ಪಂಚಮಿ ಟ್ರಸ್ಟ್(ರಿ.) ಉಡುಪಿ ಬೆಳ್ಳಿಹಬ್ಬದ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ
ಉಡುಪಿ: ಪಂಚಮಿ ಟ್ರಸ್ಟ್(ರಿ.) ಉಡುಪಿ ಕಳೆದ 25ವರ್ಷಗಳಿಂದ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇದೇ ಬರುವ ಮೇ 5, 2025ರಂದು ಬೆಳ್ಳಿಹಬ್ಬವನ್ನು ಆಚರಿಸುತ್ತಿದೆ.
ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು.
ಪಂಚಮಿ ಟ್ರಸ್ಟ್(ರಿ.) ಉಡುಪಿ ಇದರ ಟ್ರಸ್ಟಿಗಳಾದ ಎಂ. ಹರಿಶ್ಚಂದ್ರ, ಲಕ್ಷ್ಮೀ ಹಾಗೂ ಪಂಚಮಿ ಉಪಸ್ಥಿತರಿದರು.