ನಿರೀಕ್ಷೆ ಮೀರಿದ ವಿದ್ಯುತ್ ಬಿಲ್ ವಸೂಲಿ ವಿಧಾನ ಪರಿಷತ್ ಸದಸ್ಯ ಐವನ್ ರಿಂದ ಗ್ರಾಹಕರ ಸಮಸ್ಯೆ ಆಲಿಕೆ
ಮಂಗಳೂರು: ಲಾಕ್ ಡೌನ್ ನಂತರ ನಿರೀಕ್ಷೆ ಮೀರಿದ ವಿದ್ಯುತ್ ಬಿಲ್ ವಸೂಲು ಮಾಡಿ ವಿದ್ಯುತ್ ಶಾಕ್ ನೀಡಿದ ಗ್ರಾಹಕರಿಗೆ, ಬಿಲ್ಲುಗಳನ್ನು ಪರಿಶೀಲನೆ ನಡೆಸಿದ ನಂತರವೇ ಬಿಲ್ಲು ಪಾವತಿಸಲು ಮೆಸ್ಕಾಂ ಆಡಳಿತ ನಿರ್ದೇಶಕರು ಒಪ್ಪಿಗೆ ಸೂಚಿಸಿದ್ದು, ಪ್ರತಿ ಮೆಸ್ಕಾಂ ಡಿವಿಜನ್ ನಲ್ಲಿ ಅವಹಾಲು ಸ್ವೀಕರಿಸಿ, ಹೆಚ್ಚುವರಿ ಬಿಲ್ಲುಗಳನ್ನು ಪರಿಶೀಲನೆ ಮಾಡಿ ನೀಡುವಂತೆ, ಡೆಸ್ಕ್ ಒಂದನ್ನು ಅಳವಡಿಸಲು ಸೂಚಿಸಲಾಗಿತ್ತು. ಈ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ಪರಿಶೀಲಿಸಲು ಶನಿವಾರ ಅತ್ತಾವರದ ವಿದ್ಯುತ್ ಶಕ್ತಿ ಮಂಡಳಿಯ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರತಿದಿನ ಸುಮಾರು 150 ಅಧಿಕ ಗ್ರಾಹಕರು ಭೇಟಿ ನೀಡುತ್ತಿದ್ದು ಬಿಲ್ಲುಗಳನ್ನು ಸರಿಪಡಿಸಲಾಗುತ್ತದೆ, ಈ ಬಗ್ಗೆ ಅಧಿಕಾರಿಗಳ ಬಳಿ ಚರ್ಚೆ ನಡೆಸಿ ಬಿಲ್ಲುಗಳನ್ನು ಸರಿಪಡಿಸಲು ಒಂದು ವಿಭಾಗವನೇ ಮೀಸಲು ಇಡಲಾಗಿದ್ದು, ಆಡಳಿತ ವ್ಯವಸ್ಥೆಯನ್ನು ಶಾಸಕರು ಪರಿಶೀಲಿಸಿದರು. ಮತ್ತು ಅಧಿಕಾರಿಗಳ ಜೊತೆ ಮಾತನಾಡಿ ಗ್ರಾಹಕರಿಗೆ ತಕ್ಷಣ ಪರಿಹಾರವನ್ನು ಒದಗಿಸಬೇಕೆಂದು ವಿನಂತಿಸಿಕೊಂಡರು.
ಹೆಚ್ಚುವರಿ ವಿದ್ಯುತ್ ಬಿಲ್ ಗಳನ್ನು ವಸೂಲು ಮಾಡುವುದಕ್ಕಿಂತಲೂ ಗ್ರಾಹಕರು ಕಟ್ಟುವ ಪರಿಸ್ಥಿತಿಯಲ್ಲಿ ಇಲ್ಲ ಎಂಬುದನ್ನು ಮೆಸ್ಕಾಂ ಅಧಿಕಾರಿಗಳು ಗಮನದಲ್ಲಿಡಬೇಕೆಂದು ತಿಳಿಸಿದರು