ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಭೋಜೆಗೌಡರ ಜಯ: ಶಿಕ್ಷಕರ ಜಯ-ಸುಶೀಲ್ ನೊರೊನ್ಹ
ಮಂಗಳೂರು: ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಭೋಜೆಗೌಡರ ಜಯವು ಇದು ಶಿಕ್ಷಕರ ಜಯವಾಗಿದ್ದು ಪಕ್ಷವು ಮೊದಲ ಬಾರಿಗೆ ಹೊಸ ಇತಿಹಾಸವನ್ನು ದಾಖಲಿಸಿದೆ.
ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ಶಿಕ್ಷಕರು 7000 ನೊಂದಾವಣೆ ಮಾಡಿದ್ದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ಶಿಕ್ಷಕರನ್ನು ಬೇಟಿ ಮಾಡುವಾಗ ಶಿಕ್ಷಕರ ಅನೇಕ ಸಮಸ್ಯೆಗಳು ಇದ್ದು ಹಿಂದಿನ ಈ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯವರು ಒಂದು ದಶಕ್ಕೂ ಹೆಚ್ಚಿನ ಅವಧಿಯಲ್ಲಿ ಸಮಸ್ಯೆಗೆ ಸ್ಪಂದನೆ ಮಾಡದಿರುವುದು ಕಂಡು ಬಂದಿದೆ. ಆ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುವೆಂದು ನಾವು ಭರವಸೆಯನ್ನು ಕೊಟ್ಟಿದ್ದೆವು.
ಮುಂದಿನ ದಿನಗಳಲ್ಲಿ ಶಿಕ್ಷಕರ ಎಲ್ಲಾ ಸಮಸ್ಯೆಗಳನ್ನು ನಮ್ಮ ಶಿಕ್ಷಕರ ಕ್ಷೇತ್ರದ ನೂತನ ವಿಧಾನ ಪರಿಷತ್ ಸಧಸ್ಯರಾದ ಭೋಜೆಗೌಡರು ಪರಿಹಾರ ಮಾಡಲಿದ್ದಾರೆ ಈ ಜಯಕ್ಕೆ ಎಲ್ಲಾ ಶಿಕ್ಷಕರ ಅಭೂತಪೂರ್ವ ಬೆಂಬಲ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯಿಂದ ಪ್ರೇರಣಗೊಂಡು ಕಾರ್ಯಕರ್ತರು ವಿಶೇಷ ಹುಮ್ಮನಸಿನಿಂದ ಒಗ್ಗಟ್ಟಾಗಿ ದುಡಿದ ಫಲವೇ ಈ ಗೆಲುವು ಎಂದು ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹರವರು ತಿಳಿಸಿದ್ದಾರೆ