ನೈಲಪಾದೆ ಸೇತುವೆಗೆ ಶಾಸಕ ವಿನಯ್ ಕುಮಾರ್ ಸೊರಕೆ ಶಿಲನ್ಯಾಸ
ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಲೆವೂರುವಿನಿಂದ ನೈಲಪಾದೆ ಸೇತುವೆ ಸುಮಾರು 44.60 ಮೀ. ಉದ್ದದ ರೂ. 256.20 ಲಕ್ಷ, ಮೊತ್ತದ ಸೇತುವೆಗೆ ಬುಧವಾರ ಗುದ್ದಲಿ ಪೂಜೆ ಮತ್ತು ಶಿಲಾನ್ಯಾಸ ನೇರವೇರಿಸಿತು.
ಶಿಲನ್ಯಾಸ ಮತ್ತು ಗುದ್ದಲಿಪೂಜೆಯನ್ನು ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಇತರ ಗಣ್ಯರ ನೇತೃತ್ವದಲ್ಲಿ ನೇರವೇರಿಸಿದರು.
ವಿನಯ್ ಕುಮಾರ್ ಸೊರಕೆಯವರ ವಿಶೇಷ ಪ್ರಯತ್ನದಿಂದ ಕರ್ನಾಟಕ ಸರಕಾರದ, ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ‘ಗಾಂಧೀ ಪಥ ಗ್ರಾಮ ಪಥ’ ಯೋಜನೆಯಡಿ ಸುಮಾರು 44.60 ಮೀ ಉದ್ದದ ಸೇತುವೆಯು ರೂ.256.20 ಲಕ್ಷದಲ್ಲಿ ನಿರ್ಮಾಣವಾಗಲಿದೆ.
ಈ ಸೇತುವೆಯ ಸಂಪರ್ಕ ರಸ್ತೆ ಕಾಮಗಾರಿ ಕೆಲಸ ಇದೇ ಯೋಜನೆಯಡಿ ಸುಮಾರು 2 ಕೋಟಿ ವೆಚ್ಚದಲ್ಲಿ ಆರಂಭವಾಗಿದ್ದು. ಈ ಸೇತುವೆಯ ಕಾಮಗಾರಿಯನ್ನು ಬೈಂದೂರಿನ ಗುತ್ತಿಗೆದಾರ ರಾಜೇಶ್ ಕಾರಂತ ಅವರು ಈ ಕಾಮಗಾರಿಯನ್ನು ನಿರ್ವಹಿಸಲಿದ್ದಾರೆ.
ಶಿಲನ್ಯಾಸ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ರಾಜ್ಯ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಕುಂತಳನಗರ ಚರ್ಚಿನ ಧರ್ಮಗುರು ವಂ. ಡೆನಿಸ್ ಡೆಸಾ, ಅಲೆವೂರು ಗ್ರಾಪಂ. ಅಧ್ಯಕ್ಷ ಶ್ರೀಕಾಂತ್ ನಾಯ್ಕ್, ಮಾಜಿ ಅಧ್ಯಕ್ಷ ಹರೀಶ್ ಕಿಣಿ, ನಾಯಕರುಗಳಾದ ಗೀತಾ ಶೇರಿಗಾರ್, ಸಂಧ್ಯಾ ಶೆಟ್ಟಿ, ಬೇಬಿ ರಾಜೇಶ್, ವಿಜಯಲಕ್ಷ್ಮೀ, ಸತೀಶ್, ಹೇಮಂತ್ ಮತ್ತಿತರರು ಉಪಸ್ಥಿತರಿದ್ದರು.