ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

Spread the love

ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಬಂಟ್ವಾಲ ತಾಲೂಕು ಮೂಡ ಗ್ರಾಮದ ಮಹಮ್ಮದ್ ಇಕ್ಬಾಲ್ @ ಮಟನ್ ಇಕ್ಬಾಲ್ (32) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಯ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಲಯದಿಂದ ಜಾಮೀನಿನಲ್ಲಿ ಬಿಡುಗಡೆಗೊಂಡು ಕಳೆದ 3 ವರ್ಷಗಳಿಂದಲೂ ಉದ್ದೇಶ ಪೂರ್ವಕವಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.

ನಂತರ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದುದರಿಂದ ಆರೋಪಿಯ ಮೇಲೆ ಮಾನ್ಯ ನ್ಯಾಯಾಲವು ವಾರಂಟ್ ಹೋರಡಿಸಿದ್ದು ಫೆಬ್ರವರಿ 8ರಂದು ಪಿರ್ಯಾದುದಾರರಿಗೆ ಬಂದ ಖಚಿತ ಮಾಹಿಯಂತೆ ಪರ್ಲಿಯಾ ಎಂಬಲ್ಲಿ ಪಿ ಎಸ್ ಐ ರವರು ಪಿಸಿ 2478 ಮಲ್ಲಿಸಾಬ್ ಹಾಗೂ ಬೀಟ್ ಸಿಬ್ಬಂದಿಯಾದ ಪಿಸಿ 307 ಗೋಣಿ ಬಸಪ್ಪ ರವರೊಂದಿಗೆ ಹೋಗಿ ದಸ್ತಗಿರಿ ಮಾಡಿ, ಉದ್ದೇಶಪೂರ್ವಕವಾಗಿ ತಲೆಮರೆಸಿಕೊಂಡು ನ್ಯಾಯಾಲಯಕ್ಕೆ ಹಜರಾಗದೆ ಇದ್ದುದರಿಂದ ಸದ್ರಿ ಆರೋಪಿಯ ಮೇಲೆ ಬಂಟ್ವಾಳ ನಗರ ಠಾಣಾ ಅ.ಕ್ರ: 08/2019 ಕಲಂ: 229(ಎ) ಐಪಿಸಿ ರಂತೆ ಪ್ರಕರಣ ದಾಖಲಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಸದ್ರಿ ಆರೋಪಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿದಿಸಿರುತ್ತದೆ.


Spread the love