Home Mangalorean News Kannada News ನ್ಯೂಜೆರ್ಸಿಯಲ್ಲಿ ಚರ್ಚ್ ಖರೀದಿಸಿ ಕೃಷ್ಣ ದೇಗುಲ ನಿರ್ಮಿಸಿದ ಪುತ್ತಿಗೆ ಸ್ವಾಮೀಜಿ

ನ್ಯೂಜೆರ್ಸಿಯಲ್ಲಿ ಚರ್ಚ್ ಖರೀದಿಸಿ ಕೃಷ್ಣ ದೇಗುಲ ನಿರ್ಮಿಸಿದ ಪುತ್ತಿಗೆ ಸ್ವಾಮೀಜಿ

Spread the love

ನ್ಯೂಜೆರ್ಸಿಯಲ್ಲಿ ಚರ್ಚ್ ಖರೀದಿಸಿ ಕೃಷ್ಣ ದೇಗುಲ ನಿರ್ಮಿಸಿದ ಪುತ್ತಿಗೆ ಸ್ವಾಮೀಜಿ

ಉಡುಪಿ: ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಅಮೆರಿಕದ ನ್ಯೂಜೆರ್ಸಿಯಲ್ಲಿ ಚರ್ಚ್ ವೊಂದನ್ನು ಖರೀದಿಸಿ ಕಡೆಗೋಲು ಕೃಷ್ಣನ ದೇವಸ್ಥಾನವನ್ನು ನಿರ್ಮಿಸಿದ್ದು, ಅದರಲ್ಲಿ ಸಾಲಿಗ್ರಾಮ ಶಿಲೆಯ ಕೃಷ್ಣನ ವಿಗ್ರಹದ ಸ್ಥಾಪನೆಗೆ ಕ್ಷಣಗಣನೆ ಆರಂಭಗೊಂಡಿದೆ.

ಕ್ರೈಸ್ತ ದೇವಾಲಯವೊಂದು ಸುಂದರ​ವಾದ ಹಿಂದೂ ದೇವಾಲ​ಯವಾಗಿರುವುದು ವಿಶ್ವದಲ್ಲೇ ಇದೇ ಮೊದಲು ಎನ್ನಬಹುದು ಎಂದು ಮಠದ ಪ್ರಕಟಣೆ ತಿಳಿಸಿದೆ. ಇಲ್ಲಿ ಹೊಸ ಕಟ್ಟಡಗಳನ್ನು ಕಟ್ಟುವುದಕ್ಕೆ ಭೂಮಿಯ ಲಭ್ಯತೆ ಬಹಳ ಕಡಿಮೆ ಇದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದ ಹಳೆಯ ದೊಡ್ಡದಾದ ಕ್ರೈಸ್ತ ದೇವಾಲಯವನ್ನು ಖರೀದಿಸಿ, ಕಟ್ಟಡಕ್ಕೆ ಯಾವುದೇ ತೊಂದರೆಯಾಗದಂತೆ ಜಾಣ್ಮೆಯಿಂದ ಅದನ್ನೇ ಕೃಷ್ಣನ ದೇವಾಲಯವನ್ನಾಗಿ ಪರಿವರ್ತನೆ ಮಾಡಲಾಗಿದೆ.

ದೇವಾಲಯ ಮತ್ತು ಸುತ್ತಲು ಒಟ್ಟು 4.5 ಎಕರೆ ಭೂಮಿ ಇದ್ದು, 600 ಕಾರುಗಳನ್ನು ಪಾರ್ಕ್ ಮಾಡುವುದಕ್ಕೆ ಅವಕಾಶವಿದೆ. ಬೃಹತ್‌ ದೇವಾಲಯದೊಳಗೆ 1000 ಜನ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ನೆಲಕ್ಕೆ ಹಾಕಿರುವ ಬಿಳಿ ಬಣ್ಣದ ಹಾಸುಗಲ್ಲುಗಳು, ಗೋಡೆಯ ಬಿಳಿಯ ಬಣ್ಣ ಮತ್ತು ಅಲ್ಲಿ ಅಳವಡಿಸಿಲಾದ ದೊಡ್ಡ, ದೊಡ್ಡ ತೂಗುದೀಪಗಳು ಒಳಾಂಗಣವನ್ನು ಆಕರ್ಷಣೀಯವಾಗಿ ಮಾಡಿವೆ. ಕ್ರೈಸ್ತ ದೇವಾಲಯವೊಂದು ಸುಂದರವಾದ ಶ್ರೀ ಕೃಷ್ಣನ ದೇವಾಲಯವಾಗಿ ಪರಿವರ್ತನೆಯಾಗಿರುವ ವಿಸ್ಮಯ ಕಾರ್ಯ ನಡೆದಿರುವುದು ವಿಶ್ವದಲ್ಲೇ ಮೊದಲು ಎನ್ನಬಹುದು.

ಉಡುಪಿಯ ಪುತ್ತಿಗೆ ಮಠದ ಸ್ವಾಮಿಗಳಾದ ಶ್ರೀಶ್ರೀಸುಗುಣೇಂದ್ರತೀರ್ಥರ ಸಂಪೂರ್ಣ ಮಾರ್ಗದರ್ಶನದಲ್ಲಿ ನಡೆದ ಸಿದ್ಧತೆಗಳು ಅಂತಿಮ ಹಂತ ತಲುಪಿದ್ದು ಕರ್ನಾಟಕದ ಕಾರ್ಕಳದಿಂದ ತರಲಾದ ಕಪ್ಪು ಶಿಲೆಯಿಂದ ಪೀಠ ತಯಾರಿಸಲಾಗಿದ್ದು ಅದರ ಮೇಲೆ ’ಬರ್ಮಾತೇಗ’ದ ಮರದಲ್ಲಿ ಶ್ರೀಕೃಷ್ಣನ ಅವತಾರ ಲೀಲೆಯನ್ನು ಬಹುಸುಂದರವಾಗಿ, ಸೂಕ್ಷ್ಮವಾಗಿ ಬೇಲೂರು-ಹಳೆಬೀಡಿನ ಶಿಲ್ಪಕಲೆಯ ಮಾದರಿಯಲ್ಲಿ ಕೆತ್ತಲಾಗಿದೆ. ಮುಂದೆ ವಿಶಾಲವಾದ ಹೆಬ್ಬಾಗಿಲು, 40 ಅಡಿ ಎತ್ತರವಿರುವ ಈ ಗರ್ಭಗುಡಿ ಸಂಪೂರ್ಣ ಮರದಿಂದ ನಿರ್ಮಾಣವಾಗಿರುವುದು ಒಂದು ವಿಶೇಷ.

ಭಾರತದಲ್ಲಿ ಹಾಗು ವಿದೇಶದಲ್ಲಿ ಇಂತಹ ಕೆತ್ತನೆಯ ಗರ್ಭಗುಡಿ ಕಾಣಸಿಗುವುದು ಅಪರೂಪವೆನ್ನಬಹುದು. ಮಧ್ಯದಲ್ಲಿ ಕಂಡು ಬರುವ ತಾಮ್ರದ ಹೊದಿಕೆ ಮತ್ತಷ್ಟು ಆಕರ್ಷಕವಾಗಿದ್ದು ಸ್ವಲ್ಪಮಟ್ಟಿಗೆ ಉಡುಪಿಯ ಬ್ರಹ್ಮರಥವನ್ನು ಹೋಲುವಂತೆ ಕಾಣುತ್ತದೆ. ಸ್ವಾಮೀಜಿಯವರ ಸಂಕಲ್ಪದಂತೆಯೇ ಈ ಗರ್ಭಗುಡಿಯ ವಿನ್ಯಾಸವನ್ನು ಮಾಡಲಾಗಿದೆ.


Spread the love
1 Comment
Inline Feedbacks
View all comments
Truth Seeker
7 years ago

In other words, business of religion continues. Christianity in West is on decline and church buildings are being sold to liquidate whatever is left. On the other hand, Indians are hyperactive with religious activities.

wpDiscuz
Exit mobile version