ತ ಪ್ರಾಧ್ಯಾಪಕರಾದಡಾ.ಎಚ್.ಎಂ. ಕುಮಾರಸ್ವಾಮಿ, ಖ್ಯಾತ ಸಾಹಿತಿಡಾ.ಟಿ.ಸಿ. ಪೂರ್ಣಿಮಾ, ಅನಘ್ರ್ಯಐ.ಎ.ಎಸ್. ಅಕಾಡೆಮಿಯ ನಿರ್ದೇಶಕರಾದ ಶ್ರೀ ಮನೋಜ್ ಎಂ.ಕೆ. ಹಾಗೂ ಸಂಘದಅಧ್ಯಕ್ಷರಾದಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಅವರುಸೇರಿದಂತೆ ಸುಳ್ಯ, ಪರಿಸರದ ನಿರಂಜನರನ್ನು ಬಲ್ಲವರುಕೂಡಿಅತ್ಯಂತಅರ್ಥಗರ್ಭಿತವಾದ ಸುಮಾರು ಮೂರು ಗಂಟೆಗಳ ಕಾಲ ಸುಧೀರ್ಘ ವಿಚಾರ ವಿನಿಮಯ ನಡೆಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರೊ.ಕಾಳೇಗೌಡ ಅವರು ನಿರಂಜನರ ಹೋರಾಟದ ಬದುಕು ಮತ್ತುಕ್ರಾಂತಿಕಾರಿ ಚಳುವಳಿಯಿಂದ ಪ್ರೇರಿತ ಬರಹಗಳು ಅಂದಿನ ಸಮಾಜದ ವಾಸ್ತವಿಕತೆಯನ್ನು ವಸ್ತುನಿಷ್ಠವಾಗಿ ಪರಿಚಯಿಸುತ್ತವಲ್ಲದೆ ಆ ವಿಚಾರಧಾರೆ ಇಂದಿನ ಸಮಾಜಕ್ಕೂಕೂಡಾಅತ್ಯಂತಅರ್ಥಪೂರ್ಣವಾಗಿದೆಎಂದು ನುಡಿದರು.ಇಂತಹ ಮಹಾನ್‍ಚಿಂತಕನ ಬದುಕು, ಬರಹಗಳ ಕುರಿತಾಗಿಇನ್ನಷ್ಟು ಹೆಚ್ಚು ಹೆಚ್ಚು ವಿಚಾರ ಸಂಕಿರಣಗಳು ನಡೆದುಅವರ ಬರಹಗಳು ಮತ್ತು ವಿಚಾರಧಾರೆಗಳನ್ನು ಹೊಸ ಪೀಳಿಗೆಗೆ ಕರ್ನಾಟಕ ಮತ್ತುದೇಶದಾದ್ಯಂತ ಪರಿಚಯಿಸುವ ಕೆಲಸ ಆಗಬೇಕಾಗಿದೆಎಂದುಅಭಿಪ್ರಾಯಪಟ್ಟರು.
ಡಾ. ಎಚ್.ಎಂ. ಕುಮಾರಸ್ವಾಮಿಅವರು ಮಾತನಾಡುತ್ತ, ನಿರಂಜನಅವರ ಬಾಲ್ಯದಿಂದ ಕೊನೆಘಳಿಗೆವರೆಗಿನ ಜೀವನದ ವಿವಿಧಸ್ಥರಗಳನ್ನು ಪರಿಚಯಿಸಿಕೊಟ್ಟರು.
ಡಾ. ಟಿ.ಸಿ. ಪೂರ್ಣಿಮಾಅವರು ನಿರಂಜನಅವರ ಬರಹಗಳನ್ನು ಅದರಲ್ಲೂ ಮುಖ್ಯವಾಗಿಕಾದಂಬರಿ ಮತ್ತು ಕಥೆಗಳನ್ನು ವಿಶ್ಲೇಷಿಸಿಸತ್ಯವನ್ನುಅನ್ವೇಷಣೆ ಮಾಡುತ್ತಾ ಹೋದ ನಿರಂಜನರುಗಾಂಧೀವಾದ, ಮಾಕ್ರ್ಸ್‍ವಾದ, ಲೋಹಿಯಾವಾದಗಳಲ್ಲಿ ಕಂಡುಬರುವ ಸಮಾಜವಾದಿ ವಿಚಾರಗಳನ್ನು ತಮ್ಮದೇರೀತಿಯಲ್ಲಿ ‘ನಿರಂಜನವಾದ’ವಾಗಿ ಮಾಡುವ ಪ್ರಯತ್ನ ಮಾಡಿದರು. ಅಂದಿನ ರಮ್ಯ ಸಾಹಿತ್ಯದ ಭ್ರಮೆಯನ್ನು ನಿರಂಜನವಾದದಕಡು ಸತ್ಯವನ್ನುಜನಅಷ್ಟೊಂದು ಮೆಚ್ಚಿಕೊಳ್ಳಲು ಮತ್ತು ಪ್ರಚಾರಪಡಿಸಲಿಲ್ಲ.
ಶ್ರೀಬಾಲಸುಬ್ರಹ್ಮಣ್ಯಕಂಜರ್ಪಣೆಅವರು ನಿರಂಜನರವರ ಹೋರಾಟತನ ಮತ್ತುಕ್ರಾಂತಿಕಾರಿದೃಷ್ಟಿಯನ್ನು ನಿರಂಜನರ ಬದುಕು-ಬರಹಗಳೆರಡರಲ್ಲೂ ಸ್ಪಷ್ಟವಾಗಿಕಾಣಬಹುದಾಗಿದೆಎಂದು ನಿರಂಜನರ ಕೃತಿಗಳನ್ನು ಉದಾಹರಿಸುವುದರ ಮೂಲಕ ವಿವರಿಸಿದರು.
ಶ್ರೀ ಮನೋಜ್ ಎಂ.ಕೆ.ಅವರು ಮಾತನಾಡುತ್ತ ಸಾಹಿತ್ಯದಎಲ್ಲಾ ಪ್ರಕಾರಗಳಲ್ಲಿ ಒಂದು ವಿಶಿಷ್ಟಪ್ರಕಾರವಾಗಿಎದ್ದುಕಾಣುವ ನಿರಂಜನರ ಬರಹಗಳು ಸಾಹಿತ್ಯ ಅಭ್ಯರ್ಥಿಗಳೆಲ್ಲರಿಗೂ ಒಂದುಅತ್ಯಂತದೊಡ್ಡಕುತೂಹಲಕಾರಿ ಹಾಗೂ ಸವಾಲಾದ ವಿಷಯವಾಗಿಕಂಡು ಬರುತ್ತದೆ.ನಿರಂಜನರನ್ನುಓದುತ್ತಾ ಹೋದಂತೆಒಂದು ಹೊಸ ಜಗತ್ತೇತೆರೆದುಕೊಲ್ಳುತ್ತದೆ.ಎಂದು ನುಡಿದರು.
ಸಮಾರಂಭದಅಧ್ಯಕ್ಷತೆ ವಹಿಸಿದ ಪ್ರೊ.ಬಿಳಿಮಲೆ ಅವರು ಮಾತನಡುತ್ತಾ, ನಿರಂಜನರು ಅಂದಿನ ಸಮಾಜದಲ್ಲಿಅತ್ಯಂತಧೈರ್ಯದಿಂದತಮ್ಮ ವಿಚಾರಗಳನ್ನು ಬರವಣಿಗೆಯ ಮೂಲಕ ವ್ಯಕ್ತಪಡಿಸಿದ್ದಲ್ಲದೆ ತಮ್ಮ ಬದುಕಿನಲ್ಲೂ ಸಹ ಯಾವುದೇರೀತಿಯ ಮುಜುಗರ, ಮುಚ್ಚುಮರೆ ಇಟ್ಟುಕೊಳ್ಳದೆ ಸತ್ಯಕ್ಕಾಗಿತಮ್ಮ ಕೊನೆ ಉಸಿರಿರುವವರೆಗೆ ಹೋರಾಟ ನಡೆಸಿದರು.ಅವರ ಬರಹಗಳಲ್ಲಿ ಕಂಡು ಬರುವ ಬಂಡಾಯ, ಬ್ರಿಟೀಷರ ವಿರುದ್ಧ ಮತ್ತುಜಮೀನ್ದಾರಿ ಪದ್ಧತಿಯ ವಿರುದ್ಧ ನಡೆಸಿದ ಹೋರಾಟಅವರ ಭೂಗತಜೀವನಇವೆಲ್ಲವನ್ನು ಎಳೆಎಳೆಯಾಗಿ ಬಿಡಿಸಿ ನೋಡಿದಾಗ ನಿರಂಜನರ ಬದುಕು ಮತ್ತು ಬರಹಗಳು ಒಂದು ಸಮಾಜದಒಟ್ಟಾರೆಅಭಿವೃದ್ಧಿ ಬೆಳವಣಿಗೆಗೆ ಅತ್ಯಂತ ಮಹತ್ವಪೂರ್ಣವಾದದ್ದಾಗಿದೆಎಂದುಅಭಿಪ್ರಾಯಪಟ್ಟರು.ನಿರಂಜನರು ಮತ್ತು ಶಿವರಾಮ ಕಾರಂತರು ಬರೆದ ಕೃತಿಗಳು ಇಂಗ್ಲಿಷ್ ಮತ್ತು ಭಾರತದಇತರ ಭಾಷೆಗಳಲ್ಲಿ ತರ್ಜುಮೆಗೊಂಡುದೇಶ ವಿದೇಶಗಳ ಚಿಂತಕರನ್ನು ಮುಟ್ಟುವಂತಾದಲ್ಲಿ ಇವರುಗಳ ಬರಹಗಳು ವಿಶ್ವಮಟ್ಟದ ಬರಹಗಳ ಸಾಲಿನಲ್ಲಿ ನಿಲ್ಲುವುದರಲ್ಲಿಯಾವುದೇ ಸಂದೇಹವಿಲ್ಲ ಎಂದು ನುಡಿದರು.
ಮೃತ್ಯಂಜಯ, ಚಿರಸ್ಮರಣೆ, ಕೊನೆಯಗಿರಾಕಿ, ಬನಶಂಕರಿ ಸೇರಿದಂತೆ 25 ಕಾದಂಬರಿಗಳು ವಿಶ್ವಕಥಾ ಸಂಕಲನಕ್ಕೆ ಸೇರಿವೆ. ಕೈಯೂರುನಲ್ಲಿ ನಡೆದ ರೈತಚಳುವಳಿಯನ್ನು ಆಧರಿಸಿ ಬರೆದ ಬರಹ ಮಳಯಾಲಂ ಭಾಷೆಯಲ್ಲಿತರ್ಜುಮೆಗೊಂಡಿದ್ದುಅದು ಮಲಯಾಳಂನಲ್ಲಿ ಅತ್ಯಂತ ಹೆಚ್ಚು ಜನಓದಿರುವ ಭಾಷಾಂತರಕೃತಿಯಾಗಿದೆ.ನಿರಂಜನರಕೃತಿಯಾದ‘ಚಿರಸ್ಮರಣೆ’ಯನ್ನು ಆಧರಿಸಿ ಮಲಯಾಳಂನಲ್ಲಿ ನಿರ್ಮಾಣಗೊಂಡಚಲನಚಿತ್ರ ಪ್ರಸಿದ್ಧಿಪಡೆದಿದೆ.
ಮೊದಲಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಸರ್ಕಾರ ನಿರ್ಮಾಣದ ‘ನಿರಂಜನ’ರಕುರಿತಕಿರುಚಿತ್ರ ಪ್ರದರ್ಶನವಾಯಿತು.ಸಂಘದಅಧ್ಯಕ್ಷರಾದ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಅವರು ಅತಿಥಿಗಳನ್ನು ಸ್ವಾಗತಿಸಿದರು.ಸಾಂಸ್ಕøತಿಕ ಸಮಿತಿಯಅಧ್ಯಕ್ಷರಾದ ಶ್ರೀ ಸಖಾರಾಮಉಪ್ಪೂರುಅವರುಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಅರ್ಪಿಸಿದರು.
ನಿರಂಜನ
ನಿರಂಜನ (1924-1992) ಒಬ್ಬಖ್ಯಾತ ಬರಹಗಾರ.ಒಬ್ಬ ಸ್ವಾತಂತ್ರ್ಯ ಹೋರಾಟಗಾರ.ನಿಜ ನಾಮಧೇಯ ಕುಳಕುಂದ ಶಿವರಾಯ.ಇವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು.ಗಾಂಧೀಜಿ, ಕಾರ್ಲ ಮಾರ್ಕ್ಸ, ವ್ಲಾಡಿಮಿರ್ ಲೆನಿನ್ ರ ವಿಚಾರಧಾರೆಗಳಿಂದ ಪ್ರಭಾವಿತರಾದವರು.ಶ್ರೀಯುತರು ಸುಮಾರುಐದು ದಶಕಗಳ ಕಾಲ ಸಮೃದ್ಧವಾದ ಸಾಹಿತ್ಯಕೃಷಿಯಲ್ಲಿತೊಡಗಿದ್ದರು.ಇವರ ಬರವಣಿಗೆಕೃತಿ, ಕಾದಂಬರಿ, ಸಣ್ಣ ಕಥೆಗಳು, ನಾಟಕಗಳು, ಜೀವನ ಕಥನಗಳು, ರಾಜಕೀಯ ವ್ಯಾಖ್ಯಾನಗಳು ಮತ್ತು ಭಾಷಾಂತರಗಳನ್ನು ಒಳಗೊಂಡಿವೆ. ಅವರುಕನ್ನಡ ವಾರ್ತಾಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ನಿಯತಅಂಕಣಕಾರರಾಗಿದ್ದರು.ಅವರ ಸಾಧನೆಯಲ್ಲಿಯುವಕರಿಗಾಗಿ 7 ಸಂಪುಟಗಳ ಜ್ಞಾನಗಂಗೋತ್ರಿ ಮತ್ತು 25 ಸಂಪುಟಗಳ ಪ್ರಪಂಚದ ಮಹತ್ತರವಾದ ಕಥೆಗಳ ಸಂಕಲನಗಳು ಸೇರಿವೆ.