Home Mangalorean News Kannada News ನೇಣು ಬಿಗಿದು ಯುವಕ ಆತ್ಮಹತ್ಯೆ

ನೇಣು ಬಿಗಿದು ಯುವಕ ಆತ್ಮಹತ್ಯೆ

Spread the love
RedditLinkedinYoutubeEmailFacebook MessengerTelegramWhatsapp

ನೇಣು ಬಿಗಿದು ಯುವಕ ಆತ್ಮಹತ್ಯೆ

ಪುತ್ತೂರು: 30 ವರ್ಷ ವಯಸ್ಸಿನ ವ್ಯಕ್ತಿಯೋರ್ವರು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಪುತೂರು ಬೊಳುವಾರು ನಿವಾಸಿ ಸುಧೇಶ್ ಕೆ.ಪಿ (30) ಎಂದು ಗುರುತಿಸಲಾಗಿದೆ.

ಮೃತ ವ್ಯಕ್ತಿ ಪುತ್ತೂರಿನಲ್ಲಿ ತರಬೇತಿ ಸಂಸ್ಥೆಯೊಂದನ್ನು ನಡೆಸುತ್ತಿದ್ದು, ಇದರ ಮೂಲಕ ಯುವಕರಿಗೆ ಶೈಕ್ಷಣಿಕ, ಬ್ಯಾಂಕಿಂಗ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದರು. ಅಲ್ಲದೆ ಸ್ಪರ್ದಾತ್ಮಕ ಪರೀಕ್ಷೆಗೆ ಕೂಡ ಹಾಜರಾಗಿದ್ದು, ಹಿಂದಿನ ವರ್ಷ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಂದರ್ಶವನ್ನು ಎದುರಿಸಿದ್ದರು. ವೈಟಿಂಗ್ ಲಿಸ್ಟಿನಲ್ಲಿ ಹೆಸರು ಕೂಡ ಬಂದಿದ್ದು, ರವಿವಾರ ಹಾಸನಕ್ಕೆ ತರಬೇತಿ ನೀಡಲೇಂದು ತೆರಳಿದ್ದ ಅವರು ಸೋಮವಾರ ಮನೆಗೆ ವಾಪಾಸಾಗಿದ್ದರು.

ಮನೆಗೆ ಬಂದು ಬಾಗಿಲು ಹಾಕಿಕೊಂಡಿದ್ದು, ಸಂಜೇಯ ತನಕವೂ ಬಾಗಿಲು ತೆರೆಯದಾಗ ಸಂದೇಹದಿಂದ ತಾಯಿ ಬಾಗಿಲು ಬಡಿದಿದ್ದು, ಪ್ರತಿಕ್ರಿಯೆ ಬಾರದಾಗ ಸ್ಥಳೀಯರನ್ನು ಕರೆದಿದ್ದಾರೆ. ಬಾಗಿಲು ಮುರಿದು ಒಳ ಪ್ರವೇಶಿಸಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
RedditLinkedinYoutubeEmailFacebook MessengerTelegramWhatsapp

Exit mobile version