ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ಬಂಟ್ವಾಳ: ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಜ್ಪೆ ಠಾಣೆ ಪೊಲೀಸರು ಶನಿವಾರ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಂಜ್ವೇಶ್ವರ ತಾಲೂಕಿನ ಪೈವಳಿಕೆ ಗ್ರಾಮದ ನಿವಾಸಿ ಝುಬೈರ್ (26) ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ ವ್ಯಕ್ತಿ.
ಜುಬೈರ್ ಎಂಬಾತನ ಮೇಲೆ ವಿಟ್ಲ ನ್ಯಾಯಾಲಯದಲ್ಲಿ ವಿಚಾರಣೆಯು ನಡೆಯುತ್ತಿದ್ದು, ಆದರೆ ಆತನು ನ್ಯಾಯಾಲಯಕ್ಕೆ ಹಾಜರಾಗದೇ ಇರುವುದರಿಂದ ಈ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು ಈತನಿಗೆ ವಾರೆಂಟ್ ಹೊರಡಿಸಿ ಹಾಜರುಪಡಿಸುವಂತೆ ಆದೇಶಿಸಿತ್ತು. ಆದರೆ ಈತನು ದಸ್ತಗಿರಿಗೆ ಸಿಗದೇ ತಲೆಮರೆಸಿಕೊಳ್ಳುತ್ತಿದ್ದನು.
ಈ ವಾರೆಂಟ್ ಅಸಾಮಿಯು ಮಂಗಳೂರು ವಿಮಾನ ನಿಲ್ದಾಣದಿಂದ ಬಜಪೆ ಬರುತ್ತಿರುವುದಾಗಿ ಮಾಹಿತಿ ತಿಳಿದ ಬಜಪೆ ಪೊಲೀಸ್ ಠಾಣಾ ಪೊಲೀಸರು ಎಲ್.ಓ.ಸಿ ಮುಖಾಂತರ ದಸ್ತಗಿರಿ ಮಾಡಿರುವುದನ್ನು ವಿಟ್ಲ ಠಾಣಾ ಹೆಚ್.ಸಿ 657 ಗಣೇಶ್ ಹಾಗೂ ಹೆಚ್.ಜಿ 406 ಹರೀಶ ರವರು ಠಾಣೆಗೆ ಕರೆದುಕೊಂಡು ಬಂದಿರುತ್ತಾರೆ. ಆದುದರಿಂದ ಈ ಆರೋಪಿಯು ಹಲವಾರು ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶಗಳನ್ನು ಪಾಲಿಸದೇ ಎಗ್ಗಿಲ್ಲದೇ ನ್ಯಾಯಾಲಯದ ವಿಚಾರಣೆಯ ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಳ್ಳುತ್ತಿದ್ದು ಈತನನ್ನು ಈ ದಿನ ದಿನಾಂಕ: 20-10-2018 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.