ನಿರಾಶ್ರಿತರ ಹಸಿವು ನೀಗಿಸುತ್ತಿರುವ ಕರಂಬಳ್ಳಿ ವೆಂಕಟರಮಣ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ
ಉಡುಪಿ: ಕೊರೋನ ಮಹಾಮಾರಿಯಿಂದ ಲಾಕ್ಡೌನ್ ಹಿನ್ನಲೆಯಲ್ಲಿ ಉಡುಪಿ ನಗರದಾದ್ಯಂತವಿರುವ ನಿರಾಶ್ರಿತರಿಗೆ ಶಾಸಕರಾದ ಶ್ರೀ ರಘುಪತಿ ಭಟ್ರವರ ಮಾರ್ಗದರ್ಶನದಲ್ಲಿ, ಯಶ್ಪಾಲ್ ಸುವರ್ಣ ಮತ್ತು ಪ್ರವೀಣ್ ಶೆಟ್ಟಿ ಕಪ್ಪೆಟ್ಟು ನೇತೃತ್ವದಲ್ಲಿ ಕರಂಬಳ್ಳಿ ಶ್ರೀವೆಂಕಟರಮಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯಿಂದ ರಾತ್ರಿ ಊಟ ವಿತರಣೆ ಕಳೆದ 4 ದಿನಗಳಿಂದ ನಡೆಯುತ್ತಿದೆ.
4 ನೇ ದಿನದ ರಾತ್ರಿ ಊಟ ವಿತರಣೆಗೆ ಉದ್ಯಮಿಗಳಾದ ನಿಖಿಲ್ ಬಾಳಿಗ ಮತ್ತು ಶ್ರೀ ಗುರುರಾಜ್ ಎಸ್. ಅಮೀನ್ ದೀಪಬೆಳಗಿಸಿ ಚಾಲನೆ ನೀಡಿದರು.
ಎಪ್ರಿಲ್ 15 ರಿಂದ ಆರಂಭಗೊಂಡು ಇದೀಗ ನಾಲ್ಕು ದಿನಗಳಲ್ಲಿ ನಗರದ ಕರಾವಳಿ ಜಂಕ್ಷನ್, ಸಂತೆಕಟ್ಟೆ, ಬೀಡಿನಗುಡ್ಡೆ, ಮಲ್ಪೆ, ಮೂಡಬೆಟ್ಟು, ನಿಟ್ಟೂರು, ಪರ್ಕಳ, ಮಣಿಪಾಲ, ರಾಜಾಂಗಣ ಪಾರ್ಕಿಂಗ್ ಸಹಿತ ಸುಮಾರು 28 ಕೇಂದ್ರಗಳಲ್ಲಿ ಸುಮಾರು 18,000 ಮಂದಿಗೆ ಊಟವನ್ನು ವಿತರಿಸಲಾಗಿದೆ.
ಇಂದಿನಿಂದ 5500 ಊಟವನ್ನು ಪ್ರತಿದಿನ ವಿತರಿಸಲು ಸಿದ್ಧತೆ ನಡೆಸಿದ್ದು, ಉಡುಪಿ ಪುರಭವನದ ಪಾಕಶಾಲೆಯಲ್ಲಿ ಶ್ರೀ ಪುರುಷೋತ್ತಮ ಶೆಟ್ಟಯವರ ಸಹಕಾರದಿಂದ ಸುರಕ್ಷತಾ ಕ್ರಮಗಳೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಗೊಂಡು ಆಹಾರವನ್ನು ತಯಾರಿಸಿ ವಿತರಿಸಲಾಗುತ್ತಿದ್ದು, ಡಾ. ಜಿ. ಶಂಕರ್, ಅಂಬಲಪಾಡಿ ದೇವಸ್ಥಾನದ ಡಾ ವಿಜಯ ಬಲ್ಲಾಳ್, ಜೆರ್ರಿ ವಿನ್ಸೆಂಟ್ ಡಯಾಸ್, ಡಾ ಕೃಷ್ಣ ಪ್ರಸಾದ್, ದಯಾನಂದ ಕುಂದರ್ ಮೊದಲಾದರು ಸಹಕಾರ ನೀಡುತ್ತಿದ್ದಾರೆ
ಅನ್ನಬ್ರಹ್ಮನ ನಾಡಾದ ಉಡುಪಿಯಲ್ಲಿ ಯಾರು ಹಸಿವಿನಿಂದ ಮಲಗಬಾರದೆಂಬ ಸದುದ್ದೇಶದಿಂದ ಈ ರಾತ್ರಿ ಊಟ ವಿತರಣೆಯನ್ನು ಹಮ್ಮಿಕೊಂಡಿದ್ದು, ಲಾಕ್ಡೌನ್ ಮುಗಿಯವರೆಗೂ ನಿರಂತರವಾಗಿ ಊಟ ವಿತರಣೆಗೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದು, ಹಲವಾರು ದಾನಿಗಳು ಈಗಾಗಲೇ ನಮ್ಮೊಂದಿಗೆ ಸ್ವಯಂಪ್ರೇರಿತಾಗಿ ಸಹಕಾರ ನೀಡುತ್ತಿದ್ದಾರೆ ಎಂದು ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ಹರೀಶ್ರಾಮ್ ಬನ್ನಂಜೆ, ಶ್ರೀಮತಿ ಗೀತಾ ರವಿ ಶೇಟ್, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಶಿಲ್ಪಾ ರವೀಂದ್ರ, ರಾಜೇಂದ್ರ ಪಂದುಬೆಟ್ಟು, ಜೀವನ್ ಹಾಳೆಕಟ್ಟೆ, ಸುಧೀರ್, ರತನ್, ಶ್ರೀಮತಿ ಭಾರತಿ ಭಾಸ್ಕರ್, ವಿಜಯ್ ಶೆಟ್ಟಿ, ದಯಾಶಿನಿ, ನಾಗರಾಜ್, ಶಶಿಧರ್, ಗಣೇಶ್ ಕಪ್ಪೆಟ್ಟು, ಶಿವಕುಮಾರ್, ಮಂಜು ಕೊಳ, ದಿನೇಶ್ ಶೆಟ್ಟಿಗಾರ್, ಅಜಿತ್ ಕೊಡವೂರು, ಸುಭಾಷಿತ್ ನೇತೃತ್ವದಲ್ಲಿ 60 ಸ್ವಯಂಸೇವಕರು ಈ ಯೋಜನೆಯಲ್ಲಿ ಸಕ್ರಿಯವಾಗಿ ಸೇವೆಸಲ್ಲಿಸಿ ಸಹಕರಿಸುತ್ತಿದ್ದಾರೆ.