ನೈಋತ್ಯ ಪದವೀಧರರ ಕ್ಷೇತ್ರ ಚುನಾವಣೆ : ಡಾ. ಧನಂಜಯ್ ಸರ್ಜಿ ಭರ್ಜರಿ ಗೆಲುವು

Spread the love

ನೈಋತ್ಯ ಪದವೀಧರರ ಕ್ಷೇತ್ರ ಚುನಾವಣೆ : ಡಾ. ಧನಂಜಯ್ ಸರ್ಜಿ ಭರ್ಜರಿ ಗೆಲುವು

ಮೈಸೂರು: ವಿಧಾನಪರಿಷತ್ ಚುನಾವಣೆಯಲ್ಲಿ ಭಾರೀ ಕುತೂಹಲ ಮೂಡಿಸಿರುವ ನೈಋತ್ಯ ಪದವೀಧರರ ಕ್ಷೇತ್ರ ಮತ ಎಣಿಕೆ ಗುರುವಾರ ರಾತ್ರಿ ವೇಳೆ ಮುಗಿದಿದ್ದು, ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ. ಧನಂಜಯ್ ಸರ್ಜಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಒಟ್ಟು 66497 ಮತಗಳು ಚಲಾವಣೆಯಾಗಿದ್ದು ಅದರಲ್ಲಿ 61382 ಮತಗಳು ಸಿಂಧುವಾಗಿದೆ. , ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ. ಧನಂಜಯ್ ಸರ್ಜಿ 37, 627 ಮತಗಳನ್ನು ಪಡೆದು ಒಟ್ಟು 6935 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ನ ಆಯನೂರು ಮಂಜುನಾಥ್ ಕೇವಲ 13516 ಮತಗಳನ್ನು ಪಡೆದರು, ಪಕ್ಷೇತರರಾಗಿ ಸ್ಪರ್ಧಿಸಿದ್ದ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ 7,039 ಮತಗಳನ್ನು ಪಡೆದರೆ ಕಾಂಗ್ರೆಸ್ ನಿಂದ ಬಂಡಾಯವಾಗಿ ಸ್ಪರ್ಧೀಸಿದ್ದ ಎಸ್ ಪಿ ದಿನೇಶ್ 2518 ಮತಗಳನ್ನು ಪಡೆದಿದ್ದಾರೆ.


Spread the love