ನೆಹರೂ ಯುವ ಕೇಂದ್ರದಿಂದ ವಿಶ್ವ ಪರಿಸರ ದಿನಾಚಣೆ

Spread the love

ನೆಹರೂ ಯುವ ಕೇಂದ್ರದಿಂದ ವಿಶ್ವ ಪರಿಸರ ದಿನಾಚಣೆ

ಮಂಗಳೂರು : ನೆಹರೂ ಯುವ ಕೇಂದ್ರ ಮಂಗಳೂರು ಯುವ ಕಾರ್ಯ ಹಾಗೂ ಕ್ರೀಡಾ ಸಚಿವರು ಭಾರತ ಸರ್ಕಾರ ಹಾಗೂ ಮಂಗಳೂರು ನಗರ ಪೊಲೀಸ್ ಇವರ ಸಹಯೋಗದೊಂದಿಗೆ ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ನಹರೂ ಯುವಕ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ರಘುವೀರ್ ಸೂಟರ್ಪೇಟೆ ವಾಯು ಮಾಲಿನ್ಯ ತಡೆ ಗಟ್ಟುವ ಸಲುವಾಗಿ ಹೆಚ್ಚಿನ ಗಿಡಗಳನ್ನು ನೆಡುವ ಮೂಲಕ ಅಭಿಯಾನಕ್ಕೆ ಸಹಕರಿಸಿದ ಪೊಲೀಸ್ ಇಲಾಖೆಯು ಪ್ರಾರಂಭಿಸಿದಿ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನಗರದ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೇಲ್ (ಐ.ಪಿ.ಎಸ್.) ವಿಶ್ವ ಪರಿಸರ ದಿನಾಚರಣೆಗೆ ಗಿಡವನ್ನು ನೆಡುವ ಮುಖಾಂತರ ಚಾಲನೆ ನೀಡಿ ಹಾಗೂ ಕಮಿಷನರ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಸಿಗಳನ್ನು ನೆಡುವ ಅಭಿಯಾನಕ್ಕೆ ಚಾಲನೆ ನೀಡಿದರು. ಹಾಗೂ ಉಪ ಆಯುಕ್ತರಾದ ಲಕ್ಷ್ಮೀಗಣೇಶ್ರವರು ಗಿಡ ನೆಡುವ ಮೂಲಕ ಚಾಲನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಜೀತ್ ಮಿಲನ್ ರೋಚ್ರವರು ಸಸಿಗಳನ್ನು ಒದಗಿಸುವ ಮೂಲಕ ಅಭಿಯಾನಕ್ಕೆ ತಮ್ಮ ಬೆಂಬಲವನ್ನು ನೀಡಿದರು.

ಈ ಸಂದರ್ಭದಲ್ಲಿ ಠಾಣಾಧಿಕಾರಿಯಾದ ಆರಾಧ್ಯ ಹಾಗೂ ಸಿಬಂಧಿವರ್ಗ, ನೆಹರು ಯುವಕ ಕೇಂದ್ರದ ಯುವ ಪ್ರತಿನಿಧಿಗಳಾದ ತಿಲಕ್, ಶಿಲ್ಟನ್ ಮತ್ತು ಇತರರು ಭಾಗವಹಿಸದರು.


Spread the love