ನಿಷೇದಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ – ರೂ. 9,500 ದಂಡ
ಮಂಗಳೂರು : ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಸರಬರಾಜು ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದರೂ, ಹಲವಾರು ಉದ್ದಿಮೆದಾರರು, ವ್ಯಾಪಾರಸ್ಥರು, ನಿಷೇಧಿಸಿರುವ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮಾಡುತ್ತಿರುವುದು ಹಾಗೂ ಗ್ರಾಹಕರಿಗೆ ಪ್ಲಾಸ್ಟಿಕ್ ಚೀಲದಲ್ಲಿ ಸಾಮಾಗ್ರಿಗಳನ್ನು ವಿತರಣೆ ಮಾಡುತ್ತಿರುವುದು ಕಂಡು ಬರುತ್ತಿವೆ.
ಈ ಹಿನ್ನಲೆಯಲ್ಲಿ ಮಹಾನಗರಪಾಲಿಕೆ ಅಧಿಕಾರಿಗಳು ಅಕ್ಟೋಬರ್ 16 ರಂದು ಸೆಂಟ್ರಲ್ ಮಾರುಕಟ್ಟೆ, ಗಣಪತಿ ಶಾಲೆ, ರಸ್ತೆ, ಭವಂತಿ ಸ್ಟ್ರೀಟ್ ಮುಂತಾದ ಸ್ಥಳಗಳಲ್ಲಿರುವ ಸುಮಾರು 20ಕ್ಕಿಂತ ಹೆಚ್ಚು ಉದ್ದಿಮೆಗಳಿಗೆ ದಾಳಿ ನಡೆಸಿ ಸುಮಾರು 30ಕೆಜಿ ನಿಷೇದಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿ ರೂ.9500/- ದಂಡ ವಿಧಿಸಿದ್ದಾರೆ.
ಆರೋಗ್ಯ ವಿಭಾಗದ ಪರಿಸರ ಅಭಿಯಂತರರಾದ ಶಬರಿನಾಥ್ ರೈ, ಆರೋಗ್ಯ ನಿರೀಕ್ಷಕರಾದ ಕರುಣಾಕರ್, ಭರತ್ ಕುಮಾರ್, ಯಶವಂತ್ ಕುಮಾರ್, ರಕ್ಷಿತಾ ಮುಂತಾದವರು ದಾಳಿಯಲ್ಲಿ ಭಾಗವಹಿಸಿದ್ದರು.