ನೋಟು ನಿರ್ಬಂಧದ ಹಿಂದೆ ಸಹಕಾರ ಕ್ಷೇತ್ರವನ್ನು ಬಲಹೀನಗೊಳಿಸುವ ಹುನ್ನಾರ: ಸಚಿವ ಮಹದೇವ ಪ್ರಸಾದ್‌

Spread the love

ನೋಟು ನಿರ್ಬಂಧದ ಹಿಂದೆ ಸಹಕಾರ ಕ್ಷೇತ್ರವನ್ನು ಬಲಹೀನಗೊಳಿಸುವ ಹುನ್ನಾರ: ಸಚಿವ ಮಹದೇವ ಪ್ರಸಾದ್‌

ಮಂಗಳೂರು: ಕೇಂದ್ರ ಸರಕಾರವು 500 ಹಾಗೂ 1000 ರೂ.ಗಳ ನೋಟುಗಳಿಗೆ ನಿರ್ಬಂಧ ಹೇರಿರುವುದರಿಂದ ಸಹಕಾರಿ ಬ್ಯಾಂಕ್‌ ಗಳಲ್ಲಿ ಹಣಕಾಸಿನ ವ್ಯವಹಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಈ ನಿರ್ಧಾರದಲ್ಲಿ ಸಹಕಾರಿ ಕ್ಷೇತ್ರವನ್ನು ಬಲಹೀನಗೊಳಿಸುವ ಹುನ್ನಾರ ಅಡಗಿರುವ ಅನುಮಾನವಿದೆ ಎಂದು ರಾಜ್ಯ ಸಹಕಾರ ಮತ್ತು ಸಕ್ಕರೆ ಸಚಿವ ಎಚ್‌.ಎಸ್‌. ಮಹದೇವ ಪ್ರಸಾದ್‌ ಹೇಳಿದ್ದಾರೆ.

image001samudayadatta-sahakara-jatha-aicw-mangalorean-com-20161118-001 image002samudayadatta-sahakara-jatha-aicw-mangalorean-com-20161118-002 image003samudayadatta-sahakara-jatha-aicw-mangalorean-com-20161118-003 image004samudayadatta-sahakara-jatha-aicw-mangalorean-com-20161118-004 image005samudayadatta-sahakara-jatha-aicw-mangalorean-com-20161118-005 image006samudayadatta-sahakara-jatha-aicw-mangalorean-com-20161118-006 image007samudayadatta-sahakara-jatha-aicw-mangalorean-com-20161118-007 image008samudayadatta-sahakara-jatha-aicw-mangalorean-com-20161118-008 image009samudayadatta-sahakara-jatha-aicw-mangalorean-com-20161118-009 image010samudayadatta-sahakara-jatha-aicw-mangalorean-com-20161118-010 image011samudayadatta-sahakara-jatha-aicw-mangalorean-com-20161118-011 image012samudayadatta-sahakara-jatha-aicw-mangalorean-com-20161118-012 image013samudayadatta-sahakara-jatha-aicw-mangalorean-com-20161118-013 image014samudayadatta-sahakara-jatha-aicw-mangalorean-com-20161118-014 image015samudayadatta-sahakara-jatha-aicw-mangalorean-com-20161118-015 image016samudayadatta-sahakara-jatha-aicw-mangalorean-com-20161118-016 image017samudayadatta-sahakara-jatha-aicw-mangalorean-com-20161118-017 image018samudayadatta-sahakara-jatha-aicw-mangalorean-com-20161118-018 image019samudayadatta-sahakara-jatha-aicw-mangalorean-com-20161118-019 image020samudayadatta-sahakara-jatha-aicw-mangalorean-com-20161118-020da

ನಗರದ ನೆಹರೂ ಮೈದಾನದ ಫ‌ುಟ್ಬಾಲ್‌ ಗ್ರೌಂಡ್‌ನ‌ಲ್ಲಿ ಶುಕ್ರವಾರ 63ನೆ ಅಖೀಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೇಂದ್ರ ಸರಕಾರವು ಆ ನೋಟುಗಳನ್ನು ಯಾವ ಉದ್ದೇಶದಿಂದ ರದ್ದುಪಡಿಸಿದೆ ಎಂಬ ಬಗ್ಗೆ ಚರ್ಚೆ ಮಾಡುವುದಿಲ್ಲ. ಆದರೆ ಇದರಿಂದಾಗಿ ಸಹಕಾರಿ ಸಂಸ್ಥೆಗಳು ಮಾತ್ರ ಸಂಕಷ್ಟ ಎದುರಿಸುವಂತಾಗಿದೆ. ಸಹಕಾರಿ ಬ್ಯಾಂಕ್‌ ಗಳಲ್ಲಿ ಹಣ ಪಡೆಯಲು ಅಥವಾ ತೆಗೆಯಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಹಕಾರಿ ಬ್ಯಾಂಕ್‌ಗಳ ಮೂಲಕ ರಾಜ್ಯದಲ್ಲಿ 10,400ಕೋ.ರೂ. ಕೃಷಿ ಸಾಲ ಒದಗಿಸಲಾಗಿದೆ. 2,000 ಕೋ.ರೂ. ಈ ಅವಧಿಯಲ್ಲಿ ಜಮಾ ಆಗಬೇಕಿದೆ. ಆದರೆ ಸಾಲ ಪಡೆದವರಿಗೆ ಜಮಾ ಮಾಡಲು ಸಹಕಾರಿ ಬ್ಯಾಂಕ್‌ಗಳ ಮೂಲಕ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕೃಷಿ ಸಾಲವನ್ನು ಕ್ಲಪ್ತ ಸಮಯದಲ್ಲಿ ಪಾವತಿಸದೆ, ಸರಕಾರದಿಂದ ಒದಗಿಸಲಾಗುವ ಬಡ್ಡಿ ವಿನಾಯಿತಿಯ ಸೌಲಭ್ಯವನ್ನು ಪಡೆಯಲಾಗುತ್ತಿಲ್ಲ. ಸಹಕಾರಿ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ಶೇ.25ರಷ್ಟು ಮಂದಿ ಇತರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿಲ್ಲದ ಕಾರಣ ರೈತರು ಸೇರಿದಂತೆ ಸಹಕಾರಿ ಕ್ಷೇತ್ರದಲ್ಲಿರುವವರು ಸಂಕಷ್ಟಕ್ಕೀಡಾಗಿದ್ದಾರೆ ಎಂದವರು ವಿಷಾದಿಸಿದರು. ಸರಕಾರವು ಹಾಲಿನ ಒಕ್ಕೂಟಕ್ಕೆ ನೀಡುತ್ತಿದ್ದ 4 ರೂ. ಪ್ರೋತ್ಸಾಹ ಧನವನ್ನು 5 ರೂ.ಗೆ ಮುಂದಿನ ತಿಂಗಳಿನಿಂದ ಏರಿಕೆ ಮಾಡಿದೆಯಾದರೂ ಅದನ್ನು ಪಾವತಿಸಲಾಗುತ್ತಿಲ್ಲ. 45 ಲಕ್ಷ ಜನ ಡಿಸಿಸಿ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ಬಂಧ ಸಡಿಲಿಕೆಗೆ ಒತ್ತಾಯಿಸಿ ಮುಖ್ಯಮಂತ್ರಿಯವರು ಕೇಂದ್ರದ ವಿತ್ತ ಸಚಿವರಿಗೆ ಸುದೀರ್ಘ‌ ಪತ್ರ ಬರೆದಿದ್ದು, ಕೇಂದ್ರದಿಂದ ಪೂರಕ ಪ್ರಕ್ರಿಯೆ ಯನ್ನು ನಿರೀಕ್ಷಿಸಲಾಗುತ್ತಿದೆ ಎಂದರು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಹಕಾರಿ ಧ್ವಜಾರೋಹಣ ಗೈದರು. ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಶೇಖರ ಗೌಡ ವಿ. ಮಾಲಿ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾಜಿ ಸಚಿವರಾದ ಅಮರನಾಥ ಶೆಟ್ಟಿ ಹಾಗೂ ಮೋಟಮ್ಮ ಅವರಿಗೆ ಉತ್ತಮ ಸಹಕಾರ ಸಂಘಗಳಿಗಾಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್‌ ಸಹಕಾರ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್‌ ಡಿಸೋಜ, ಶಾಸಕ ಮೊಯ್ದಿನ್‌ ಬಾವಾ, ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಹಾಲಪ್ಪ ಬಸಪ್ಪ ಆಚಾರ, ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಲದ ಅಧ್ಯಕ್ಷ ಜಿ.ಪಿ.ಪಾಟೀಲ, ರಾಜ್ಯ ಕೈಗಾರಿಕಾ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಎಸ್‌.ಐ.ಪಾಟೀಲ, ಗೇರು ಅಭಿವೃದಿಟಛಿ ನಿಗಮದ ಅಧ್ಯಕ್ಷ ಬಿ.ಎಚ್‌.ಖಾದರ್‌, ರಾಜ್ಯ ಸಹಕಾರ ಲ್ಯಾಂಪ್ಸ್‌ ಮಹಾಮಂಡಲದ ಅಧ್ಯಕ್ಷ ಕೃಷ್ಣಯ್ಯ, ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್‌ ಹೆಗ್ಡೆ, ದಕ. ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಹರೀಶ್‌ ಆಚಾರ್ಯ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಕಿಶನ್‌ ಹೆಗ್ಡೆ, ಸಹಕಾರ ಇಲಾಖೆಯ ಸಹಕಾರ ಸಂಘಗಳ ನಿಬಂಧಕ ಎಂ.ಕೆ. ಅಯ್ಯಪ್ಪ, ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರು ಮತ್ತಿತರರು ಉಪಸ್ಥಿತರಿದ್ದರು.


Spread the love