ನಿರ್ಮಿತಿ ಕೇಂದ್ರ ಯೋಜನಾಧಿಕಾರಿ ಅಮಾನತು; ಜನಾಭಿಪ್ರಾಯಕ್ಕೆ ಸಂದ ಜಯ – ಬಜಗೋಳಿ ಕೃಷ್ಣ ಶೆಟ್ಟಿ

Spread the love

ನಿರ್ಮಿತಿ ಕೇಂದ್ರ ಯೋಜನಾಧಿಕಾರಿ ಅಮಾನತು; ಜನಾಭಿಪ್ರಾಯಕ್ಕೆ ಸಂದ ಜಯ – ಬಜಗೋಳಿ ಕೃಷ್ಣ ಶೆಟ್ಟಿ

ಕಾರ್ಕಳ:  ಬೈಲೂರಿನ ಉಮಿಕ್ಕಲ್ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಕಾರ್ಕಳ ತಾಲೂಕಿನ ಜನರ ಧಾರ್ಮಿಕ ಹಾಗೂ ಭಾವನಾತ್ಮಕ ವಿಚಾರಗಳಿಗೆ ದಕ್ಕೆ ತಂದು ನಕಲಿ ಪರಶುರಾಮ ಮೂರ್ತಿಯ ನಿರ್ಮಾಣ ಮಾಡಿದ ಕ್ರಿಸ್ ಆರ್ಟ್ ವರ್ಲ್ಡ್ ರವರ ಮಾಲಕರಾದ ಕೃಷ್ಣ ನಾಯಕ್ ರವರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಕ್ರಿಮಿನಲ್  ಪ್ರಕರಣ ದಾಖಲಾದ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ ಉಡುಪಿಯ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿಯವರನ್ನು ಅಮಾನತ್ತು ಮಾಡಿ ಜಿಲ್ಲಾಧಿಕಾರಿಯವರು ಆದೇಶ ಮಾಡಿರುವುದು ಕಾರ್ಕಳ ತಾಲೂಕಿನ ಜನಾಭಿಪ್ರಾಯಕ್ಕೆ ಸಂದ ಜಯ ಎಂದು ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿಯ ಅದ್ಯಕ್ಶರಾದ ನಲ್ಲೂರು ಕೃಷ್ಣ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

ಕಾರ್ಕಳ ಪರಶುರಾಮ ಸಮಿತಿಯು ಪರಶುರಾಮ ಥೀಮ್ ಪಾರ್ಕ್ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರವಾಗದೆ ಕನ್ನಡ ಮತ್ತು ಸಂಕೃತಿ ಇಲಾಖೆಯಿಂದ ದೇಶ ಭಕ್ತಿ ಗೀತೆಯ ವಿವಿಧ ಸಾಂಸ್ಕ್ರತಿಕ  ಕಾರ್ಯಕ್ರಮಕ್ಕೆ ಸುಮಾರು 1.25 ಕೋಟಿ ಹಣ ಬಿಡುಗಡೆಯಾಗಿರುತ್ತದೆ. ಆದರೆ ಇದನ್ನು ರಾಪ್ ಸಂಗೀತ ಪಾಪ್ ಸಂಗೀತ ಕಾರ್ಯಕ್ರಮಗಳಿಗೆ ಸುಮಾರು 35.00 ಲಕ್ಷ ರೂಪಾಯಿ ಮತ್ತು ವಿದ್ಯುತ್ ಅಲಂಕಾರ ವೆಚ್ಚಗಳಿಗಾಗಿ ಸುಮಾರು 60.00 ಲಕ್ಷ ರೂಪಾಯಿ ಖರ್ಚು ಮಾಡಿ ಕರ್ನಾಟಕ ಸರಕಾರದ ಷರತ್ತುಗಳನ್ನು ಉಲ್ಲಂಘನೆ ಮಾಡಿರುತ್ತಾರೆ ಎಂದು ದಿನಾಂಕ 18- ಜುಲೈ -24 ರಂದು   ಉಡುಪಿಯ ಜಿಲ್ಲಾಧಿಕಾರಿಗಳಿಗೆ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿಯ ವತಿಯಿಂದ ದೂರನ್ನು ನೀಡಿರುತ್ತೇವೆ.

ಈ ಮೇಲಿನ ಎಲ್ಲ ಕಾರಣಗಳಿಂದಾಗಿ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿದ ಕ್ರಿಸ್ ಆರ್ಟ್ ವರ್ಲ್ಡ್ ಮಾಲಕ ಕೃಷ್ಣ ನಾಯಕ ರವರ ವಿರುದ್ದ ಕ್ರಿಮಿನಲ್ ಪ್ರಕರಣ ಹಾಗೂ ಉಡುಪಿ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿಯವರಾದ ಅರುಣ್ ಕುಮಾರ್ ರವರ ಅಮಾನತು ಆಗಿರುವುದು ಸಮಸ್ತ ಕಾರ್ಕಳ ತಾಲೂಕಿನ ಜನಾಭಿಪ್ರಾಯಕ್ಕೆ ಸಂದ ಜಯವಾಗಿರುತ್ತದೆ ಹಾಗೂ ಕಾರ್ಕಳದ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎನ್ನುವುದು ಸಾಬೀತಾಗಿದೆ ಎಂದು ಸಮಿತಿಯ ಅಧ್ಯಕ್ಷರಾದ ಬಜಗೋಳಿ ಕೃಷ್ಣ ಶೆಟ್ಟಿಯವರು ತಿಳಿಸಿರುತ್ತಾರೆ


Spread the love