Home Mangalorean News Kannada News ನ. 23: ಕೂರ್ಮ ಚಿಂತಕರ ಬಳಗ ವತಿಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ವಿಚಾರ ಸಂಕೀರ್ಣ

ನ. 23: ಕೂರ್ಮ ಚಿಂತಕರ ಬಳಗ ವತಿಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ವಿಚಾರ ಸಂಕೀರ್ಣ

Spread the love

ನ. 23: ಕೂರ್ಮ ಚಿಂತಕರ ಬಳಗ ವತಿಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ವಿಚಾರ ಸಂಕೀರ್ಣ

ಉಡುಪಿ : “ಕೂರ್ಮ” ಚಿಂತಕರ ಬಳಗ ಉಡುಪಿ ಆಯೋಜಿಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತಾದ ವಿಚಾರ ಸಂಕಿರಣವು ಭಾನುವಾರ ಬೆಳಿಗ್ಗೆ 9. 00 ಗಂಟೆಗೆ ಹೋಟೆಲ್ ಕಿದಿಯೂರ್ ಇದರ ಪವನ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಯಾರಿಗೆ ಎಲ್ಲಿ ಎಷ್ಟು..? ಎಂಬ ವಿಷಯದ ಮೇಲೆ ವಿಚಾರ ಸಂಕಿರಣ ನಡೆಯಲಿದ್ದು ಇದರಲ್ಲಿ ಖ್ಯಾತ ಲೇಖಕರಾದ ಪತ್ರಕರ್ತ ಸಂತೋಷ್ ತಮ್ಮಯ್ಯ ಪ್ರಗತಿಪರ ಚಿಂತಕ ಹರ್ಷಕುಮಾರ್ ಕುಗ್ವೆ ಮತ್ತು ಲೇಖಕ ಡಾ. ಸಂತೋಷ್ ಕುಮಾರ್ ಶೆಟ್ಟಿ ಇವರು ತಮ್ಮ ವಿಷಯ ಮಂಡಿಸಲಿದ್ದಾರೆ ಕಾರ್ಯಕ್ರಮದಲ್ಲಿ ಸಂವಹನಕಾರರಾಗಿ ಶ್ರೀರಾಜ್ ಗುಡಿ ಅವರು ಭಾಗವಹಿಸಲಿದ್ದಾರೆ.

ವಿವಿಧ ಚಿಂತನೆಗಳುಳ್ಳ ಸಂಪನ್ಮೂಲ ವ್ಯಕ್ತಿಗಳನ್ನು ಒಂದೇ ವೇದಿಕೆಗೆ ಕರೆದು ಸಂವಾದ ನಡೆಸುವ ಉದ್ದೇಶದಿಂದ “ಕೂರ್ಮ” ಬಳಗವನ್ನು ಆರಂಭಿಸಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಚಾರಗಳ ಬಗ್ಗೆ ಕಾರ್ಯಕ್ರಮ ಆಯೋಜಿಸಲಿದ್ದೇವೆ.

ಸಾಹಿತ್ಯ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಬೇಕು ಎಂದು ಕೂರ್ಮ ಬಳಗದ ಸದಸ್ಯರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರು  ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.


Spread the love

Exit mobile version