ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಉಡುಪಿ: ಉಡುಪಿ ಜಿಲ್ಲಾ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 2005 ,2007 ಮತ್ತು 2008 ನೇ ಇಸವಿಯಲ್ಲಿ ಮನೆ ಕಳವು ಪ್ರಕರಣಗಳಲ್ಲಿ ದಸ್ತಗಿರಿಯಾಗಿ ಬಿಡುಗಡೆಗೊಂಡು ಸುಮಾರು 9 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶಿವಮೊಗ್ಗ ನಿವಾಸಿ ಹೆಚ್ ವೆಂಕಟೇಶ್ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ 2005 ನೇ ಇಸವಿಯಲ್ಲಿ ಕಾರ್ಕಳ ಗ್ರಾಮಾಂತರ ಠಾಣಾ ಸರಹದ್ದಿನ ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಎಂಬಲ್ಲಿ ಸವರಿನ್ ಮರಾಸ್ ರವರ ಮನೆಯಿಂದ ಸುಮಾರು 55000 ರೂ ಮೌಲ್ಯ ಚಿನ್ನಾಭರಣಗಳನ್ನು ಕಳವು ಮಾಡಿದ ದಾಖಲಾದ ಪ್ರಕರಣ( ಅ.ಕ್ರ: 55/2005 ಕಲಂ 454, 457,380 ಐ.ಪಿ.ಸಿ), 2007 ನೇ ಇಸವಿಯಲ್ಲಿ ಕಾರ್ಕಳ ಗ್ರಾಮಾಂತರ ಠಾಣಾ ಸರಹದ್ದಿನ ಮುಂಡ್ಕೂರು ಗ್ರಾಮದ ಕಜೆ ಪೊನ್ನದು ಎಂಬಲ್ಲಿ ಜಿ.ಪಂ.ಕಿ. ಪ್ರಾ.ಶಾಲೆಯಿಂದ ಅಕ್ಕಿ , ಪಾತ್ರೆ, ರೇಡಿಯೋಗಳನ್ನು ಕಳವು ಮಾಡಿದ ಬಗ್ಗೆ ದಾಖಲಾದ ,2008 ನೇ ಇಸವಿಯಲ್ಲಿ ಗ್ರಾಮಾಂತರ ಠಾಣಾ ಸರಹದ್ದಿನ ಮುಂಡ್ಕೂರು ಹಾಗೂ ಬೆಳ್ಮಣ್ ಗ್ರಾಮದಲ್ಲಿ ಸುಮಾರು 25,000 ರೂ ಮೌಲ್ಯದ ಚಿನ್ನಾಭರಣಗಳು ಹಾಗೂ ತಾಮ್ರದ ತಂತಿ ಕಳವು ಪ್ರಕರಣ, 2008ನೇ ಇಸವಿಯಲ್ಲಿ ಕಾರ್ಕಳ ಗ್ರಾಮಾಂತರ ಠಾಣಾ ಸರಹದ್ದಿನ ಮುಂಡ್ಕೂರು ಗ್ರಾಮದ ಪೊಸ್ರಾಲು ಗಾಂದೊಟ್ಟು ಎಂಬಲ್ಲಿ ಶ್ರೀಮತಿ ವಿಜಯರವರ ಮನೆಯಿಂದ ಸುಮಾರು 1,40,000 ರೂ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದು, ಈ ಬಗ್ಗೆ ದಾಖಲಾದ ಪ್ರಕರಣಗಳಲ್ಲಿ ದಸ್ತಗಿರಿಯಾಗಿ ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದು ಮುಂದೆ ನ್ಯಾಯಾಲಯದ ವಿಚಾರಣಾ ಸಮಯ ಸುಮಾರು 9 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಹೆಚ್. ವೆಂಟಕೇಶ್ ( ಎಂಬಾತನ ವಿರುದ್ದ ನ್ಯಾಯಾಲಯವು ಮೇಲಿನ ನಾಲ್ಕೂ ಪ್ರಕರಣಗಳಲ್ಲಿ (LPC Warrant) ಹೊರಡಿಸಿದ್ದು, ಸದ್ರಿ ವಾರಂಟ್ ಆಸಾಮಿಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಡಾ. ಸಂಜೀವ ಪಾಟೀಲ್ ಐಪಿಎಸ್ ಇವರ ನಿರ್ದೇಶನದಂತೆ, ಕಾರ್ಕಳ ವೃತ್ತ ನಿರೀಕ್ಷಕರು ಜಾಯ್.ಅಂತೋನಿ.ಎ ಇವರ ಆದೇಶದಂತೆ ಕಾರ್ಕಳ ಗ್ರಾಮಾಂತರ ಠಾಣಾ ಪಿ.ಎಸ್.ಐ ಪುರುಷೊತ್ತಮ ಮತ್ತು ಅಪರಾಧ ಪತ್ತೆ ದಳದ ಸಿಬ್ಬಂದಿ ಹೆಡ್ ಕಾನ್ಸ್ ಟೇಬಲ್ ರಾಜೇಶ್ ಕುಂಪಲ, ಮಂಜುನಾಥ್, ಕಾನ್ಸ್‌ಟೇಬಲ್ ಪ್ರಶಾಂತ್ ಮಣಿಯಾಣಿ ಇವರು ಶಿವಮೊಗ್ಗದಲ್ಲಿ ದಸ್ತಗಿರಿ ಮಾಡಿ ಕಾರ್ಕಳದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈತನು ಜಿಲ್ಲೆ ಹಾಗೂ ಹೊರಜಿಲ್ಲೆಗಳಲ್ಲಿ ದಾಖಲಾದ ಕಳವು ಪ್ರಕರಣದಲ್ಲಿ ದಸ್ತಗಿರಿಯಾಗಿ ನ್ಯಾಯಾಲಯದಿಂದ ಬಿಡುಗಡೆಗೊಂಡು ತಲೆಮರೆಸಿಕೊಂಡಿರುವುದಾಗಿ ತಿಳಿದುಬಂದಿರುತ್ತದೆ.