ಪಂಜಿಮೊಗರು ಶಾಲೆಯಲ್ಲಿ ಚಿಣ್ಣರ ಮೇಳ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಂಜಿಮೊಗರುಇಲ್ಲಿ ಮೇ 1ರಿಂದ 4ರವರೆಗೆ ಶಾಲಾ ಮಕ್ಕಳ ಬೇಸಗೆ ರಜಾ ಶಿಬಿರ ಚಿಣ್ಣರ ಮೇಳ ಯಶಸ್ವಿಯಾಗಿ ನಡೆಯಿತು.
ಭಗತ್ ಸಿಂಗ್ ಸ್ಮಾರಕಟ್ರಸ್ಟ್, ಡಿವೈಎಫ್‍ಐ ಪಂಜಿಮೊಗರುಘಟಕವತಿಯಿಂದ ಶಿಬಿರವನ್ನು ಆಯೋಜಿಸಲಾಗಿತ್ತು ಸ್ಥಳೀಯ ಉದ್ಯಮಿ ಕ್ಲೆವರ್‍ಡಿಸೋಜ ಕೂಳೂರು, ಶಿಬಿರವನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿಗಣ್ಯರಾದ ಪಿ.ಸಿ ಸುಕುಮಾರ್ ಮಾಜಿಕಾರ್ಪೊರೇಟರ್‍ದಯಾನಂದ ಶೆಟ್ಟಿ, ಎಸ್.ಎಫ್.ಐ ಮುಖಂಡರಾದ ವಿಕಾಸ್‍ಕುತ್ತಾರ್, ಶಾಲಾ ಶಿಕ್ಷಕಿ ಶ್ರೀಮತಿ ಶೋಭಾ, ಶ್ರೀಮತಿ ಸೌಮ್ಯ , ಡಿವೈಎಫ್‍ಐ ಮುಖಂಡರಾದಚರಣ್ ಶೆಟ್ಟಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ , ಚಿತ್ರಕಲೆ,ಕ್ರಾಫ್ಟ್, ಹಾಡು, ಮಿಮಿಕ್ರಿ,ಪೆನ್ಸಿಲ್‍ಆರ್ಟ್, ಹಾವು-ನಾವು ಹಾವುಗಳ ಪರಿಚಯದ ವಿಶೇಷಕಾರ್ಯಕ್ರಮ,ಗೋಡೆಪತ್ರಿಕೆ, ಪರಿಸರಅದ್ಯಯನ ಮುಂತಾದ ತರಬೇತಿಗಳನ್ನು ನೀಡಲಾಯಿತು
ಸಂಪನ್ಮೂಲ ವ್ಯಕ್ತಿಗಳಾಗಿ ಕಲಾವಿದರಾದ ಜಿ ಕಂದನ್, ಪ್ರೇಮ್‍ನಾಥ್ ಮರ್ಣೆ, ಮೈಮ್‍ರಾಮ್‍ದಾಸ್ , ತಸ್ಲೀಮಾ ರಂಗಸ್ವರೂಪ, ಶ್ರೀಮತಿ ವಿಲ್ಮಾ, ಶ್ರೀಮತಿ ವೀಣಾ, ನಿತಿನ್ ಸುವರ್ಣ, ಉರಗತಜ್ಞರಾದ ಸ್ನೇಕ್‍ಜಾಯ್, ಸ್ನೇಕ್ ಪಾಪು, ಗಂಗೇಶ್ ಬೋಳಾರ್, ಸಂಯೋಜಕರಾದ ಸಂತೋಷ್‍ಡಿಸೋಜ,ಹನುಮಂತ, ವಾಣಿಅರುಣ್, ಶರಣ್‍ದೀಪ್ ಉಪಸ್ಥಿತರಿದ್ದರು.