ನೆಹರು ಯುವ ಕೇಂದ್ರ ಆಶ್ರಯದಲ್ಲಿ ಫಿಟ್ ಇಂಡಿಯಾ ಸಕ್ಷಮ್ ಸೈಕಲ್ ರ್ಯಾಲಿ
ಮಂಗಳೂರು : “ನಾವು ಸದೃಢರಾದರೆ ದೇಶ ಸದೃಢ” ಉತ್ತಮ ಆರೋಗ್ಯದಿಂದ ಸದೃಢ ಸಮಾಜ ನಿರ್ಮಾಣದ ಪರಿಕಲ್ಪನೆಯ ಮೂಲಕ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ಮುಖೇನ ದೇಶದ ಎಲ್ಲಾ ಭಾಗಗಳಲ್ಲಿ ಫಿಟ್ ಇಂಡಿಯಾ ಕಾರ್ಯಕ್ರಮ ನಡೆಸಲು ಕರೆ ನೀಡಿದ್ದು ಈ ನಿಮಿತ್ತ ದಿನಾಂಕ ಭಾರತ ಸರಕಾರ ನೆಹರು ಯುವ ಕೇಂದ್ರ ಮಂಗಳೂರು, ಭಾರತ್ ಸ್ಕೌಟ್ಸ್ ಆಡ್ ಗೈಡ್ಸ್ ಮತ್ತು ಮಂಗಳೂರು ಸೈಕ್ಲಿಂಗ್ ಕ್ಲಬ್ ಇದರ ಆಶ್ರಯದಲ್ಲಿ “ಫಿಟ್ ಇಂಡಿಯಾ” “ಸಕ್ಷಮ್ ಸೈಕಲ್ ರ್ಯಾಲಿ” ನಡೆಯಿತು ರ್ಯಾಲಿಯನ್ನು ಬೆಳ್ಳಿಗೆ 6.30 ಕ್ಕೆ ಸರಿಯಾಗಿ ಮಂಗಳೂರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ಮಂಗಳೂರು ಸಹಾಯಕ ಆಯುಕ್ತರಾದ ಮದನ್ ರವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಶುಭಹಾರೈಸಿದರು.
ರ್ಯಾಲಿಯು ಪಿ.ವಿ.ಎಸ್, ಹಂಪನಕಟ್ಟೆ, ಆರ್.ಟಿ.ಓ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿ ಮುಕ್ತಾಯವಾಯಿತು. ಜಿಲ್ಲಾ ಯುವ ಸಮನ್ವಯಾಧಿಕಾರಿ ಶ್ರೀ ರಘುವೀರ್ ಸೂಟರ್ ಪೇಟೆ, ಮಂಗಳೂರು ಸೈಕ್ಲಿಂಗ್ ಕ್ಲಬ್ ನ ಅಧ್ಯಕ್ಷರಾದ ಅನಿಲ್ ಶೇಟ್, ನೆಹರು ಯುವ ಕೇಂದ್ರದ ತಾಲೂಕು ಪ್ರತಿನಿಧಿಗಳಾದ ವಿಕಾಸ್, ಕುಮಾರಿ ಸುಶ್ಮಿತ ಹಾಗೂ ಪ್ರೀತೇಶ್ ಉಪಸ್ತಿತರಿದ್ದರು, ರ್ಯಾಲಿಯಲ್ಲಿ 8 ವರ್ಷದ ಬಾಲಕನಿಂದ ಹಿಡಿದು 65 ರ ವಯೋಮಾನದ ಗೋಪಾಲಕೃಷ್ಣ ಬಾಳಿಗ ರವರು ಭಾಗವಹಿಸಿದ್ದರು.