ನೂತನ ಬಿಷಪ್‍ರಿಂದ ಪ್ರಥಮ ಬಾರಿಗೆ ಧೃಡೀಕರಣದ ಸಂಸ್ಕಾರ

Spread the love

ನೂತನ ಬಿಷಪ್‍ರಿಂದ ಪ್ರಥಮ ಬಾರಿಗೆ ಧೃಡೀಕರಣದ ಸಂಸ್ಕಾರ

ಮಂಗಳೂರು: ಪವಿತ್ರ ಧೃಡೀಕರಣವು ನಮಗೆ ಕ್ರಿಸ್ತರ ಅನುಯಾಯಿಗಳಾಗಿ ಬದುಕಲು ಧೈರ್ಯವನ್ನು ನೀಡುತ್ತದೆ; ಕೊಲ್ಕತ್ತದ ತೆರೆಜಾರಂತೆ ದೇವರಿಂದ ಮತ್ತು ಪವಿತ್ರ ಬಲಿಪೂಜೆಯಿಂದ ನಾವು ಸ್ಪೂರ್ತಿ ಪಡೆದು ಕ್ರಿಸ್ತರನ್ನು ಇತರರಿಗೆ ನೀಡಲು ಧೈರ್ಯದಿಂದ ಮುನ್ನಡೆಯಬೇಕು ಎಂದು ಮಂಗಳೂರು ಧರ್ಮಪ್ರಾಂತ್ಯದ ನೂತನ ಭಿಷಪ್ ಅ|ವಂ|ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾರವರು ನೆರೆದವರಿಗೆ ಬೋಧಿಸಿದರು.

ಮಂಗಳೂರು ಧರ್ಮಪ್ರಾಂತ್ಯದ ನೂತನ ಬಿಷಪ್‍ರಾಗಿ ಆಯ್ಕೆಯಾದ ನಂತರ ರೊಜಾರಿಯೊ ಮಹಾದೇವಾಲಯದಲ್ಲಿ ಪ್ರಥಮ ಬಾರಿಗೆ ಧೃಡೀಕರಣದ ಸಂಸ್ಕಾರ ನೀಡುವ ಸಂದರ್ಭದಲ್ಲಿ 31 ಅಭ್ಯರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಪ್ರಧಾನ ಯಾಜಕರಾಗಿ ಬಿಷಪ್ ಮತ್ತು ಸಹ ಭಾಗಿಗಳಾಗಿ ದೇವಾಲಯದ ರೆಕ್ಟರ್ ಅ|ವಂ| ಜೆ.ಬಿ.ಕ್ರಾಸ್ತಾ, ಅ|ವಂ| ಫ್ಲೇವಿಯನ್ ಲೋಬೊ, ಅ|ವಂ| ರೋಕ್ಕಿ ಫೆರ್ನಾಂಡಿಸ್ ಮತ್ತು ಅ|ವಂ| ವಿಕ್ಟರ್ ಡಿಸೋಜರವರು ಬಲಿಪೂಜೆಯನ್ನು ನೆರವೇರಿಸಿದರು.

ಅ|ವಂ| ಜೆ.ಬಿ.ಕ್ರಾಸ್ತಾ, ರೊಜಾರಿಯೊ ದೇವಾಲಯದ 450 ವರ್ಷಗಳ ಸಂಭ್ರಮಾಚರಣೆಯ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮಗಳಲ್ಲಿ ದೃಡೀಕರಣದ ಸಂಸ್ಕಾರವೂ ಒಂದು, ಮುಂಬರುವ ನವಂಬರ್ 15ರಿಂದ 18ರ ತನಕ ನಡೆಯುವ ನಾಲ್ಕು ದಿನಗಳ ಸಂಭ್ರಮಾಚರಣೆಯಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಕರೆ ನೀಡಿ, ನೆರೆದಿರುವ ಎಲ್ಲರಿಗೆ ವಂದಿಸಿದರು.


Spread the love