Home Mangalorean News Kannada News ನೀರು ಸರಬರಾಜು ತೊಂದರೆ ಆದಲ್ಲಿ ಟ್ಯಾಂಕರ್ ಮೂಲಕ ನೀರು

ನೀರು ಸರಬರಾಜು ತೊಂದರೆ ಆದಲ್ಲಿ ಟ್ಯಾಂಕರ್ ಮೂಲಕ ನೀರು

Spread the love

ನೀರು ಸರಬರಾಜು ತೊಂದರೆ ಆದಲ್ಲಿ ಟ್ಯಾಂಕರ್ ಮೂಲಕ ನೀರು

ಉಡುಪಿ : ಉಡುಪಿ ನಗರಸಭೆಯ ಕುಡಿಯುವ ನೀರಿನ ಬಗ್ಗೆ ನಗರಸಭಾ ಸದಸ್ಯರುಗಳ ಸಭೆಯು ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಮಾಧವ ಬನ್ನಂಜೆ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ ವಾರ್ಡ್‍ಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿ, ದಿನ ಬಿಟ್ಟು ದಿನ ಕುಡಿಯುವ ನೀರನ್ನು ಪೂರೈಕೆ ಮಾಡುವ ಬಗ್ಗೆ ನಿರ್ಧರಿಸಲಾಯಿತು. ಸಂಬಂಧಪಟ್ಟ ವಾರ್ಡ್‍ಗಳಲ್ಲಿ ಕುಡಿಯುವ ನೀರು ಪೂರೈಕೆ ಆಗುವ ದಿನದಂದು ನೀರು ಸರಬರಾಜು ಆಗದಿದ್ದಲ್ಲಿ ಅದೇ ದಿನ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು.

ತಾವು ಸಂಪರ್ಕಿಸಬೇಕಾದ ಮೊಬೈಲ್ ನಂಬ್ರಗಳು: 8496989248, 8496989166, 8496989184, 8496989122. ಸಹಾಯಕ ಕಾರ್ಯಪಾಲಕ ಅಭಿಯಂತರರು, ಶ್ರೀ ಗಣೇಶ್ –8496989759 ಪರಿಸರ ಅಭಿಯಂತರರು ಶ್ರೀ ಬಿ. ರಾಘವೇಂದ್ರ – 9448507244

ನಗರಸಭೆಯು ಟ್ಯಾಂಕರ್‍ನಲ್ಲಿ ಸರಬರಾಜು ಆಗುವ ನೀರು ನಗರಸಭಾ ವ್ಯಾಪ್ತಿಯ ವಿಪುಲ ನೀರಿನ ಸಂಗ್ರಹವಿರುವ ಹದಿನೈದು ಸರಕಾರಿ ತೆರೆದ ಬಾವಿಗಳನ್ನು ಸ್ವಚ್ಛಗೊಳಿಸಿ, ನೀರಿನ ಅಭಾವವಿರುವ ಪ್ರದೇಶಗಳಿಗೆ ನೀರಿನ ಗುಣಮಟ್ಟವನ್ನು ಪರಿಕ್ಷೀಸಿಯೇ ನೀರನ್ನು ಸರಬರಾಜು ಮಾಡುತ್ತಿದ್ದೇವೆ. ಅನಧಿಕೃತ ನೀರಿನ ಸಂಪರ್ಕ ಕಂಡುಬಂದಲ್ಲಿ, ನೀರನ್ನು ವಾಹನ ತೊಳೆಯಲು, ಕಟ್ಟಡ ಕಟ್ಟಲು, ಮನೆಯ ಅಂಗಳ ತೊಳೆಯಲು, ರಸ್ತೆ ತೊಳೆಯಲು ಉಪಯೋಗಿಸಿದ್ದು ಕಂಡುಬಂದಲ್ಲಿ ಅಂತಹ ನೀರಿನ ಸಂಪರ್ಕವನ್ನು ಕೂಡಲೇ ಕಡಿತಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಉಡುಪಿ ನಗರಸಭಾ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಬಜೆ ಅಣೆಕಟ್ಟಿನಲ್ಲಿ ಸಂಗ್ರಹವಿರುವ ನೀರಿನ ಮಟ್ಟ ತೀರಾ ಕುಸಿದಿರುವುದರಿಂದ ಉಡುಪಿಯ ನಾಗರಿಕರು ನಗರಸಭೆಯೊಂದಿಗೆ ಸಹಕರಿಸಿ, ನೀರನ್ನು ಮಿತವಾಗಿ ಬಳಸಬೇಕಾಗಿ ವಿನಂತಿ.

ಸಭೆಯಲ್ಲಿ ಸ್ಥಾಯೀ ಸಮಿತಿ ಅಧ್ಯಕ್ಷರು ಶೋಭಾ ಸುರೇಶ್, ನಗರಸಭಾ ಸದಸ್ಯರುಗಳಾದ ಡಾ| ಎಂ.ಆರ್. ಪೈ, ದಿನಕರ ಶೆಟ್ಟಿ, ಚಂದ್ರಕಾಂತ ನಾಯಕ್, ಯಶ್‍ಪಾಲ್ ಸುವರ್ಣ, ನಾರಾಯಣ ಪಿ. ಕುಂದರ್, ಶ್ಯಾಮ್‍ಪ್ರಸಾದ್ ಕುಡ್ವ, ಆರ್.ಕೆ. ರಮೇಶ್, ಹರೀಶ್‍ರಾಮ್, ಸೆಲಿನ್ ಕರ್ಕಡ, ಶಾಂತರಾಮ್ ಸಾಲ್ವಂಕರ್, ಜನಾರ್ಧನ ಭಂಡಾರ್ಕರ್ ಉಪಸ್ಥಿತರಿದ್ದು, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಪೌರಾಯುಕ್ತರು ಡಿ. ಮಂಜುನಾಥಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರರು ಗಣೇಶ್, ಪರಿಸರ ಅಭಿಯಂತರರು ರಾಘವೇಂದ್ರ ಉಪಸ್ಥಿತರಿದ್ದರು.


Spread the love

Exit mobile version