ನೀವು ಕರೆ ಮಾಡಿದ ಬಿಎಸ್ ಎನ್ ಎಲ್ ನಾಪತ್ತೆಯಾಗಿದೆ! ದೂರು ನೀಡಿದರೂ ಸ್ಪಂದಿಸದೆ ದೂರವಾಣಿ ಸಂಸ್ಥೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರಕಾರ ಸ್ವಾಮ್ಯದ ಬಿ ಎಸ್ ಎನ್ ಎಲ್ ಅಂತರ್ಜಾಲದ ಸಮಸ್ಯೆಯಿಂದಾಗಿ ಮಾಧ್ಯಮ ಸಂಸ್ಥೆಯೊಂದು ಕಳೆದ ಮೂರು ದಿನಗಳಿಂದ ಯಾವುದೇ ರೀತಿಯ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗದೆ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ.
ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದರೂ ಕೂಡ ಅದಕ್ಕೆ ಸೂಕ್ತ ಸ್ಪಂದನೆ ನೀಡದಿರುವುದು ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರ ವ್ಯವಸ್ಥೆಯನ್ನು ಎತ್ತಿ ತೋರಿಸುತ್ತಿದೆ.
ನಗರದ ಹೆಸರಾಂತ ಮಾಧ್ಯಮ ಸಂಸ್ಥೆಯೊಂದರ ಬಿಎಸ್ ಎನ್ ಎಲ್ ದೂರವಾಣಿ ಫೆಬ್ರವರಿ 13 ರಂದು ಕೆಟ್ಟು ಹೋಗಿದ್ದರೂ ಕೂಡ ಅದನ್ನು ಸರಿಪಡಿಸುವ ಕನಿಷ್ಠ ಸೌಜನ್ಯ ತೋರದೆ ಉಡಾಫೆ ವರ್ತನೆ ತೋರಿಸುತ್ತಿದ್ದು ಇದರಿಂದ ಸರಕಾರಿ ಸ್ವಾಮ್ಯದ ವ್ಯವಸ್ಥೆಯಿಂದ ಜನರು ದೂರ ಹೋಗುವಂತಹ ಪರಿಸ್ಥಿತಿ ಉಂಟಾಗಿದೆ.
ಫೆಬ್ರವರಿ 13 ರಂದು ದೂರವಾಣಿ ಕೆಟ್ಟು ಹೋಗಿದ್ದು ಈ ಬಗ್ಗೆ ಸಂಬಧಿಸಿದ ಅಧಿಕಾರಿಗಳಿಗೆ ದೂರು ನೀಡಿಲು ಕಚೇರಿಗೆ ಪೋನಾಯಿಸಿದರೆ ಕನಿಷ್ಠ ಅಲ್ಲಿ ದೂರವಾಣಿಯನ್ನು ಎತ್ತಲು ಕನಿಷ್ಠ ಸಿಬಂದಿ ಇಲ್ಲದಿರುವುದು, ಹಲವಾರು ಬಾರಿ ಪೋನ್ ಮಾಡಿದ ಬಳಿಕ ಕರೆ ಸ್ವೀಕರಿಸಿ ಅದಕ್ಕೆ ಸೂಕ್ತ ಸ್ಪಂದನೆ ಕೂಡ ನೀಡುವ ಸೌಜನ್ಯತೆಯನ್ನು ಸಿಬಂದಿ ತೋರಿಸಿಲ್ಲ ಎಂದು ದೂರುದಾರರು ಮ್ಯಾಂಗಲೋರಿಯನ್ ಜೊತೆ ದೂರಿಕೊಂಡಿದ್ದಾರೆ.
ಸತತ ದೂರುಗಳ ಬಳಿಕ ಇಲ್ಲಸಲ್ಲದ ಕಾರಣಗಳನ್ನು ನೀಡಿದ್ದಲ್ಲದೆ ಬಳಿಕ ಕೊನೆಗೆ ಫೋನ್ ಶಿಫ್ಟಿಂಗ್ ಮಾಡಿಸಲು ಸಮಯವಕಾಶ ಬೇಕು ಅಲ್ಲಿಯ ತನಕ ಬೇರೆ ದೂರವಾಣಿ ಸಂಖ್ಯೆ ನೀಡುವುದಾಗಿ ಹೇಳಿದ ಬಿಎಸ್ ಎನ್ ಎಲ್ ಸಂಸ್ಥೆ ಬಳಿಕ ಬೇರೆ ದೂರವಾಣಿ ಸಂಖ್ಯೆ ಯನ್ನೂ ಸರಿಯಾಗಿ ನೀಡದೆ ಸತಾಯಿಸಿದೆ. ಒಟ್ಟಾರೆ ಮೂರುದಿನಗಳಿಂದ ಒಂದು ಸರಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಸಂಸ್ಥೆಯನ್ನು ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗದೆ ಇರುವುದು ಒಂದೆಡೆಯಾದರೆ ಇನ್ನೊಂದೆಡೆ ಗ್ರಾಹಕರು ಖಾಸಗಿ ಸಂಸ್ಥೆಗಳತ್ತ ಮುಖ ಮಾಡಲು ನೇರವಾಗಿ ದಾರಿ ಮಾಡಿಕೊಡುವ ಕೆಲಸ ಮಾಡುತ್ತದೆ, ನೆಟ್ವರ್ಕ್ ಸಮಸ್ಯೆಯಿಂದ ಬಳಲುತ್ತಿದ್ದ ಗ್ರಾಹಕರು ಈ ಹಿಂದೆ ಎಚ್ಚರಿಕೆ ನೀಡಿದ್ದರೂ, ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ನೊಂದ ಗ್ರಾಹಕ ಸಂಸ್ಥೆ ಆರೋಪಿಸಿದೆ.