ನೀರಿನ ಸಂರಕ್ಷಣೆ

Spread the love

ನೀರಿನ ಸಂರಕ್ಷಣೆ

ಪುಸ್ತಕದಿ ದೊರೆತರಿವು
ಮಸ್ತಕದಿ ತಳೆದ ಮಣಿ
ಮಸ್ತಕದಿ ದೊರೆತರಿವು
ತರುತಳೆದ ಪುಷ್ಪ
ಅಂದರೆ ಪುಸ್ತಕದಲ್ಲಿರುವ ವಿಷಯವನ್ನು ಪುಸ್ತಕದಲ್ಲಿ
ಇರಿಸಿಕೊಳ್ಳಬಹುದು, ಬಿಡಬಹುದು, ಆದರೆ ಪುಸ್ತಕದಲ್ಲಿ
ಪಡೆದಜ್ಞಾನವೇ ನಮ್ಮನ್ನುಜವಾಬ್ದಾರಿಯುತರನ್ನಾಗಿಮಾಡಬಹುದು.

ಪ್ರಸ್ತುತಡಿ.ವಿ.ಜಿಯವರ ಈ ಮಾತನ್ನು ಪ್ರತಿಯೊಬ್ಬರೂ ಅರಿತುಕೊಳ್ಳುವ ಸಾಧ್ಯತೆಇಂದು ನಮ್ಮದಾಗಿದೆ.
“ಸಂರಕ್ಷಣೆ” ಎಂಬ ಪದ ಬಿಡಿಸಲು ಹೊರಟಾಗ ಸಹಜವಾಗಿಯೇ ನಮ್ಮ ಮುಂದೆಕಾಣುವ ಪದಗಳು ನಾಶ, ಮಾಲಿನ್ಯವಲ್ಲವೇ? ಹೌದು, ಯಾಕೆಂದರೆ ಈ ಪದಗಳಿದ್ದರೆ ಮಾತ್ರ ಸಂರಕ್ಷಣೆ ಸಾಧ್ಯ. ನಮ್ಮ ಭಾರತ ಭೂಮಿಯಲ್ಲಿರುವಷ್ಟು ನೈಸರ್ಗಿಕ ಸಂಪನ್ಮೂಲಗಳು ಹೆಚ್ಚಿನಂಶ ಬೇರೆಯಾವ ಭಾಗದಲ್ಲೂಇರಲು ಸಾಧ್ಯವಿಲ್ಲ. ಆದರೆ, ಒಂದುದುರAತದ ವಿಷಯವೆಂದರೆ ನಾವು ಈ ಸಂಪನ್ಮೂಲಗಳನ್ನು ಸರಿಯಾಗಿ ಬೆಳಸುತ್ತಿದ್ದೇವೆಯೇ? ಇಲ್ಲಒಂದು ವೇಳೆ ನಾವು ಹಾಗೆ ಬಳಸಿಕೊಂಡಿದ್ದರೆ, ಇಂದು ನಮ್ಮದೇಶಅಮೇರಿಕಾದಂತಹ ಶ್ರೀಮಂತ ರಾಷ್ಟçಗಳ ಸಾಲಿಗೆ ಸೇರುತ್ತಿತ್ತು. ಕೇವಲ ಪೆಟ್ರೋಲ್ ಸಿಗುವ ಮರುಭೂಮಿಯಂತಹಕೊಲ್ಲಿ ರಾಷ್ಟçಗಳು ನೀರನ್ನು ಹಣಕೊಟ್ಟು ಪಡೆದುಕೊಂಡರೂ, ಪ್ರಗತಿ ಸಾಧಿಸಿದೆ ಎಂದು ನಾವು ಒಪ್ಪಲೇ ಬೇಕು. “ಕೂತುತಿಂದರೆಕುಡಿಕೆಹೊನ್ನು ಸಾಲದು” ಎಂಬAತೆ ನಮ್ಮಲ್ಲಿ ಸಮೃದ್ಧವಾದ ನೀರಿನಆಸರೆಇದ್ದರೂ, ನಮ್ಮ ಸೋಮಾರಿತನ, ಬೇಜವಾಬ್ದಾರಿತನದಿಂದ ನಾವಿಂದುಅದನ್ನು ಪೋಲು ಮಾಡುತ್ತಿದ್ದೇವೆ. ಹೀಗೆಯೇಆದರೆ ಮುಂದೊAದು ದಿನ ನಾವು ಪ್ಲಾಸ್ಟಿಕ್ ಬಾಟ್ಲಿಯಲ್ಲಿ ತುಂಬಿಸಿಟ್ಟ ನೀರನ್ನು ಹಣಕ್ಕೆ ಪಡೆಯುವ ಕಾಲವೂ.

ಈ ಭೂಮಿಯಲ್ಲಿದ್ದ ಪ್ರತಿಯೊಂದುಜೀವರಾಣಿ, ಗಿಡಮರಗಳು ಹಾಗೂ ಮನುಷ್ಯರಿಗೆ ನೀರುದೊರಕುವುದುಆಕಾಶದಿಂದ ಬಿದ್ದ ಮಳೆಯಿಂದ, ಮುಖ್ಯವಾಗಿ ನಾವು ಅಲ್ಲಲ್ಲಿ ಮರಗಿಡಗಳನ್ನು ನೆಡುವ ಮೂಲಕ ಮಳೆ ಬರುವಂತೆ ಪ್ರಕೃತಿಯನ್ನುರಕ್ಷಿಸಬಹುದು. ನಮಗೆ ಬೀಸಿಗೆ ಕಾಲ,ಮಳೆಗಾಲ ಮತ್ತು ಚಳಿಗಾಲ ಇದ್ದರೂ, ನಾವು ಬೇಸಿಗೆಕಾಲ ಮತ್ತು ಚಳಿಗಾಲದಲ್ಲಿ ಎಷ್ಟು ಮಂದಿ ನೀರಿಗೋಸ್ಕರಚಡಪಡಿಸುತ್ತಾರೆ. ಮತ್ತು ಜಗಳ ಮಾಡುತ್ತಾರೆಆದರೆ ಈ ಸಮಾಜದಜನರಿಗೆ ಹೇಗೆ ಅರಿವನ್ನು ಮೂಡಿಸಬಹುದು.

ಮೊದಲನೆಯದಾಗಿ ಕಾಲಕಾಲಕ್ಕೆ ಬರುವ ಮಳೆಯ ನೀರನ್ನು ಇಂಗಿಸಬೇಕು ನೆಲದ ಮೇಲೆ ಬಿದ್ದ ಮಳೆಯ ನೀರು ಸಮುದ್ರ ಪಾಲಾಗುವ ಮುಂಚೆ ತಡೆಗಟ್ಟಬೇಕು. ಹೇಗೆಂದರೆಅಲ್ಲಲ್ಲಿ ಗುಂಡಿಗಳನ್ನು ಅಗೆದುಅದರಲ್ಲಿ ಹಂಚಿನತುAಡು ಮತ್ತುಇದ್ದಿಲ್ಲನ್ನು ಹಾಕಿ ನಂತರ ಮಳೆಯ ನೀರುಅದರಲ್ಲಿ ಬೀಳುವಂತೆ ಮಾಡಬೇಕು, ಇದನ್ನು ಇಂಗಿಸುವುಕೆ ಎಂದುಕರೆಯುತ್ತಾರೆ.

ಎರಡನೆಯದಾಗಿ, ಮಳೆಕೊಯ್ಲಿನ ಮೂಲಕ ಎಲ್ಲರೂತಮ್ಮ ಅಳಿಲ ಸೇವೆ ನೀಡಬಹುದು. ಹೆಚ್ಚು ಖರ್ಚಿಲ್ಲದೆ ಸರಳ ವಿಧಾನದಲ್ಲಿ ಮಳೆಕೊಯ್ಲು ಮಾಡಬಹುದು. ಆಕಾಶದಿಂದ ಬೀಳುವ ಶುದ್ಧ ಮಳೆ ನೀರು, ಸುಮ್ಮನೆ ಹರಿದುಚರಂಡಿ ಸೇರಿ, ಮುಂದೆ ಕೊಳಚೆ ನೀರಾಗಿಎಲ್ಲೋ ವ್ಯರ್ಥವಾಗಿ ಹೋಗುತ್ತದೆ. ಅದರ ಬದಲಿಗೆ ಮಳೆಯ ನೀರನ್ನು ಹಿಡಿದಿಟ್ಟು ಬಳಕೆ ಮಾಡುವುದು ಮಳೆಕೊಯ್ಲಿನ ಹಿಂದಿರುವ ಸಿದ್ದಾಂತ.

ನಮ್ಮ ಮನೆ ತಾರಸಿ ಅಥವಾ ಹಂಚಿನಲ್ಲಿ ಬಿದ್ದ ಮಳೆಯ ನೀರನ್ನು ಪಿವಿಸಿ ಪೈಪುಗಳನ್ನು ಜೋಡಿಸಿ ಅದರ ಮುಖಾಂತರ ನೆಲದಅಡಿಯಲ್ಲಿಇದ್ದತೊಟ್ಟಿಅಥವಾ ಸಂಪಿನೊಳಗೆ ಸಂಗ್ರಹ ಮಾಡಬೇಕು. ಅಥವಾ ಮಳೆಯ ನೀರನ್ನು ಶುದ್ಧೀಕರಿಸಿ ಬಾವಿಗೆ ಬೀಳುವಂತೆ ನೋಡಿಕೊಳ್ಳಬೇಕು. ಈ ಮಳೆಗಾಲದಲ್ಲಿ ಸಂಗ್ರಹ ಮಾಡಿದ ನೀರುಇಡೀ ವರ್ಷಉಪಯೋಗಕ್ಕೆ ಬರುವುದು. ಈ ವಿಧಾನವನ್ನು ಪ್ರತಿಯೊಬ್ಬರು ಪಾಲಿಸಿದರೆ ನಮಗೆ ನೀರಿನ ಸಮಸ್ಯೆ ಎಂದಿಗೂ ಬರಲಾರದು.

ಕೃಷಿ ಪ್ರಧಾನವಾದ ನಮ್ಮ ಭೂಮಿಗೆ ನೀರಿನಆಸರೆ ಬೇಕೆ ಬೇಕು ಹಾಗಾದರೆ ನಾವು ಈ ಜೀವಸೆಲೆಯನ್ನು ಹೇಗೆ ಸಂರಕ್ಷಿಸುವುದು? “ಪ್ರತಿಯೊಂದುಅಪಾಯದ ಹಿಂದೆಒAದುಉಪಾಯವಿರುವುದು” ಎಂಬAತೆಇದಕ್ಕೂ ದಾರಿಗಳಿವೆ. ಮೊದಲನೆಯದಾಗಿ ಮಕ್ಕಳಾದ ನಾವು ಏನು ಮಾಡಬಹುದು? ಮನೆಯಲ್ಲಿ ನಳ್ಳಿಯನ್ನು ತೆರೆದು ನೀರನ್ನು ಹರಿಯಬಿಟ್ಟು ಹಲ್ಲುಜ್ಜುವುದನ್ನುತಟ್ಟೆಯಲ್ಲಿತೆಗೆದುಕೊಂಡು ಬಳಸಬಹುದು.

ನಮಗೆ ಬಾಯಾರಿಕೆಯಾದಾಗ ನಮಗೆ ಬೇಕಾದಷ್ಟು ನೀರನ್ನುಕುಡಿಯಬೇಕು. ವಾಹನಗಳನ್ನು, ಪ್ರಾಣಿಗಳನ್ನು ಹಾಗೂ ಪಾತ್ರೆ ತೊಳೆಯುವಾಗ ಉಪಯೋಗವಾಗುವಷ್ಟೇ ನೀರನ್ನು ಬಳಸಿ ಕಲುಶಿತಗೊಂಡ ನೀರನ್ನು ಹೂವಿನ ಗಿಡಗಳಿಗೆ ಹಾಕಬೇಕು. ನಾವು ದಾರಿಯಲ್ಲಿ ಹೋಗುತ್ತಿರುವಾಗಯಾವುದಾದರು ಬೀದಿನಳ್ಳಿಯಿಂದ ನೀರು ಸೋರುತ್ತಿದ್ದರೆಕೂಡಲೇಅದನ್ನು ನಿಲ್ಲಿಸಬೇಕು. ಹಾಗೆಯೇ ನೀರಿನ ಕೊಳವೆ ನಳ್ಳಿ ನೀರು ಪೋಲಾಗುತ್ತಿದ್ದರೆ ಹಿರಿಯರಿಗೆ ತಿಳಿಸಬೇಕು. ಈ ಎಲ್ಲಾ ವಿಧಾನಗಳನ್ನು ಅನುಸರಿಸುವ ಮೂಲಕ ನಾವು ನಮ್ಮ ಮುಖ್ಯ ಮೂಲಭೂತ ಸಂಪನ್ಮೂಲವಾದ ನೀರನ್ನು ಸಂರಕ್ಷಿಸಬಹುದು.

ಇಂದಿನ ಮಕ್ಕಳೇ ಮುಂದಿನ ಜನಾಂಗ ವೆಮ್ಬಂತೆ ಈ ಕಾರ್ಯ ನಿಮ್ಮಿಂದಲೇಆರAಭಾವಾಗಬೇಕುಅದಕ್ಕಾಗಿ ಸ್ನೇಹಿತರೇ ನಮ್ಮ ಅಳಿಲ ಸೇವೆಯನ್ನುಕೊಡಲು ನಾವೂ ನೀವೂ ಸಿದ್ದರಾಗೋಣವೇ ಸ್ವಾಮಿ ವಿವೇಕಾನಂದರು ಹೇಳಿರುವಂತೆ “ಸಾವಿರ ಮೈಲಿಯ ಪ್ರಯಾಣ ಪ್ರಾರಂಭವಾಗುವುದುಒAದು ಪುಟ್ಟ ಹೆಜ್ಜೆಯಿಂದಎAಬAತೆ ಸಾವಿರ ಸಾವಿರ ದಿನಗಳ ನಮ್ಮಜೀವನವನ್ನು ಹಸನಾಗಿಸಲು ನಮ್ಮ ಪುಟ್ಟ ಪ್ರಯಕ್ನಕ್ಕೆ ಮುಂದಾಗೊಣವೇ….

 

 

ಬರಹ: ಜೊವೀಟಾ ಫ್ರೆನಿಟಾ ಫೆರಾವೊ ತೊಕ್ಕೊಟ್ಟು


Spread the love