ನೇಜಾರು ಕೊಲೆ ಪ್ರಕರಣ: ಹ್ಯುಮಾನಿಟಿ ಫೌಂಡೇಶನ್ ಭೇಟಿ

Spread the love

ನೇಜಾರು ಕೊಲೆ ಪ್ರಕರಣ: ಹ್ಯುಮಾನಿಟಿ ಫೌಂಡೇಶನ್ ಭೇಟಿ

ಉಡುಪಿ: ಇತ್ತೀಚೆಗೆ ಉಡುಪಿಯ ನೇಜಾರಿನಲ್ಲಿ ಕೊಲೆ ಪ್ರಕರಣ ನಡೆದ ಹಿನ್ನೆಲೆಯಲ್ಲಿ ಮೃತ ಐನಾಝ್ ತಂದೆ ನೂರು ಮುಹಮ್ಮದ್ ನಿವಾಸಕ್ಕೆ ಹ್ಯುಮಾನಿಟಿ ಫೌಂಡೇಶನ್ ಮಂಗಳೂರು ಸಂಘಟನೆಯ ಸದಸ್ಯರು ಭೇಟಿ ನೀಡಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ನೂರು ಮುಹಮ್ಮದ್ ಘಟನೆ ನಡೆದು ಹೋಗಿದೆ. ಕೆಟ್ಟವರು ಇದ್ದಾರೆ ಎಂದು ಉಳಿದವರಿಗೆ ಬದುಕು ಬಿಡಲು ಆಗುವುದಿಲ್ಲ. ಅತೀ ಶೀಘ್ರವಾಗಿ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರ ಕ್ರಮ ಶ್ಲ್ಯಾಘನೀಯ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂಬುದು ನನ್ನ ಆಗ್ರಹ ಎಂದು ನುಡಿದರು.

ಈ ಸಂದರ್ಭದಲ್ಲಿ ಹ್ಯುಮಾನಿಟಿ ಫೌಂಡೇಶನ್ ನ ಅಧ್ಯಕ್ಷ ನಾಸೀರ್ ಟಿ.ಎಸ್., ಕಾರ್ಯದರ್ಶಿ ಸೈಫುಲ್ಲಾ, ಕೋಶಾಧಿಕಾರಿ ಇಲ್ಯಾಸ್ ಚಾರ್ಮಾಡಿ, ಉಪಾಧ್ಯಕ್ಷ ಆಸೀಫ್ ಕುತ್ತಾರ್, ಸಂಚಾಲಕರಾದ ಮುಹಮ್ಮದ್ ಹನೀಫ್, ಝಮೀರ್, ಇಸ್ಮಾಯಿಲ್ ಕಾಟುಂಗರೆ, ಪತ್ರಕರ್ತ ಬಶೀರ್ ಕಲ್ಕಟ್ಟ,ಹಮೀದ್ ಉಡುಪಿ,ಸಜನ್ ಉಪಸ್ಥಿತರಿದ್ದರು


Spread the love