ನೆಹರೂ ಯುವ ಕೇಂದ್ರದ ವತಿಯಿಂದ ಗಾಂಧಿ ಜಯಂತಿ ಆಚರಣೆ
ಮಂಗಳೂರು : ನೆಹರು ಯುವ ಕೇಂದ್ರ ಮಂಗಳೂರು, ಯುವಕ, ಯುವತಿ ಮತ್ತು ಮಹಿಳಾ ಮಂಡಲ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇವರ ಸಹಯೋಗದೊಂದಿಗೆ ಅಕ್ಟೋಬರ್ 2 ರಂದು 151 ನೇ ಗಾಂಧಿ ಜಯಂತಿ ಕಾರ್ಯಕ್ರಮವನ್ನು ನಗರದ ರವೀಂದ್ರ ಕಲಾ ಭವನ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಜಿಲ್ಲಾ ಯುವ ಸಮನ್ವಯಾಧಿಕಾರಿ, ನೆಹರು ಯುವ ಕೇಂದ್ರ ಮಂಗಳೂರು ರಘುವೀರ್ ಸೂಟರ್‍ಪೇಟೆ ಮಾತನಾಡಿ ಗಾಂಧೀಜಿಯ ತತ್ವ ಸಿದ್ದಾಂತ ಮತ್ತು ಪರಿಕಲ್ಪನೆಯು ಯುವ ಜನರಿಗೆ ಮಾದರಿಯಾಗಬೇಕೆಂದು ತಿಳಿಸಿದರು. ಹಾಗೂ ಮುಂದಿನ 1 ವರ್ಷದವರೆಗೆ ಸ್ವಚ್ಚತಾ ಅಭಿಯಾನ, ಫಿಟ್ ಇಂಡಿಯಾ ಯೂತ್ ಕ್ಲಬ್ ಹಾಗೂ ಇತರ ಫಿಟ್ನೆಸ್ ಕಾರ್ಯಕ್ರಮಗಳು ಮತ್ತು (ಓ.ಇ.P) ರಾಷ್ಟ್ರೀಯ ಶಿಕ್ಷ ನೀತಿ 2020 ವಿಚಾರವಾಗಿ ತಳಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರನ್ನು ತಲುಪುವ ಬಗ್ಗೆ ಕಾರ್ಯಯೋಜನೆಯನ್ನು ಮಾಡಲಾಗಿದೆಯೆಂದು ತಿಳಿಸಿದರು.
ಕಾರ್ಯಕ್ರಮವನ್ನು ಮಹಾಪೌರರಾದ ದಿವಾಕರ್ ಪಾಂಡೇಶ್ವರ ಅವರು ದೀಪ ಪ್ರಜ್ವಲನೆ ಮಾಡುವ ಮುಖಾಂತರ ಉದ್ಘಾಟಿಸಿದರು. ಗಾಂಧೀಜಿಯವರ ಆಶಯದಂತೆ ಗ್ರಾಮ ಸ್ವರಾಜ್ ವ್ಯವಸ್ಥೆಯ ಮಟ್ಟದಲ್ಲಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿಯ ನಿಟ್ಟಿನಲ್ಲಿ ಯುವ ಮಂಡಲಗಳು ಹೆಚ್ಚಿನ ಪಾತ್ರ ವಹಿಸುವಂತೆ ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ನೂತನ ಮಹಾಪೌರರಾದ ಹಾಗೂ ವಿಶ್ವವಿದ್ಯಾನಿಲಯದ ಹಳೇ ವಿದ್ಯಾರ್ಥಿಯಾದ ದಿವಾಕರ ಪಾಂಡೇಶ್ವರರವರಿಗೆ ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರಿಂದ ಸನ್ಮಾನ ಮಾಡಲಾಯಿತು.