Home Mangalorean News Kannada News ನೆರೆ: ನಿರಂತರ ನಿಗಾ – ಡಿಸಿ ಸಸಿಕಾಂತ್ ಸೆಂಥಿಲ್  ಸೂಚನೆ

ನೆರೆ: ನಿರಂತರ ನಿಗಾ – ಡಿಸಿ ಸಸಿಕಾಂತ್ ಸೆಂಥಿಲ್  ಸೂಚನೆ

Spread the love
RedditLinkedinYoutubeEmailFacebook MessengerTelegramWhatsapp

ನೆರೆ: ನಿರಂತರ ನಿಗಾ – ಡಿಸಿ ಸಸಿಕಾಂತ್ ಸೆಂಥಿಲ್  ಸೂಚನೆ

ಮಂಗಳೂರು :  ಜಿಲ್ಲೆಯಲ್ಲಿ ಉಂಟಾಗಿರುವ ನೆರೆ – ಪ್ರವಾಹ ಸ್ಥಿತಿ ಮೇಲೆ ಎಲ್ಲಾ ಅಧಿಕಾರಿಗಳು ನಿರಂತರ ನಿಗಾ ವಹಿಸಿ, ಸಾರ್ವಜನಿಕ ಜೀವ ಹಾನಿ ತಪ್ಪಿಸಲು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ.

ಅವರು ಶನಿವಾರ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ಮುಖ್ಯವಾಗಿ ನದೀ ಪಾತ್ರದಲ್ಲಿ ವಾಸಿಸುತ್ತಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಕೆಳ ಪ್ರದೇಶಗಳಿಗೆ ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅವರು ಅಲ್ಲಿಯೇ ಇದ್ದು, ಪರಿಸ್ಥಿತಿಯನ್ನು ಗಮನಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ಗಂಜೀ ಕೇಂದ್ರಗಳಲ್ಲಿ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಬೇಕು. ಉತ್ತಮ ಆಹಾರ, ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕ ಕೋಣೆ, ಕುಡಿಯುವ ನೀರು ಸೇರಿದಂತೆ ಯಾವುದೇ ಕೊರತೆಯಾಗದಂತೆ ಎಲ್ಲಾ ಸೌಲಭ್ಯ ಒದಗಿಸಬೇಕು. ಪ್ರತೀ ಮೂರು ಗಂಟೆಗೊಮ್ಮೆ ಈ ಬಗ್ಗೆ ತನಗೆ ವರದಿ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.

 ಹಾನಿಗೊಂಡಿರುವ ರಸ್ತೆಗಳು, ವಿದ್ಯುತ್ ಕಂಬಗಳ ಬಗ್ಗೆ ಶೀಘ್ರವಾಗಿ ಪರಿಶೀಲನೆ ನಡೆಸಿ ಸಂಪರ್ಕ ಕಲ್ಪಿಸಬೇಕು. ಹಾನಿಯ ಅಂದಾಜು ಮಾಡಿ ತನಗೆ ವರದಿ ನೀಡಲು ಅವರು ತಿಳಿಸಿದರು.

 ಹೆಚ್ಚುವರಿ ಬೋಟುಗಳನ್ನು ಜಿಲ್ಲೆಗೆ ತರಿಸಲಾಗುತ್ತಿದೆ. ಎಲ್ಲಾ ಅಧಿಕಾರಿಗಳು ಸನ್ನದ್ಧ ಸ್ಥಿತಿಯಲ್ಲಿರಲು ಜಿಲ್ಲಾಧಿಕಾರಿಗಳು ಸೂಚಿಸಿದರು.


Spread the love
RedditLinkedinYoutubeEmailFacebook MessengerTelegramWhatsapp

Exit mobile version