Home Mangalorean News Kannada News ಪಂಚರಾಜ್ಯ ಚುನಾವಣಾ ಫಲಿತಾಂಶ ಮೋದಿಗೆ ಎಚ್ಚರಿಕೆ – ಪೇಜಾವರ ಸ್ವಾಮೀಜಿ

ಪಂಚರಾಜ್ಯ ಚುನಾವಣಾ ಫಲಿತಾಂಶ ಮೋದಿಗೆ ಎಚ್ಚರಿಕೆ – ಪೇಜಾವರ ಸ್ವಾಮೀಜಿ

Spread the love

ಪಂಚರಾಜ್ಯ ಚುನಾವಣಾ ಫಲಿತಾಂಶ ಮೋದಿಗೆ ಎಚ್ಚರಿಕೆ – ಪೇಜಾವರ ಸ್ವಾಮೀಜಿ

ಉಡುಪಿ: ಪಂಚರಾಜ್ಯದ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿಯವರಿಗೆ ಎಚ್ಚರಿಕೆಯಾಗಿದೆ. ಪ್ರಧಾನಿ ಮೋದಿ ಆರ್ಥಿಕ ಸುಧಾರಣೆ ಮತ್ತು ರಾಮಮಂದಿರ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಿ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಅವರು ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಒಂದು ವೇಳೆ ಮೋದಿಯವರು ರಾಮ ಮಂದಿರ ನಿರ್ಮಾಣದ ಕುರಿತು ಮನಸ್ಸು ಮಾಡಿದರೆ ಹಿಂದೂ ಮತದಾರರ ಉತ್ಸಾಹವನ್ನು ಹೆಚ್ಚಿಸಬಹುದು ಇದರ ಮೂಲಕ ಮೋದಿಗೆ ಮುಂದಿನ ಚುನಾವಣೆ ಸಹಾಯಕವಾಗಬಹುದು.  ನರೇಂದ್ರ ಮೋದಿಯವರು ಇತರ ಮಿತ್ರ ಪಕ್ಷಗಳ ಜೊತೆ ಉತ್ತಮ ಬಾಂಧವ್ಯವನ್ನು ಹೊಂದುವ ಅಗತ್ಯವಿದೆ. ಸಮಾಜ ವಿಚಾರಧಾರೆಯುಳ್ಳ ಪಕ್ಷಗಳ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರ ವಿರೋಧ ಕಟ್ಟಿಕೊಂಡರೆ ಬಿಜೆಪಿಗೆ ಮುಂದಿನ ದಿನಗಳಲ್ಲಿ ನಷ್ಟವಾಗುವುದು ಖಂಡಿತ. ಚಂದ್ರಬಾಬು ನಾಯ್ಡು ಬಿಜೆಪಿಯನ್ನು ಸೋಲಿಸಲು ಎಲ್ಲಾ ರೀತಿಯಲ್ಲಿ ಪ್ರಯತ್ನ ಆರಂಭಿಸಿದ್ದಾರೆ. ಮೋದಿ ವಾಜಪೇಯಿ ಅವರ ನೀತಿಯನ್ನು ಅನುಸರಿಸಬೇಕು ಎಂದರು.

ಪ್ರಧಾನಿ ಮೋದಿಯವರು ತಮ್ಮ ಅಧಿಕಾರದ ಅವಧಿಯಲ್ಲಿ ಕೆಲವೊಂದು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ ಎನ್ನುವು ಸತ್ಯ. ಆದರೆ ಮೋದಿಯವರ ಮೇಲೆ ಜನರಿಗೆ ಮೊದಲು ಇದ್ದ ನಿರೀಕ್ಷೆ ಈಗ ಇಲ್ಲ. ಜನರು ನೀರಿಕ್ಷೆ ಮಾಡಿದಷ್ಟು ಕೆಲಸ ದೇಶದಲ್ಲಿ ಮೋದಿಯಿಂದ ಆಗಿಲ್ಲ. ನೋಟ್ ಬ್ಯಾನ್ ಫಲ ದೇಶದ ಸಾಮಾನ್ಯ ಜನರಿಗೆ ತಲುಪಿಲ್ಲ ಎಂದರು.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂದಿನ ಪ್ರಧಾನಿ ಅಭ್ಯರ್ಥಿ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸ್ವಾಮೀಜಿಯವರು ದೇಶಕ್ಕೆ ಮೋದಿಯೇ ಮುಂದಿನ ಪ್ರಧಾನಿಯಾಬೇಕು. ಸಿಎಮ್ ಯೋಗಿ ಮೋದಿಯಷ್ಟು ಸಮರ್ಥರಲ್ಲ. ಆದಿತ್ಯನಾಥ್ ರಾಜಕಾರಣಿಯಲ್ಲ ಬದಲಾಗಿ ಅವರು ಸಂತ. ಯೋಗಿ ಪ್ರಸ್ತುತ ಉತ್ತರಪ್ರದೇಶದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.


Spread the love

Exit mobile version