ನೇತ್ರಾವತಿಯಿಂದ ಕಣ್ಣೂರು ತನಕ ನಾಲ್ಕು ಪಥ ರಸ್ತೆ ನಿರ್ಮಿಸಲಾಗುವುದು: ಶಾಸಕ ಜೆ.ಆರ್.ಲೋಬೊ
ಮಂಗಳೂರು: ನೇತ್ರಾವತಿ ನದಿಯಿಂದ ಕಣ್ಣೂರು ತನಕ ನಾಲ್ಕು ಪಥ ರಸ್ತೆ ನಿರ್ಮಿಸಲು, ಆ ರಸ್ತೆಯಲ್ಲಿ ಜಾಗಿಂಗ್ ಸೌಕಲಿಂಗ್ ಕೂಡಾ ಮಾಡಲು ಅನುಕೂಲವಾಗುವ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಬೆಂಗಳೂರಿನಿಂದ ಆಗಮಿಸಿದ ಅಧಿಕಾರಿಗಳಿಗೆ ಶಾಸಕ ಜೆ.ಆರ್.ಲೋಬೊ ಅವರು ಮಾಹಿತಿ ನೀಡಿದರು.
6 ಕಿ.ಮೀ ಉದ್ದದ ರಸ್ತೆಯಿದಾಗಿದ್ದು ಸುಮಾರು 300 ಎಕ್ರೆ ಪ್ರದೇಶ ಅಂದಾಜಿದೆ. ಇದಕ್ಕೆ ಸರ್ವೆ ಮಾಡಲು ರಾಜ್ಯ ಸರ್ಕಾರ 25 ಲಕ್ಷ ಬಿಡುಗಡೆ ಮಾಡಿದ್ದು ಇದು ಕಾರ್ಯಗತವಾದರೆ ಮಹತ್ವದ ಯೋಜನೆಯಾಗುವುದರಲ್ಲಿ ಅನುಮಾನವಿಲ್ಲ ಎಂದರು.
ಕೆಯುಡಿಯುಫ್ ಸಿ ಅಧಿಕಾರಿ ಅಶೋಕ್ ಭಟ್ ಮಾತನಾಡಿ ಯೋಜನೆ ತೀರಾ ಒಳ್ಳೆಯದಿದ್ದು ಇದನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳೋಣ ಎಂದರು.
ಇದನ್ನು ಮೂಡಾದ ಮೂಲಕ ಟೌನ್ ಫಾನಿಂಗ್ ಯೋಜನೆಯ ರೀತಿ ಮಾಡಬೇಕು. ಇದರೊಂದಿಗೆ ನೇತ್ರಾವತಿ ನದಿ, ಮಂಗಳೂರು ಹಳೆ ಬಂದರು ಮೂಲಕ ಸುಲ್ತಾನ್ ಬತ್ತೇರಿಯಲ್ಲಿ ಸೇತುವೆ ನಿರ್ಮಿಸಿ ಮುಂದೆ ಇದನ್ನು ನವಮಂಗಳೂರು ಬಂದರಿಗೆ ಜೋಡಿಸುವ ಸಾಗಾರ್ ಮಾಲ ರಸ್ತೆಯನ್ನು ಮಾಡಲು ಉದ್ದೇಶಿಸಿದೆ. ಅಲ್ಲದೆ ಕೂಳೂರು ಬಳಿ ಅಂತರ್ ರಾಷ್ಟ್ರೀಯ ಕ್ರೀಡಾ ವಿಲೇಜ್ ನಿರ್ಮಿಸಿ ಅದರಲ್ಲಿ ಎಲ್ಲಾ ರೀತಿಯ ಕ್ರೀಡೆಗಳನ್ನೂ ಆಡಲು ಅನುಕೂಲವಾಗಲಿದೆ ಎಂದು ಶಾಸಕ ಜೆ.ಆರ್.ಲೋಬೊ ಮಾಹಿತಿ ನೀಡಿದರು.
ಅಶೋಕ್ ಭಟ್ ಮತ್ತು ನೆಲ್ಸನ್ ಅವರನ್ನು ಜೆ.ಆರ್.ಲೋಬೊ ಅವರು ಈ ಯೋಜನೆಯನ್ನು ವೀಕ್ಷಣೆ ಮಾಡಲು ದೋಣಿಯಲ್ಲಿ ಕಳುಹಿಸಿದರು.
ಈಗಾಗಲೇ ಈ ಯೋಜನೆಯ ಬಗ್ಗೆ ಅಗತ್ಯವಾದ ಸರ್ವೇ ಕಾರ್ಯ ಮುಗಿದಿದ್ದು ಹೆಚ್ಚಿನ ಸರ್ವೇ ಕೆಲಸವನ್ನು ಒಂದು ತಿಂಗಳಲ್ಲಿ ಮುಗಿಸುವಂತೆ ಶಾಸಕ ಜೆ.ಆರ್.ಲೋಬೊ ತಿಳಿಸಿದರು.
ಸಭೆಯಲ್ಲಿ ಮೂಡಾ ಅಧ್ಯಕ್ಷ ಕೆ.ಸುರೇಶ್ ಬಲ್ಲಾಳ್, ಆಯುಕ್ತ ಶ್ರೀನಾಥ್ ರಾವ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.