ನೋಟು ಅಮಾನ್ಯೀಕರಣ ದೇಶದ ಅರ್ಥ ವ್ಯವಸ್ಥೆಗೆ ಮತ್ತು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ; ಉಡುಪಿ ಜಿಲ್ಲಾ ಎನ್.ಎಸ್.ಯು.ಐ
ಉಡುಪಿ: ಕೇಂದ್ರ ಸರ್ಕಾರ 500 ಹಾಗೂ 1000ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಿ ಒಂದು ವರ್ಷ ಕಳೆದರೂ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸದೇ ಇರುವುದನ್ನು ಉಡುಪಿ ಜಿಲ್ಲಾ ಎನ್.ಎಸ್.ಯು.ಐ ತೀವ್ರವಾಗಿ ಖಂಡಿಸುತ್ತದೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಡಿ ಆಲ್ಮೇಡಾ ಅವರು, ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮೊದಲು ವಿದೇಶದಲ್ಲಿರುವ ಕಪ್ಪು ಹಣವನ್ನು ತರುವುದಾಗಿ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಈಡೇರಿಸಲಾಗದೆ, ಜನರ ದಿಕ್ಕನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ರಾತ್ರೋರಾತ್ರಿ ಅಮಾನ್ಯೀಕರಣಗೊಳಿಸಿ, ಜನಸಾಮಾನ್ಯರ ದೈನಂದಿನ ಜೀವನವನ್ನೇ ಹಾಳು ಮಾಡಿದರು.
ನೋಟ್ ಬ್ಯಾನ್ ಮಾಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೇವಲ 53 ದಿನದಲ್ಲಿ ದೇಶದ ಚಿತ್ರಣವನ್ನೇ ಬದಲಿಸುತ್ತೇನೆಂದು ಹೇಳಿದ್ದರು. ಆದರೆ, ನೋಟ್ ಬ್ಯಾನ್ ಮಾಡಿ 365 ದಿನ ಕಳೆದರೂ ಜನರ ಸಂಕಷ್ಟ ದೂರವಾಗಿಲ್ಲ. ಬದಲಿಗೆ ದಿನೇ ದಿನೇ ಜನಸಾಮಾನ್ಯರ ಮೇಲೆ ಗದಾಪ್ರಹಾರವಾಗುತ್ತಿದೆ.
ನೋಟ್ ಬ್ಯಾನ್ನಿದ ಯಾವ ಕಾಳಧನಿಕರೂ ಸೆರೆಯಾಗಿಲ್ಲ. ಆದರೆ, ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡು ನಿರುಧ್ಯೋಗಿಗಳಾಗಿದ್ದಾರೆ. ವರ್ತಕರಿಗೆ ವ್ಯಾಪಾರವಿಲ್ಲದೇ ಮಾರುಕಟ್ಟೆಗಳು ಬಿಕೋ ಎನ್ನುವಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ. ಐಟಿ-ಬಿಟಿಯಂತಹ ಕಂಪೆನಿಗಳಿರಲಿ, ಕೂಲಿಕಾರ್ಮಿಕರೂ ಕೆಲಸವಿಲ್ಲದೆ ಜೀವನ ನಡೆಸಲಾಗದೆ ಸೊರಗುತ್ತಿದ್ದಾರೆ.
ನೋಟ್ ಬ್ಯಾನ್ನಿಂದ ಆದ ಅವಾಂತರಗಳನ್ನೆಲ್ಲಾ ‘ಡಿಜಿಟಲ್ ಇಂಡಿಯಾ ಮಾಡುತ್ತೇವೆ, ಭೃಷ್ಟಾಚಾರ ಮುಕ್ತ ಭಾರತ ಮಾಡುತ್ತೇವೆ’ ಎಂದೆಲ್ಲಾ ಸಮರ್ಥಿಸಿಕೊಳ್ಳುತ್ತಿದ್ದ ಪ್ರಧಾನಿಯವರು ಭೃಷ್ಟಾಚಾರ ಮುಕ್ತ ಭಾರತ ಮಾಡಿಲ್ಲ ಬದಲಿಗೆ ‘ಹಸಿವಿನಿಂದ ನರಳುವ ಜನರನ್ನು ಸೃಷ್ಠಿಸಿದೆ’. ದೇಶದ ಗುಡಿ ಕೈಗಾರಿಕೆಗಳು ನಾಶವಾಗಿದ್ದು, ಅವುಗಳನ್ನೇ ನಂಬಿಕೊಂಡವರು ಬೀದಿಗೆ ಬೀಳುವಂತಾಗಿದೆ. ನೋಟ್ ಬ್ಯಾನ್ ಮಾಡಿದ್ದು ಕಾಳಧನಿಕರನ್ನು ಬಯಲಿಗೆಳೆಯುದಕ್ಕಲ್ಲ, ಬಿಜೆಪಿಗೆ ಚುನಾವಣೆಯಲ್ಲಿ ನೆರವು ನೀಡಿದ ಅಂಬಾನಿ, ಅದಾನಿಯಂತಹ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಠಿಯಿಂದ ಎಂದು ದೇಶದ ಜನತೆಗೆ ಗೊತ್ತಾಗಿದೆ. ಬಿಜೆಪಿಯ ಇಂತಹ ಕೃತ್ಯವನ್ನು ಜನೆತೆ ಎಂದೂ ಕ್ಞಮಿಸುವುದಿಲ್ಲ. ಇವರಿಗೆ ಮುಂದಿನ ಚುನಾವಣೆಗಳಲ್ಲಿ ಜನತೆ ಯಕ್ಕ ಪಾಠ ಕಲಿಸುತ್ತಾರೆ.
ಜನರ ಆರ್ಥಿಕ ಪರಿಸ್ಥಿತಿಯನ್ನು ಅಧೋಗತಿಗೆ ತಳ್ಳಿ, ಜಿಡಿಪಿ ಬೆಳವಣಿಗೆ ಶೇ.2ಕ್ಕೆ ಕುಸಿತ ಕಾಣುವಂತೆ ಮಾಡಿದ ನೋಟ್ ಬ್ಯಾನ್ನ ದಿನವನ್ನು ಎನ್.ಎಸ್.ಯು.ಐ ಕರಾಳದಿನವನ್ನಾಗಿ ಆಚರಿಸುತ್ತಿದೆ. ಇದೇ ಸಂಧರ್ಭದಲ್ಲಿ ಜನರ ಭಾವನೆಗಳ ಜೊತೆಗೆ ನಾಟಕ ಮಾಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಪರಿಷ್ಕರು ಜನತೆಯ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸುತ್ತಿದ್ದೇವೆ. ಕೂಡಲೇ ಕಪ್ಪು ಹಣ ತರಲಾರದೇ ನೋಟ್ ಬ್ಯಾನ್ ಮಾಡಿ ಜನರನ್ನು ಸಂಕಷ್ಟಕ್ಕೀಡು ಮಾಡಿದ್ದರಿಂದಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸುತ್ತಿದ್ದೇವೆ.